Advertisement

ಗಾಳಿ-ಮಳೆಯಿಂದ ತೋಟಗಾರಿಕೆ ಬೆಳೆ ಹಾನಿ

04:06 PM Apr 24, 2020 | Naveen |

ಜಗಳೂರು: ತಾಲೂಕಿನಾದ್ಯಾಂತ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ 13 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆಗಳು ಸೇರಿದಂತೆ ಕೆಲವು ಮನೆಗಳ ಮೇಲ್ಛಾವಣಿಗೆ ಧಕ್ಕೆಯಾಗಿದೆ. ಕೆಲವೆಡೆ ಮರಗಳು ಧರೆಗುರುಳಿವೆ ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ತಿಳಿಸಿದ್ದಾರೆ.

Advertisement

ತಾಲೂಕಿನಲ್ಲಿ ಬುಧವಾರ ಸಂಜೆ ಅಶ್ವಿ‌ನಿ ಮಳೆಯ ಆರ್ಭಟ ಭಾರೀ ಜೋರಾಗಿದ್ದು, ವಿಪರೀತ ಗಾಳಿ, ಮಳೆಯಿಂದಾಗಿ 8 ಹೆಕ್ಟೇರ್‌ ಬಾಳೆ , 2 ಹೆಕ್ಟೇರ್‌ ಅಡಿಕೆ , 1 ಎಕರೆಯಲ್ಲಿದ್ದ ಎಲೆಬಳ್ಳಿಗೆ ಹಾನಿಯಾಗಿದೆ. ಬೈರನಾಯಕನಹಳ್ಳಿ, ಪಟ್ಟಣದ ಅಶ್ವತ್ಥರೆಡ್ಡಿ ನಗರದ ಸಮೀಪವಿರುವ ಅಲೆಮಾರಿ ಸಮುದಾಯದವರ ಗುಡಿಸಲುಗಳಿಗೆ ಧಕ್ಕೆಯಾಗಿದ್ದು, ಕೆಚ್ಚೇನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮರಗಳು ರಸ್ತೆ ಮೇಲೆ ಬಿದ್ದಿವೆ. ಮುಸ್ಟೂರು ಗ್ರಾಮದ ಸಮೀಪ ತೆರೆಯಯಾಗಿದ್ದ ಚೆಕ್‌ಪೋಸ್ಟ್‌ನ ಶಾಮಿಯಾನಾ ಗಾಳಿಗೆ ಹಾರಿ ಹೋಗಿದೆ. ಜಗಳೂರು 28.20 ಮಿಮೀ, ಸಂಗೇನಹಳ್ಳಿ 9, ಬಿಳಿಚೋಡು 7 ಮಿಮೀ ಸೇರಿದಂತೆ ಒಟ್ಟು 44.20 ಮಿಮೀ ದಾಖಲಾಗಿದೆ. ಸರಾಸರಿ 8.84 ರಷ್ಟು ಮಳೆಯಾಗಿದ್ದು ಸೊಕ್ಕೆ ಮತ್ತು ಚಿಕ್ಕಬಂಟನಹಳ್ಳಿ ಭಾಗದಲ್ಲಿ ಮಳೆಯಾಗಿಲ್ಲ. ಉಳಿದಂತೆ ತಾಲೂಕಿನಾದ್ಯಾಂತ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next