Advertisement

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

12:24 AM Sep 21, 2024 | Team Udayavani |

ಹೊಸದಿಲ್ಲಿ: ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸಲಾದ ತುಪ್ಪದಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನೆಣ್ಣೆ ಬಳಕೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಶುಕ್ರವಾರ ಮೌನ ಮುರಿದಿರುವ ಮಾಜಿ ಮುಖ್ಯಮಂತ್ರಿಯೂ ಆಗಿರುವ ವೈಎಸ್‌ಆರ್‌ಸಿಪಿ ನಾಯಕ ಜಗನ್‌ ಮೋಹನ್‌ ರೆಡ್ಡಿ ಅವರು, “ವಾಸ್ತವಿಕ ಸಂಗತಿಯನ್ನು ಸಿಎಂ ಎನ್‌. ಚಂದ್ರಬಾಬು ನಾಯ್ಡು ಅವರು ತಿರುಚಿದ್ದಾರೆ’ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

Advertisement

“ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಕೆಯಾಗಿದೆ ಎಂಬ ಚಂದ್ರಬಾಬು ನಾಯ್ಡು ಆರೋಪದ ವಿರುದ್ಧ ನಾನೇ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ. ಜತೆಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆಯುವೆ. ಚಂದ್ರಬಾಬು ನಾಯ್ಡು ಸತ್ಯವನ್ನು ಹೇಗೆ ತಿರುಚಿ¨ªಾರೆ ಮತ್ತು ಹಾಗೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬೇಕು ಎಂದು ನಾನು ಅವರಿಗೆ ಪತ್ರದ ಮೂಲಕ ವಿವರಿಸುತ್ತಿದ್ದೇನೆ’ ಎಂದು ಜಗನ್‌ಮೋಹನ್‌ ರೆಡ್ಡಿ ಹೇಳಿದ್ದಾರೆ.

2 ದಿನಗಳ ಹಿಂದೆ ಆರೋಪ ಮಾಡಿದ್ದ ಸಿಎಂ ಚಂದ್ರಬಾಬು ನಾಯ್ಡು, “ಈ ಹಿಂದಿನ ಸರಕಾರ(ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ) ಆಡಳಿತದಲ್ಲಿ ತಿರುಪತಿ ಪ್ರಸಾದ ಲಡ್ಡುಗೆ ತುಪ್ಪದ ಬದಲಿಗೆ
ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು’ ಎಂದು ಹೇಳಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿದ್ದ ಜಗನ್‌ಮೋಹನ್‌ ರೆಡ್ಡಿ, “ತಮ್ಮ 100 ದಿನಗಳ ಆಡಳಿತದಲ್ಲಿ ಏನೂ ಸಾಧನೆ ಮಾಡದ ಅವರು, ಜನರ ಗಮನ ಬೇರೆಡೆ ಸೆಳೆಯಲು ಈ ಆರೋಪ ಮಾಡಲಾಗುತ್ತಿದೆ’ ಎಂದಿದ್ದಾರೆ.

ಭಕ್ತರ ಭಾವನೆಯೊಂದಿಗೆ ಆಟ: ಜಗನ್‌ಮೋಹನ್‌
ಸಿಎಂ ನಾಯ್ಡು ಅವರು ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ.
ಅವರು ತೋರಿಸುತ್ತಿರುವ ಲ್ಯಾಬ್‌ ವರದಿ ಜುಲೈ ತಿಂಗಳದ್ದು. ಅಂದರೆ ಅವರ ಸರಕಾರವೇ ಅಧಿಕಾರದಲ್ಲಿರುವ ತಿಂಗಳ ವರದಿ ಅದು.
ನಮ್ಮ ಅವಧಿಯಲ್ಲಿ ಕಲಬೆರಕೆ ನಡೆದಿದೆ ಎನ್ನುವುದು ಸಂಪೂರ್ಣ ಸುಳ್ಳು
ಇದೊಂದು ಕಟ್ಟುಕಥೆ. ಚಂದ್ರಬಾಬು
ನಾಯ್ಡು ಸರಕಾರ ಸುಳ್ಳು ಹೇಳುತ್ತಿದೆ.
ಜನರ ನಂಬಿಕೆಯಲ್ಲೂ ರಾಜಕೀಯ ಮಾಡಿ, ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ ಉಂಟುಮಾಡಿದೆ.

