Advertisement

Jaggesh: ಹುಲಿ ಉಗುರಿನ ವಿಚಾರದಲ್ಲಿ ವೈಯಕ್ತಿಕ ತೇಜೋವಧೆ ಮಾಡಿದವರ FIR ದಾಖಲಿಸಿದ ಜಗ್ಗೇಶ್

11:32 AM Feb 20, 2024 | Team Udayavani |

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಅವರು ಇತ್ತೀಚೆಗೆ ಹುಲಿ ಉಗುರು ಹಾಕಿಕೊಂಡ ಬಗ್ಗೆ ನೀಡಿರುವ ಹೇಳಿಕೆಯೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಈ ಬಗ್ಗೆ ಜಗ್ಗೇಶ್‌ ಅವರು ಎಫ್‌ ಐಆರ್‌ ದಾಖಲಿಸಿದ್ದಾರೆ.

Advertisement

ಜಗ್ಗೇಶ್‌ ಹೇಳಿದ್ದೇನು?:  ಗುರುಪ್ರಸಾದ್‌ ಹಾಗೂ ನವರಸ ನಾಯಕ ಜಗ್ಗೇಶ್‌ ಅವರ ಕಾಂಬಿನೇಷನ್‌ ನಲ್ಲಿ ಬರುತ್ತಿರುವ ʼರಂಗನಾಯಕʼ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಗ್ಗೇಶ್‌, “ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ದಿ ಆಯಿತು” ಎಂದು ಜಗ್ಗೇಶ್ ಹೇಳಿದ್ದರು.

ಜಗ್ಗೇಶ್‌ ಅವರು ವರ್ತೂರು ಸಂತೋಷ್‌ ಅವರಿಗೆ ʼಕಿತ್ತೋದ್‌ ನನ್ಮಗʼ ಎಂದು ಹೇಳಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಲ್ಲದೆ ಜಗ್ಗೇಶ್‌ ಅವರ ನಿವಾಸದ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.

ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಜಗ್ಗೇಶ್‌ ಅವರು ಕ್ಷಮೆಗೆ ಆಗ್ರಹಿಸಿ, ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರೊಂದಿಗೆ ಇದೇ ರೀತಿಯ ಮಾತುಗಳನ್ನಾಡಿದ ಮತ್ತೊಬ್ಬರ ವಿಡಿಯೋ ವೈರಲ್‌ ಆಗಿತ್ತು.

ತಮ್ಮ ವಿಚಾರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿರುವವರ ವಿರುದ್ಧ ನಟ ಜಗ್ಗೇಶ್‌ ಅವರು ಎಫ್‌ ಐಆರ್‌ ದಾಖಲಿಸಿದ್ದಾರೆ. ಉತ್ತರ ವಿಭಾಗದ ಡಿಸಿಪಿಗೆ ಲಿಖಿತ ರೂಪದಲ್ಲಿ ನಟ ಜಗ್ಗೇಶ್ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

Advertisement

“ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಹುಲಿ ಉಗುರು ಬಗ್ಗೆ ಕಿತ್ತೋದವನು ಎನ್ನುವ ಪದವನ್ನು ಗ್ರಾಮೀಣ ಭಾಷೆಯ ಅರ್ಥದಲ್ಲಿ ಬಳಸಿದ್ದೆ. ಹುಲಿ ಉಗುರಿನ ಪ್ರಕರಣದಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ. ಆ ಅರ್ಥದಲ್ಲಿ ನಾನು ಹಾಸ್ಯವಾಗಿ ಆ ಪದವನ್ನು ಬಳಸಿದ್ದೆ. ಕೆಟ್ಟ ಪ್ರಚಾರ ಉದ್ದೇಶ ನನ್ನದಾಗಿರಲಿಲ್ಲ. ಆದರೆ ಇದನ್ನೇ ಉಪಯೋಗಿಸಿಕೊಂಡು ವಿಚಾರವನ್ನು ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಹಾಗೂ ವೈಯಕ್ತಿಕ ತೇಜೋವಧೆಯನ್ನು ಕೆಲವರು ಮಾಡುತ್ತಿದ್ದಾರೆ” ಎಂದು ದೂರಿನಲ್ಲಿ ಜಗ್ಗೇಶ್‌ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಹೆಬ್ಬಗೋಡಿ ನಾರಾಯಣ ಸ್ವಾಮಿ ಹಾಗೂ ಆತನ ಮಾತು ಅನುಸರಿಸಿ ವಿಡಿಯೋ ಮಾಡಿದ ಮತ್ತೊಬ್ಬರ ಮೇಲೆ ಕ್ರಮ ಕಾನೂನು ಕ್ರಮಕ್ಕೆ ಒತ್ತಾಯ” ಎಂದು ಜಗ್ಗೇಶ್ ದೂರಿನಲ್ಲಿ ತಿಳಿಸಿದ್ದಾರೆ.

ವರ್ತೂರು ಹೇಳಿದ್ದೇನು?: ಇನ್ನು ಜಗ್ಗೇಶ್ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಬಿಗ್‌ ಬಾಸ್‌ ಖ್ಯಾತಿಯ ವರ್ತೂರು ಸಂತೋಷ್‌, ““ಬಿಡಿ ಅವ್ರು ದೊಡ್ಡೋರು. ನಾನು ಏನು ಹೇಳ್ತೀನಿ ಅಂದ್ರೆ, ಕಾಲೈ ತಸ್ಮೈ ನಮಃ ಅಷ್ಟೆ. ನಾನು ಏನು ಹೇಳ್ತೀನಿ ಅಂದ್ರೆ, ಕೆಲವೊಂದಕ್ಕೆ ಉತ್ತರ ಕೊಡಬೇಕು. ಕೆಲವೊಂದಕ್ಕೆ ಸೈಲೆಂಟ್ ಆಗಿ ಇದ್ದರೆ ಸಾಕು ಉತ್ತರ ಸಿಗುತ್ತದೆ.” ಎಂದು ಉತ್ತರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next