Advertisement

ಗಣೇಶ್‍ ಹುಟ್ಟುಹಬ್ಬಕ್ಕೆ ಜಗ್ಗೇಶ್- ಶಿವಣ್ಣ ಏನಂದ್ರು ಗೊತ್ತಾ?

07:46 AM Jul 03, 2020 | Lakshmi GovindaRaj |

ಗುರುವಾರ ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್‍ 40ನೇ ವರ್ಷದ ಹುಟ್ಟುಹಬ್ಬಕ್ಕೆ ಚಂದನವನದ ಬಹುತೇಕ ನಟ, ನಟಿಯರು ಸೇರಿದಂತೆ ನಿರ್ದೇಶಕ-ನಿರ್ಮಾಪಕರೂ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಶಿವಣ್ಣ, ಜಗ್ಗೇಶ್‍, ಸಿಂಪಲ್‌ ಸುನಿ, ಪ್ರೀತಮ್ ಗುಬ್ಬಿ, ರಘುರಾಮ್, ಹಾಸ್ಯ ನಟ ಧರ್ಮಣ್ಣ ಕಡೂರ್, ರವಿಶಂಕರ್ ಗೌಡ ಸೇರಿದಂತೆ ಬಹುತೇಕ ಸಿನಿಮಾಮಂದಿ ಗಣಿಗೆ ಶುಭಾಶಯವನ್ನು ತಿಳಿಸಿದ್ದಾರೆ.

Advertisement

ನಟ ಜಗ್ಗೇಶ್‌ ಕೂಡಾ ಗಣೇಶ್‌ ಜನ್ಮ ದಿನಕ್ಕೆ ಟ್ವೀಟರ್‌ನಲ್ಲಿ “ನಾವಿಬ್ಬರು ನಾಣ್ಯದ ಎರಡುಮುಖ! ಇವನು ಅಡಕಮಾರನಹಳ್ಳಿ ನಾನು ಜಡೆಮಾಯಸಂದ್ರ! ಇಬ್ಬರಿಗು ಪ್ರತಿಭೆಯೇ godfather! ನನ್ನಂತೆ ಇವನಿಗು ಜೋತಿಷ್ಯಾಸ್ತ್ರ  ಇಷ್ಟದ ವಿಷಯ! ನನ್ನಂತೆ ಅಳೆದುತೂಗಿ ಜನಸೇರುತ್ತಾನೆ! ನನ್ನಂತೆ ಮೇಲೆ ನಗು ಒಳಗೆ ಒಬ್ಬನೆ ಜೀವಿಸುತ್ತಾನೆ! ನಮ್ಮಿಬ್ಬರನ್ನು ಅನ್ಯರು ಯಾಮಾರಿಸಲು ಸ್ವಲ್ಪಕಷ್ಟ!ಕಾರಣ ರಸ್ತೆಯಿಂದ ಬಂದವರು! Hpy.bdy

ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೇ ಶಿವಣ್ಣ ಕೂಡಾ “ಹುಟ್ಟು ಹಬ್ಬದ ಶುಭಾಶಯಗಳು ಗಣೇಶ..ದೇವರು ನಿಮಗೆ ಸುಖ ಶಾಂತಿ ಕೊಟ್ಟು ಆಶೀರ್ವದಿಸಲಿ. ಒಳ್ಳೆ ಆರೋಗ್ಯ ಕೀರ್ತಿ ಹಾಗೂ ಹರುಷ ನಿಮ್ಮೊಂದಿಗಿರಲಿ..happy birthday ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಗಣೇಶ್, ‘ಥ್ಯಾಂಕ್ಯೂ ಅಣ್ಣ’ ಎಂದು ಮರು ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next