Advertisement

ಇನ್ನೂ ಬಿಗುವಿನ ಸ್ಥಿತಿ: ಜಹಾಂಗೀರ್‌ಪುರಿಯಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್

11:02 PM Apr 21, 2022 | Team Udayavani |

ಹೊಸದಿಲ್ಲಿ:  ಹೊಸದಿಲ್ಲಿಯ ಜಹಾಂಗೀರ್‌ ಪುರಿಯ ಸೆಕ್ಟರ್‌-3ರಲ್ಲಿ ಬುಧವಾರ, ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್‌ಡಿಎಂಸಿ) ವತಿಯಿಂದ ನಡೆದಿದ್ದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಶುರುವಾದ ಅನಂತರ ಉದ್ಭವವಾಗಿದ್ದ ಉದ್ವಿಗ್ನ ಪರಿಸ್ಥಿತಿ ಆ ಪ್ರಾಂತ್ಯದಲ್ಲಿ ಗುರುವಾರವೂ ಮುಂದುವರಿದಿದೆ.  ಸುಪ್ರೀಂ ಕೋರ್ಟ್‌ ತಡೆಯಾಜ್ಞೆಯಿಂದಾಗಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆದರೆ ಸೆಕ್ಟರ್‌-3ನ್ನು ಯಾರೂ ಹೊರಗಿನವರು ಪ್ರವೇಶಿಸದಂತೆ ಅಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

ಜನರಿಗೆ, ಮಾಧ್ಯಮಗಳಿಗೆ ನಿರ್ಬಂಧ: ಜಹಾಂಗೀರ್‌ ಪುರಿಯ ಸೆಕ್ಟರ್‌-3ರಲ್ಲಿ ಅಘೋಷಿತ ಕರ್ಫ್ಯೂ ವಾತಾವರಣವಿದೆ.  ಈ ಪ್ರಾಂತ್ಯದ ಒಳ ಹೋಗುವ ಹಾಗೂ ಅಲ್ಲಿಂದ ಹೊರಬರುವ ಎಲ್ಲ ದಾರಿಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್‌ ಮಾಡಲಾಗಿದ್ದು ಆ ಪ್ರದೇಶದಲ್ಲಿನ ಜನರಿಗೆ ಹೊರಗಿನ ಸಂಪರ್ಕ ತಪ್ಪಿಸಲಾಗಿದೆ. ಮಾಧ್ಯಮಗಳಿಗೂ ಆ ಪ್ರದೇಶದೊಳಕ್ಕೆ ಕಾಲಿಡಲು ಅವಕಾಶ ನಿರಾಕರಿಸಲಾಗಿದೆ.

ತೆರವಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ :

ಬುಧವಾರ ಆರಂಭವಾಗಿದ್ದ ಜಹಾಂಗೀರ್‌ಪುರಿಯಲ್ಲಿನ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಕುರಿತ ಪ್ರಕರಣದ ವಿಚಾರಣೆ ಗುರುವಾರವೂ ಮುಂದುವರಿಯಿತು. ಈ ಸಂದರ್ಭದಲ್ಲಿ, ಜಹಾಂಗೀರ್‌ ಪುರಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದು, ಕಾರ್ಯಾಚರಣೆ ಕೈಗೊಂಡಿದ್ದ ಎನ್‌ಡಿಎಂಎಸ್‌ಗೆ ನೋಟಿಸ್‌ ಜಾರಿಗೊಳಿಸಿ, ಈ ಕುರಿತಂತೆ ಉತ್ತರ ನೀಡುವಂತೆ ಸೂಚಿಸಿದೆ. ಅಲ್ಲದೆ, ಪ್ರಕರಣದ ಮುಂದಿನ ವಿಚಾರಣೆಯನ್ನು 15 ದಿನಗಳ ನಂತರ ನಡೆಸುವುದಾಗಿ ತಿಳಿಸಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸ್ಪಷ್ಟನೆ :

Advertisement

ಎನ್‌ಡಿಎಂಎಸ್‌ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹನುಮಾನ್‌ ಜಯಂತಿಯಂದು ಹೊರಡಿಸಲಾಗಿದ್ದ ಶೋಭಾ ಮೆರವಣಿ ಗೆಯ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲೇ ಜಹಾಂಗೀರ್‌ ಪುರಿಯ ಸೆಕ್ಟರ್‌- 3ರಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂಬ ಆರೋ­ಪಗಳಿಗೆ ಸ್ಪಷ್ಟನೆ ನೀಡಿದರು. “ಇದೇ ವರ್ಷ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಇಂಥ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಎ. 19ರಂದು ಪುನಃ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next