Advertisement

ಹಸಿರೀಕರಣಕ್ಕೆ ಅರಣ್ಯ ಇಲಾಖೆಯಿಂದ ಯೋಜನೆ

10:19 AM Jun 03, 2019 | Naveen |

ರವಿಕುಮಾರ್‌
ಜಗಳೂರು:
ತಾಲೂಕಿನಲ್ಲಿರುವ ಅರಣ್ಯ ಪ್ರದೇಶ ಅಭಿವೃದ್ಧಿ ಪಡಿಸುವುದರ ಜತೆಗೆ ನಗರ ಹಸಿರೀಕರಣಗೊಳಿಸಲು ವಿವಿಧ ಯೋಜನೆಗಳಡಿ 1.99 ಲಕ್ಷ ವಿವಿಧ ಜಾತಿಯ ಸಸಿಗಳನ್ನು ವಲಯ ಅರಣ್ಯ ಇಲಾಖೆ ಸಮೃದ್ಧವಾಗಿ ಬೆಳೆಸಿದೆ.

Advertisement

ಜಗಳೂರು ತಾಲೂಕಿನ ವಲಯ ಅರಣ್ಯ ಇಲಾಖೆ ವತಿಯಿಂದ ಪಟ್ಟಣದ ಅಶ್ವತ್‌ರೆಡ್ಡಿ ನಗರದ ಸಮೀಪವಿರುವ ನರ್ಸರಿಯಲ್ಲಿ 2018-19ರಿಂದ ವಿವಿಧ ಜಾತಿಯ ಸಸಿಗಳನ್ನು ಆರೈಕೆ ಮಾಡಿ ಬೆಳೆಸಿದೆ

ಪರಿಸರ ಉಳಿಸಿ ಬೆಳೆಸುವ ಉದ್ದೇಶದಿಂದ ಸರಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಳೆದು ಒಂದು ವರ್ಷದಿಂದ ಸಸಿ ಬೆಳೆಸುವ ಕಾಯಕದಲ್ಲಿ ನಿರತವಾಗಿದೆ. ಬೆಳೆಸಿರುವ ಸಸಿಗಳನ್ನು ರಸ್ತೆ ಬದಿ, ಅರಣ್ಯದಲ್ಲಿ ನೆಡು ತೋಪುಗಳಲ್ಲಿ ನಡುವುದರ ಮೂಲಕ ಪರಿಸರ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ವಿವಿಧ ಯೋಜನೆಗಳು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ, ನಗರ ಹಸಿರೀಕರಣ, ಪರ್ಯಾಯಾತ್ಮಕ ಯೋಜನೆ, ರಕ್ಷಿತ ಅರಣ್ಯ, ರಸ್ತೆ ಬದಿ ನೆಡುತೋಪು ಸೇರಿದಂತೆ ವಿವಿಧ ಯೋಜನೆಗಳನ್ನು ಬಳಸಿಕೊಂಡು ವಲಯ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸುತ್ತಿದೆ.

ರೈತರಿಗೆ ವರದಾನ: ಅರಣ್ಯ ಇಲಾಖೆ ವತಿಯಿಂದ ರೈತರಿಗೆ 3 ರೂಪಾಯಿಗೆ ಒಂದು ಸಸಿ ನೀಡಿ ಆ ಗಿಡ ಸಮೃದ್ಧವಾಗಿ ಬದುಕಿದರೆ ಪ್ರಥಮ ವರ್ಷಕ್ಕೆ 30 ರೂ., ಎರಡನೇ ವರ್ಷಕ್ಕೆ 30 ರೂ., 3ನೇ ವರ್ಷಕ್ಕೆ 40 ರೂ. ಒಟ್ಟು 100 ರೂಪಾಯಿ ಇಲಾಖೆ ನೀಡುತ್ತದೆ. ರೈತರು ಈ ಯೋಜನೆಯಡಿ ತಮ್ಮ ಜಮೀನಿನ ಬದುಗಳಲ್ಲಿ ಬೆಳೆಸುವುದರಿಂದ ಅರಣ್ಯ ಅಭಿವೃದ್ಧಿಗೆ ಒತ್ತು ನೀಡುವುದಲ್ಲದೆ ರೈತರಿಗೆ ತುಸು ಆರ್ಥಿಕ ಸಹಾಯ ದೊರೆಯುತ್ತದೆ.

