Advertisement

ಬರಪೀಡಿತ ಪ್ರದೇಶಕ್ಕೆ ನರೇಗಾ ಯೋಜನೆ ವರದಾನ

11:44 AM Nov 20, 2019 | Naveen |

ಜಗಳೂರು: ಬರಪೀಡಿತ ಪ್ರದೇಶಕ್ಕೆ ನರೇಗಾ ಯೋಜನೆ ವರದಾನವಾಗಿದೆ ಎಂದು ಶಾಸಕ ಎಸ್‌ .ವಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ರೋಜಗಾರ್‌ ವಾಹಿನಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಪ್ರತಿಯೊಬ್ಬ ಗ್ರಾಮಸ್ಥರು ನರೇಗಾ ಯೋಜನೆಯಡಿ ಕೆಲಸ ಪಡೆಯುವ ಹಕ್ಕು ಹೊಂದಿದ್ದು, ನಿರ್ಭಯವಾಗಿ ಪಂಚಾಯಿತಿಗಳಿಗೆ ತೆರಳಿ ತಮ್ಮ ಹಕ್ಕನ್ನು ಪಡೆದುಕೊಳ್ಳಿ ಎಂದರು.

Advertisement

ನಮಗೆ ಕೆಲಸ ನೀಡುತ್ತಿಲ್ಲ ಎಂಬ ದೂರುಗಳು ಬರಬಾರದು. ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಂಡಿದ್ದು ಪ್ರತಿಯೊಬ್ಬರಿಗೆ 150 ಮಾನವ ದಿನ ಕೆಲಸ ನೀಡಬಹುದು. ಪ್ರತಿಯೊಬ್ಬರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕೂಲಿಯನ್ನು ಪಡೆಯಬಹುದು. ಮಹಿಳೆಯರು ಮತ್ತು ಪುರುಷರಿಗೆ ಸಮಾನ ವೇತನ ಇದೆ. ಪಂಚಾಯಿತಿಗೆ ಬರುವಂತ ಗ್ರಾಮಸ್ಥರನ್ನು ಅಲೆದಾಡಿಸದೇ ಕೆಲಸ ನೀಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿ ಕಾರಿ ಮಲ್ಲನಾಯ್ಕ ಮಾತನಾಡಿ, ಈ ವಾಹಿನಿಯು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ತೆರಳಿ ನರೇಗಾ ಯೋಜನೆಯ ಮಾಹಿತಿ ನೀಡಲಿದೆ. ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವುದು, ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರತಿಯೊಬ್ಬರಿಗೆ ಕೆಲಸ ನೀಡಲಾಗುವುದು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್‌, ವ್ಯವಸ್ಥಾಪಕ ರವಿಕುಮಾರ್‌, ಸಿಬ್ಬಂದಿ ಚೌಡಪ್ಪ, ಶಿವಕುಮಾರ್‌, ವಿನಯ್‌, ಸಿದ್ದಿಕ್‌, ಸುನೀಲ್‌, ಬಾಷ, ತಿಪ್ಪೇಸ್ವಾಮಿ, ಮುಖಂಡರಾದ ಗಿರೀಶ್‌ ಒಡೆಯರ್‌, ಸುರೇಶ್‌ ನಾಯ್ಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next