Advertisement

ಸಮಸ್ಯೆ ತೆರೆದಿಟ್ಟ ಗ್ರಾಮಸ್ಥರು

10:02 AM Jun 26, 2019 | Team Udayavani |

ಜಗಳೂರು: ತಾಲೂಕಿನ ಹಳ್ಳಿಗಳಿಗೆ ಬಂದಂತ ಜಿಲ್ಲಾಡಳಿತಕ್ಕೆ ಗ್ರಾಮಸ್ಥರಿಂದ ಸಮಸ್ಯೆಗಳ ಭಂಡಾರವನ್ನೆ ತೆರೆದಿಟ್ಟ ಗ್ರಾಮಸ್ಥರು.

Advertisement

ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮಗಳ ಭೇಟಿ ನೀಡಿ ಸಮಸ್ಯೆಗಳ ಕ್ರೋಢೀಕರಣ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ನೇಮಕವಾದ ಅಧಿಕಾರಿಗಳ ಮುಂದೆ ಗ್ರಾಮಸ್ಥರು ಸಮಸ್ಯೆಗಳನ್ನು ತೆರೆದಿಟ್ಟರು.

ಮಂಗಳವಾರ ತಾಲೂಕಿನ 22 ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ ಪ್ರತಿಯೊಂದು ಗ್ರಾಮಕ್ಕೂ ತಂಡಗಳಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿ ಗ್ರಾಮದಲ್ಲಿಯೂ ಸಮಸ್ಯೆಗಳ ಕುಡಿಯುವ ನೀರಿಲ್ಲ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ, ಪಶು ಆಸ್ಪತ್ರೆಯ ವೈದ್ಯರು ಸರಿಯಾಗಿ ಬಾರುವುದಿಲ್ಲ, ಗ್ರಾಪಂಗಳಲ್ಲಿ ಸಮರ್ಪಕವಾಗಿ ಕೆಲಸ ನಡೆಯುವುದಿಲ್ಲ. ಒಟ್ಟಾರೆಯಾಗಿ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಆರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎಂಬ ದೂರುಗಳೇ ಕೇಳಿಬಂದವು.

ತಾಲೂಕಿನ ಬಿಸ್ತುವಳ್ಳಿ ಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ದಾವಣಗೆರೆಯ ಹಿರಿಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಆಶೋಕ್‌ ಭೇಟಿ ನೀಡಿದ ಸಮಸ್ಯೆಗಳನ್ನು ಆಲಿಸಿದರು . ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಬೇಕು. ಅಂಗನವಾಡಿ ಕೇಂದ್ರಕ್ಕೆ ಗುಣ ಮಟ್ಟದ ಆಹಾರ ಪದಾರ್ಥಗಳು ಪೂರೈಕೆ ಆಗುತ್ತಿರಲಿಲ್ಲ ಎಂದು ಗ್ರಾಮಸ್ಥರು ದೂರಿದರು.

ಬಿದರಕೆರೆ ಗ್ರಾಮದ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿದ ನಿರ್ಮಿತಿ ಕೇಂದ್ರ ದ ಯೋಜನಾ ವ್ಯವಸ್ಥಾಪಕ ರವಿ ಅವರಿಗೆ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ. ವಾರಕ್ಕೆ ಮೂರು ದಿನ ಮಾತ್ರ ವೈದ್ಯರು ಬಂದು ಹೋಗುತ್ತಾರೆ. ಬಿದರಕೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು

Advertisement

ಗ್ರಾಮದಲ್ಲಿ ಶಾಲೆಯ ಸಮಿಪವೇ ಮದ್ಯದಂಗಡಿಯಿದ್ದು, ಇದನ್ನು ತೆರವು ಗೊಳಿಸಬೇಕು ಎಂದು ಶಾಲೆಯ ಶಿಕ್ಷಕರು ದೂರು ನೀಡದರು. ಖಾಸಗಿ ಕೊಳವೆಬಾವಿ ಮಾಲೀಕರಿಗೆ ಸಮರ್ಪಕವಾಗಿ ಬಾಡಿಗೆ ಹಣ ನೀಡುತ್ತಿಲ್ಲ ಎಂಬ ದೂರುಗಳನ್ನು ನೀಡಲಾಯಿತು.

ಗ್ರಾಮದಲ್ಲಿರುವ ಅಂಬೇಡ್ಕ್ರ್‌ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಾಮೂಹಿಕವಾಗಿ ಭೋಜನ ಸವಿದರು. ನಂತರ ಮಾತನಾಡಿದ ಅವರು, ಗ್ರಾಮಗಳಿಗೆ ಭೇಟಿ ನೀಡಿದಾಗ ಕುಡಿಯುವ ನೀರಿನ ಸಮಸ್ಯೆ, ಚರಂಡಿಗಳಲ್ಲಿ ಸ್ವಚ್ಛತೆ ಕೊರತೆ ಸೇರಿದಂತೆ ನರೇಗಾ ಯೋಜನೆಯ ಬಗ್ಗೆ ದೂರುಗಳು ಬಂದಿವೆ. ಈ ಎಲ್ಲ ಮಾಹಿತಿಯ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದರು

ಪಿಡಿಒ ಮರುಳಸಿದ್ದಪ್ಪ ಸಿಬ್ಬಂದಿಗಳಾದ ರಾಜು, ಗ್ರಾಮಲೆಕ್ಕಾಧಿಕಾರಿ ದಿಲೀಪ್‌, ಎಸ್‌ಡಿಎ ಯೋಗಿಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next