Advertisement

ವೃದ್ಯಾಪ್ಯ-ವಿಧವಾ ವೇತನ ವಿತರಣೆ

03:20 PM Apr 17, 2020 | Naveen |

ಜಗಳೂರು: ತಾಲೂಕಿನ 35 ಸಾವಿರ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ಹಾಗೂ ವಿಧವಾ ವೇತನವನ್ನು ಮನೆಬಾಗಿಲಿಗೆ ಬಂದು ನೀಡಲಾಗುತ್ತಿದೆ ಎಂದು ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

Advertisement

ತಾಲೂಕಿನ ಮಡ್ರಳ್ಳಿ ಗ್ರಾಮದಲ್ಲಿ ಗುರುವಾರ ಮೂರು ತಿಂಗಳ ವೃದ್ಧಾಪ್ಯ ಹಾಗೂ ವಿಧವಾ ವೇತನ ಮೂರು ಸಾವಿರ ರೂ. ಗಳನ್ನು ವಿತರಿಸಿ ಅವರು ಮಾತನಾಡಿದರು. ಕೊರೊನಾ ಹಿನ್ನಲೆಯಲ್ಲಿ ವೇತನವನ್ನು ಪಡೆಯಲು ಫಲಾನುಭವಿಗಳು ಪಟ್ಟಣಕ್ಕೆ ಬರಬಾರದು ಎಂಬ ಉದ್ದೇಶದಿಂದ ನಾವೇ ಖುದ್ದಾಗಿ ಅವರ ಮನೆಬಾಗಿಲಿಗೆ ಬಂದು ಮೂರುತಿಂಗಳ ವೇತನವನ್ನು ನೀಡುತ್ತಿದ್ದೇವೆ. ತಾಲೂಕಿನಲ್ಲಿ 35 ಸಾವಿರ ಫಲಾನುಭವಿಗಳಿದ್ದು, ಬ್ಯಾಂಕ್‌ ಮೂಲಕ ಪಿಂಚಣಿ ಪಡೆಯುತ್ತಿದ್ದ 18 ಸಾವಿರ ಫಲಾನುಭವಿಗಳ ಮನೆಬಾಗಿಲಿಗೆ ಬಂದು ವಿತರಿಸಲಾಗುತ್ತಿದೆ ಉಳಿದ ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿದ್ದು ಅವರಿಗೂ ಅಂಚೆ ಇಲಾಖೆಯವರು ನೀಡಲಿದ್ದಾರೆ ಎಂದರು. ಆರ್‌ಐ ಶ್ರೀನಿವಾಸ್‌, ಕುಬೇಂದ್ರ ನಾಯ್ಕ, ಧನಂಜಯ, ಲಂಕೇಶ್‌, ವಿಎ ವಿಜಯ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next