Advertisement

ಧ್ಯಾನ-ಯೋಗದಿಂದ ಮಾನಸಿಕ-ದೈಹಿಕ ಆರೋಗ್ಯ

04:32 PM Feb 27, 2020 | Naveen |

ಜಗಳೂರು: ಆತ್ಮನ ಆನಂದಕ್ಕಾಗಿ ನಮ್ಮ ಆಚಾರ, ನಡೆ-ನುಡಿಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಧ್ಯಾನದ ಕಡೆ ಗಮನ ಹರಿಸಿದರೆ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗಲಿದೆ ಎಂದು ಆವರಗೊಳ್ಳಪುರವರ್ಗದ ಪಾಂಡೋಮಟ್ಟಿ ಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಯಲಯದಲ್ಲಿ 84ನೇ ಮಹಾಶಿವರಾತ್ರಿ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಆಸ್ಪತ್ರೆಗಳು ಆರೋಗ್ಯವಂತರನ್ನು ಅನಾರೋಗ್ಯವಂತನನ್ನಾಗಿ ಮಾಡುತ್ತಿವೆ. ಪ್ರತಿನಿತ್ಯ ಧ್ಯಾನ ಮಾಡುವಂತಹ ಕೆಲಸ ಮಾಡಬೇಕಾಗಿದೆ. ಎಷ್ಟೇ ಹಣ ವೆಚ್ಚ ಮಾಡಿದರೂ ಆಧ್ಯಾತ್ಮಿಕ ಕೌಶಲಗಳು ಸಾಧಿಸುವುದಿಲ್ಲ ಎಂದರು.

ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ತಾಲೂಕು ಸಂಚಾಲಕಿ ಭಾರತಿ ಅಕ್ಕ ಮಾತನಾಡಿ, ಮನುಷ್ಯ ಆರೋಗ್ಯವಂತನಾಗಿದ್ದಾರೆ ಮಾತ್ರ ಏನಾದರೂ ಸಾಧಿ ಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಬೇಕಾಗಿದೆ. ದೇಹಕ್ಕೆ ವಿಶ್ರಾಂತಿ ನೀಡಿದಂತೆ ಮನಸ್ಸಿಗೂ ಸಹ ವಿಶ್ರಾಂತಿ ನೀಡಬೇಕು. ಹಾಗಾಗಿ ಅಧ್ಯಾತ್ಮದ ಕಡೆ ಗಮನ ಹರಿಸಬೇಕು. ಧ್ಯಾನ, ಯೋಗದ ಕಡೆ ಗಮನ ಹರಿಸಿ ಪಾಶ್ಚಿಮಾತ್ಯರು ಆಧ್ಯಾತ್ಮ ವನ್ನು ಹುಡುಕಿಕೊಂಡು ಭಾರತದತ್ತ ಬರುತ್ತಾರೆ. ಆದರೆ ನಾವು ಮಾತ್ರ ಇದರ ಕಡೆ ಗಮನಹರಿಸುತ್ತಿಲ್ಲ ಎಂದರು.

ಇಂದು ತಂತ್ರಜ್ಞಾನ ಮುಂದುವರಿದಿದೆ. ಪ್ರತಿಯೊಬ್ಬರಲ್ಲಿಯೂ ಚಿಂತನೆ ಮಾಡುವ ಶಕ್ತಿ ಇದೆ. ಚಿಂತನೆ ಮಾಡಿ ತಂತ್ರಜ್ಞಾನ ವನ್ನು ಸಮರ್ಪಕವಾಗಿ ಬಳಸಬೇಕಾಗಿದೆ. ನಾವು ಮಾಡುವ ಯೋಚನೆಗಳು ನಮ್ಮನ್ನು ದಾರಿ ತಪ್ಪಿಸಬಾರದು. ಉತ್ತಮ ಯೋಚನೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಕೆಟ್ಟ ಆಲೋಚನೆಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದರು.

ಆರೋಗ್ಯಕ್ಕೂ ಆಹಾರಕ್ಕೂ ಸಂಬಂಧವಿದೆ. ನಮ್ಮ ಆಹಾರ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮನೆಯಲ್ಲಿ ದೇವರನ್ನು ನೆನೆಯುತ್ತಾ, ಜನಪದ ಹಾಡುಗಳನ್ನು ಹಾಡುತ್ತ ಅಡುಗೆಯನ್ನು ತಯಾರಿಸುತ್ತಿದ್ದರು. ಹಿಂದೆ ಅವಿಭಕ್ತ ಕುಟುಂಬಗಳಿದ್ದವು. ಆದರೆ ಇಂದು ಬದಲಾವಣೆಯಾಗಿದೆ. ಇದೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಧ್ಯಾತ್ಮವು ಪ್ರತಿಯೊಬ್ಬರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.

Advertisement

ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ ಮಾತನಾಡಿದರು. ಈ ಸಂಧರ್ಭದಲ್ಲಿ ಬೆಂಗಳೂರಿನ ಕೆ. ಸುಬ್ರಹ್ಮಣ್ಯ, ಸರಕಾರಿ ಪಪೂ ಕಾಲೇಜು ಪ್ರಾಂಶುಪಾಲ ಜಗದೀಶ್‌, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ವ್ಯವಸ್ಥಾಪಕ ನಾಗಭೂಷಣ್‌, ಜ್ಞಾನ ತರಂಗಿಣಿ ಸಂಸ್ಥೆ ಕಾರ್ಯದರ್ಶಿ ಅರವಿಂದನ್‌, ಆಪ್ತ ಸಮಾಲೋಚಕಿ ರಂಜನಿ, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next