Advertisement

ನರೇಗಾ ಕಾಮಗಾರಿ ಪರಿಶೀಲನೆ

11:30 AM Feb 26, 2020 | Naveen |

ಜಗಳೂರು : ಮೃತರು ಮತ್ತು ಶಾಲಾ ವಿದ್ಯಾರ್ಥಿಗಳ ಹೆಸರಿನಲ್ಲಿ ಕಳೆದ ಮೂರು ವರ್ಷಗಳಿಂದ ನಕಲಿ ಜಾಬ್‌ ಕಾರ್ಡ್ಗಳನ್ನು ಸೃಷ್ಟಿಸಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡದೇ 3 ಕೋಟಿಗೂ ಅಧಿಕ ಅನುದಾನವನ್ನು ಪಂಚಾಯಿತಿ ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ದಾವಣಗೆರೆ ಜಿಲ್ಲಾ ಪಂಚಾಯತ್‌ ಸಿಇಓ ಪದ್ಮಾ ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮಂಗಳವಾರ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಿರೆ ಮಲ್ಲನಹೊಳೆ ಮತ್ತು ತಾಯಿ ಟೋಣಿ ಗ್ರಾಮಗಳಲ್ಲಿ ಪರಿಶೀಲನೆ ನಡೆದರು. ತಲಾ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ 15 ರಿಂದ 20 ಚೆಕ್‌ ಡ್ಯಾಮ್‌ ಗಳು, ಮಲ್ಟಿ ಚೆಕ್‌ ಡ್ಯಾಮ್‌ ಗಳು ಕಿತ್ತು ಹೋಗಿದ್ದನ್ನು ಕಂಡ ಸಿಇಓ ಸಂಬಂಧಪಟ್ಟ ಅಧಿ ಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ನಂತರ ಜಾಬ್‌ ಕಾರ್ಡ್‌ ಹೊಂದಿರುವ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಪಂಚಾಯಿತಿಯಲ್ಲಿ ಮೃತರ ಮತ್ತು ಶಾಲಾ ಮಕ್ಕಳ ಹೆಸರಿನಲ್ಲಿ ಜಾಬ್‌ ಕಾರ್ಡ್‌ಗಳು ಇವೆ. ಇಂದಿಗೂ ಸಹ ಅವುಗಳನ್ನು ಬಳಸಲಾಗುತ್ತಿದೆ. ಮಲ್ಟಿ ಚೆಕ್‌ ಡ್ಯಾಮ್‌ ಗಳು ಸಂಪೂರ್ಣ ಕಳಪೆಯಾಗಿವೆ. ಕಾಮಗಾರಿ ಮಾಡದೆ ಬರೀ ಬೋರ್ಡ್‌ ಹಾಕಿ ಬಿಲ್‌ ಮಾಡಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

2017ರಿಂದ ಮೃತರು ಹಾಗೂ ವಿದ್ಯಾರ್ಥಿಗಳ ಹೆಸರಿನಲ್ಲಿ ಜಾಬ್‌ ಕಾರ್ಡ್‌ ಸೃಷ್ಟಿಸಿ ಅಕ್ರಮ ಎಸಗಲಾಗಿದೆ ಎಂದು ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next