Advertisement

ವಿವಿಧ ಜಾತಿಯ ಸಸಿಗಳು: ಬೇವು, ಹುಣಸೆ, ಜಂಬು ನೇರಳೆ, ಅರಳಿ, ಆಲ, ಗೋಣಿ, ಹೊಂಗೆ, ಬಸರಿ, ಕಾಡು ಬಾದಾಮಿ, ಸಿಹಿ ಹುಣಸೆ, ಕಮರ, ಮಹಾಘನಿ, ಸಿಲ್ವರ್‌, ಸೀಮರೋಬ ಸೇರಿದಂತೆ ವಿವಿಧ ಜಾತಿಯ 1ಲಕ್ಷದ 99 ಸಾವಿರ ಸಸಿಗಳನ್ನು ಬೆಳೆಸಿ ಆರೈಕೆ ಮಾಡಲಾಗಿದೆ. ಇದರಲ್ಲಿ ರೈತರಿಗೆ 50 ಸಾವಿರ ಸಸಿಗಳನ್ನು ನೀಡಲಾಗುವುದು

ನಗರದ ಹಸಿರೀಕರಣಕ್ಕೆ ಆದ್ಯತೆ: ಪಟ್ಟಣದ ಪ್ರತಿಯೊಂದು ಸರಕಾರಿ ಕಚೇರಿ, ಶಾಲಾ ಕಾಲೇಜು, ಮನೆಗಳ ಮುಂದೆ ಇಲಾಖೆ ವತಿಯಿಂದ ಸಸಿ ನೆಡುವ ಕಾರ್ಯವನ್ನು ಇಲಾಖೆ ಮಾಡುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಪ್ರತಿವರ್ಷವು ಸಹ ಲಕ್ಷಾನುಗಟ್ಟಲೆ ಸಸಿಗಳನ್ನು ಬೆಳೆಸಿ ರೈತರಿಗೆ ಹಾಗೂ ಮತ್ತಿತರರಿಗೆ ವಿತರಿಸುತ್ತ ಬಂದಿದೆ. ಪ್ರಸಕ್ತ ವರ್ಷವೂ ಸಹ ಸಸಿಗಳನ್ನು ಬೆಳೆಸಿದ್ದು, ಪರಿಸರಾಸಕ್ತರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು.
ಶಿವರೆಡ್ಡಿ, ಅರಣ್ಯ ರಕ್ಷಕ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯು ರೈತರಿಗೆ ಕೃಷಿಯ ಜೊತೆಗೆ ಆದಾಯ ತರುವ ಯೋಜನೆಯಾಗಿದೆ. ಪ್ರತಿಯೊಬ್ಬ ರೈತರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು.
ಓಬಯ್ಯ , ರೈತ

ಪ್ರತಿ ವರ್ಷ ಸಸಿಗಳನ್ನು ನೆಡುವುದರ ಮೂಲಕ ಅವುಗಳನ್ನು ಉಳಿಸಿ ಬೆಳೆಸುವಂತ ಕೆಲಸ ಅರಣ್ಯ ಇಲಾಖೆಯವರು ಮಾಡಿದರೆ ಕೆಲವೇ ವರ್ಷಗಳಲ್ಲಿ ಬರದನಾಡು ಮಲೆನಾಡು ಆಗುವುದರಲ್ಲಿ ಅನುಮಾನವಿಲ್ಲ ಎಂಬುವುದು ಪ್ರಗತಿ ಪರ ಚಿಂತಕರ ಅಭಿಪ್ರಾಯವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next