ಚಿಂಚೋಳಿ: ಮಾಜಿ ಪ್ರಧಾನಿ, ಹಸಿರು ಕ್ರಾಂತಿ ಹರಿಕಾರ ದಿ| ಡಾ|ಬಾಬು ಜಗಜೀವನರಾಮ್ ನಮ್ಮ ದೇಶಕ್ಕೆ ದಕ್ಷ ಮತ್ತು ಪ್ರಾಮಾಣಿಕತೆ ಸೇವೆ ಸಲ್ಲಿಸಿದ್ದಾರೆ. ದೀನ ದಲಿತರ ಮತ್ತು ಬಡವರ ಏಳಿಗೆಗೋಸ್ಕರ ಹಗಲಿರುಳು ದುಡಿದ ಮಹಾನ್ ಧೀಮಂತ ನಾಯಕರು ಎಂದು ಬೆಂಗಳೂರು ಸಿವಿಲ್ ನ್ಯಾಯಾಲಯದ ನಿವೃತ್ತ ನ್ಯಾಯಾ ಧೀಶ ಜಿ.ಕೆ. ಗೋಖಲೆ ಹೇಳಿದರು.
ಪಟ್ಟಣದ ವೀರೇಂದ್ರ ಪಾಟೀಲ ಸ್ಮಾರಕ ಬಳಿ ರವಿವಾರ ತಾಲೂಕು ಮಾದಿಗ ಸಮಾಜ ಏರ್ಪಡಿಸಿದ ಡಾ|ಬಾಬು ಜಗಜೀವನರಾಂರ 111ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಬೂಜಿ ಕೇಂದ್ರ ಸರಕಾರದಲ್ಲಿ ಅನೇಕ ಸಚಿವ ಸ್ಥಾನ ಪಡೆದುಕೊಂಡು ದಕ್ಷ ಆಡಳಿತಗಾರರಾಗಿ, ಪ್ರಾಮಾಣಿಕತೆಯಿಂದ ದುಡಿದಿದ್ದಾರೆ.ಅವರ ಹಸಿರು ಕ್ರಾಂತಿಯಿಂದ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ. ರೈಲ್ವೆ ಮತ್ತು ಕಾರ್ಮಿಕ ಸಚಿವರಾಗಿ ಉತ್ತಮ ಆಡಳಿತ ನೀಡಿದ ಅವರ ಪ್ರಾಮಾಣಿಕತೆ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗಿದೆ ಎಂದರು.
ಕಲಬುರಗಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ|ಮಾರುತಿ ಹೋತಿ ಮರಪಳ್ಳಿ ಬಾಬೂಜಿ ಕುರಿತು ಉಪನ್ಯಾಸ ನೀಡಿದರು. ಶಿವಕುಮಾರ ಕೊಳ್ಳುರ ಪ್ರಾಸ್ತಾವಿಕ ಮಾತನಾಡಿದರು ಮಾಜಿ ಸಚಿವ ಸುನೀಲ ವಲ್ಯಾಪುರೆ, ಸುಶೀಲಾಬಾಯಿ ಕೊರವಿ, ಬಂಜಾರಾ ಸಮಾಜದ ಅಧ್ಯಕ್ಷ ರಾಮಚಂದ್ರ ಜಾಧವ್, ಸಜ್ಜಾದೇ ನಶೀನ್ ಬಡಿದರ್ಗಾ, ಜಗನ್ನಾಥ ಕಟ್ಟಿ, ಬಸವರಾಜ ಮಲಿ, ಮಸ್ತಾನ ಅಲಿ ಪಟ್ಟೇದಾರ, ಪ್ರದೀಪ ಕಟ್ಟಿ, ಜಿಪಂ ಸದಸ್ಯ ಗೌತಮ ಪಾಟೀಲ, ಪುರಸಭೆ ಸದಸ್ಯೆ ನರಸಮ್ಮ ಘಾಟಗೆ, ಲಕ್ಷ್ಮಣ ಆವಂಟಿ, ಶಾಮರಾವ ದೇಗಲಮಡಿ, ಜಗನ್ನಾಥ ಕೊಡಂಪಳ್ಳಿ, ನಾಗಾರ್ಜುನ ಕಟ್ಟಿ ಇನ್ನೀತರ ಮಾದಿಗ ಸಮಾಜದ ಅನೇಕ ಗಣ್ಯರು ಭಾಗವಹಿಸಿದ್ದರು.
ಆಕಾಶ ಕೊಳ್ಳುರ ಸ್ವಾಗತಿಸಿದರು, ಮಹೇಶ ಕಿವಣೋರ ನಿರೂಪಿಸಿದರು, ಕುಪೇಂದ್ರ ಹಸರಗುಂಡಗಿ ವಂದಿಸಿದರು.