Advertisement

5 ಡಿಸಿಎಂಗಳು ಸೇರಿ 25 ಸಚಿವರು ಜಗನ್‌ ಸಂಪುಟಕ್ಕೆ ಸೇರ್ಪಡೆ

10:08 AM Jun 09, 2019 | Team Udayavani |

ಅಮರಾವತಿ : ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಸಂಪುಟ ರಚನೆ ಶನಿವಾರ ನಡೆದಿದ್ದು, ಐವರು ಉಪಮುಖ್ಯಮಂತ್ರಿಗಳು ಸೇರಿ 25 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

25 ಮಂದಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರಿಗೆ ರಾಜ್ಯಪಾಲ ಈಎಸ್‌ಎಲ್‌ ನರಸಿಂಹನ್‌ ಅವರು ಪ್ರಮಾಣ ವಚನ ಬೋಧಿಸಿದರು.

11.49 ಕ್ಕೆ ಕಾರ್ಯಕ್ರಮ ಆರಂಭವಾಗಿತ್ತು. ಇದೇ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಬೇಕೆಂದು ಜಗನ್‌ ಆಪ್ತರು ಸಮಯ ನಿಗದಿ ಮಾಡಿದ್ದರು.

ಸಚಿವರಾಗಿರುವ 25 ಮಂದಿಯ ಪೈಕಿ 6 ಮಂದಿ ಅವಿಭಜಿತ ಆಂಧ್ರಪ್ರದೇಶದಲ್ಲಿ ವೈಎಸ್‌ ರಾಜಶೇಖರ್‌ ರೆಡ್ಡಿ ಅವರೊಂದಿಗೆ ಸಚಿವರಾಗಿ ಕೆಲಸ ಮಾಡಿದ್ದವರು. ಹಿರಿತನದ ಆಧಾರದಲ್ಲಿ ಜಗನ್‌ ಪ್ರಮುಖರಿಗೆ ಮಣೆ ಹಾಕಿದ್ದಾರೆ.

ಐವರು ಡಿಸಿಎಂಗಳು
ವರದಿಗಳ ಪ್ರಕಾರ, ರಾಜಣ್ಣ ಡೋರಾ(ಎಸ್‌ಟಿ, ಸಾಲೂರ್‌) ಅಲ್ಲಾ ನಾಣಿ (ಕಾಪು ಜನಾಂಗ, ಈಳೂರು)ಪಾರ್ಥ ಸಾರಥಿ (ಯಾದವ, ಪೆನಮಾಲೂರು ವಿಜಯವಾಡಾ ) ಎಂ. ಸುಚರಿತ (ಎಸ್‌ಟಿ,ಗ ಗುಂಟೂರು)ಅಂಜದ್‌ ಬಾಷಾ (ಮುಸ್ಲಿಂ, ಕಡಪ) ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಲಾಗುತ್ತಿದೆ.

Advertisement

ಜಗನ್‌ ಅವರು ಅಮರಾವತಿಯ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಅರ್ಚಕರ ಮೂಲಕ ಪೂಜೆ ಸಲ್ಲಿಸಿದರು, ಬಳಿಕ ತಂದೆ, ಮಾಜಿ ಮುಖ್ಯಮಂತ್ರಿ ರಾಜಶೇಖರ್‌ ರೆಡ್ಡಿ ಅವರ ಭಾವಚಿತ್ರಕ್ಕೆ ನಮಿಸಿದರು.

ಜಗನ್‌ಮೋಹನ್‌ ರೆಡ್ಡಿ ಅವರು ಮೇ 30 ರಂದು ಓರ್ವರೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next