Advertisement

ಇಂದು ಜಗನ್‌ ಸಂಪುಟ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

11:33 PM Apr 10, 2022 | Team Udayavani |

ಅಮರಾವತಿ: ನೂತನವಾಗಿ ಪುನಾರಚನೆಗೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ ರೆಡ್ಡಿಯವರ ಸಂಪುಟ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement

25 ಸಚಿವರಿರುವ ಹೊಸ ಸಂಪುಟದಲ್ಲಿ 17 ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಜಗನ್‌ ರವರ ಈ ಹಿಂದಿನ ಸಂಪುಟದಲ್ಲಿದ್ದ 11 ಹಿರಿಯ ಸಚಿವರನ್ನು ಹೊಸ ಸಂಪುಟ ದಲ್ಲಿ ಮುಂದುವರಿಸಲಾಗಿದೆ.

ಹಾಲಿ ಸಚಿವ ಸಂಪುಟ 2019ರ ಜೂ. 8ರಂದು ಅಧಿಕಾರಕ್ಕೆ ಬಂದಿತ್ತು. ಈಗ ಸರಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next