ಆಂಧ್ರ ಹೈಕೋರ್ಟ್‌ ಮೆಟ್ಟಿಲೇರಿದ ಜಗನ್‌ ಪಕ್ಷ
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂಬ ಲ್ಯಾಬ್‌ ವರದಿ ಬೆನ್ನಲ್ಲೇ ಮಾಜಿ ಸಿಎಂ ಜಗನ್‌ ರೆಡ್ಡಿ ನೇತೃತ್ವದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಶುಕ್ರವಾರ ಆಂಧ್ರ ಹೈಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಈ ಕುರಿತು ತನಿಖೆ ನಡೆಸಬೇಕು ಎಂದು ಪಕ್ಷ ಮನವಿ ಮಾಡಿದೆ. ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಸೆ.25ರ ಒಳಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠ ಪಕ್ಷದ ಪರ ವಕೀಲರಿಗೆ ಸೂಚಿಸಿದೆ.

Advertisement

ಸನಾತನ ಧರ್ಮ ರಕ್ಷಣೆಗೆ ಪ್ರತ್ಯೇಕ ಮಂಡಳಿ ರಚನೆಗೆ ಪವನ್‌ ಕಲ್ಯಾಣ್‌ ಆಗ್ರಹ
ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಂಧ್ರ ಡಿಸಿಎಂ ಪವನ್‌, ಸನಾತನ ಧರ್ಮ ರಕ್ಷ­ಣೆ­ಗಾಗಿ ಪ್ರತ್ಯೇಕ ಮಂಡಳಿ ಸ್ಥಾಪಿ­ಸುವ ಬಗ್ಗೆ ಸಲಹೆ ನೀಡಿದ್ದಾರೆ. ಜತೆಗೆ ತಿರುಪತಿ ಲಡ್ಡು ವಿಚಾರ­ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತಿರುಪತಿ ಬಾಲಾಜಿ ಪ್ರಸಾದದಲ್ಲಿ ಮೀನೆಣ್ಣೆ, ಹಂದಿ ಕೊಬ್ಬು, ಬೀಫ್ನ ಅಂಶ ಇದೆ ಎಂಬ ವಿಚಾರ ಆಘಾತಕಾರಿ ಎಂದು ಟ್ವೀಟ್‌ ಮಾಡಿದ್ದಾರೆ.

ಲಡ್ಡು ವಿವಾದದಿಂದ ಹಿಂದೂ ನಂಬಿಕೆಗಳಿಗೆ ಧಕ್ಕೆ: ಸುಪ್ರೀಂಗೆ ಅರ್ಜಿ
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು, ಮೀನೆಣ್ಣೆ ಇರುವ ವಿಚಾರ ಸುಪ್ರೀಂ ಕೋರ್ಟ್‌ವರೆಗೆ ತಲುಪಿದೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಇರುವ ವಿಚಾರವು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟುಮಾಡಿದೆ. ಜತೆಗೆ ಹಿಂದೂಗಳ ಧಾರ್ಮಿಕ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಆರೋ­ಪಿಸಿ ಸತ್ಯಂ ಸಿಂಗ್‌ ಎಂಬ ವಕೀಲರು ಸುಪ್ರೀಂ­ಕೋರ್‌rಗೆ ಅರ್ಜಿ ಸಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆಗಳ ರಕ್ಷಣೆಗಾಗಿ ಹಿಂದಿನ ಸಂದರ್ಭಗಳಲ್ಲಿ ನೀಡಲಾಗಿದ್ದ ತೀರ್ಪಿನ ಅಂಶಗಳನ್ನೂ ಅವರು ಉಲ್ಲೇಖೀಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next