Advertisement
ಫೆ. 11ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆದ ಜಗಜ್ಯೋತಿ ಕಲಾವೃಂದ ಮುಂಬಯಿ ಇದರ 32ನೇ ವಾರ್ಷಿಕೋತ್ಸವ ಮತ್ತು ಸಂಸ್ಥೆಯ 2017 ಸಾಲಿನ ಅಖೀಲ ಭಾರತ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಮತ್ತು ಕವಿತಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜೇಯ ಸ್ಪರ್ಧಿಗಳಿಗೆ ಶುಭಹಾರೈಸಿದರು.
Related Articles
Advertisement
ಇನ್ನೋರ್ವ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಉಪಕಾರ್ಯಾಧ್ಯಕ್ಷ ಡಾ| ವಿ. ಎಂ. ಶೆಟ್ಟಿ ಇವರು ಮಾತನಾಡಿ, ಜಗಜ್ಯೋತಿ ಕಲಾವೃಂದವು ಹೊರನಾಡ ಕನ್ನಡಿಗರ ಸ್ನೇಹಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದು, ಡೊಂಬಿವಲಿಯ 32 ಸಂಘಟನೆಗಳ ಪೈಕಿ ಕಲಾವೃಂದ ಸಮಾಜ ಸೇವೆಯಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಸಂಸ್ಥೆಯ ಸಹಾಯ, ಸಹಕಾರಕ್ಕೆ ತಾವು ಬದ್ಧರಾಗಿದ್ದೇವೆ ಎಂದರು.
ಬಂಟರ ಸಂಘ ಡೊಂಬಿವಲಿ ಪ್ರಾದೇಶ ಸಮಿತಿಯ ಉಪಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಅವರು ಮಾತನಾಡಿ, ಜಗಜ್ಯೋತಿ ಕಲಾವೃಂದದ ಸಾಮಾಜಿಕ ಕಳಕಳಿ ಅನನ್ಯವಾಗಿದ್ದು, ಸಂಘದ ಸಾಧನೆ ಉತ್ತುಂಗಕ್ಕೇರಿ ಹೆಸರಿನಿಂದ ಜಗತ್ತಿಗೆ ಜ್ಯೋತಿಯನ್ನು ನೀಡಲಿ ಎಂದು ನುಡಿದು ಹಾರೈಸಿದರು.
ಜಗದೀಶ್ ನಿಟ್ಟೆ ಅವರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್ ಶೆಟ್ಟಿ, ಬಾಬು ಮೊಗವೀರ, ಚಂದ್ರ ನಾಯಕ್, ಶೇಖರ್ ಶೆಟ್ಟಿ, ವಸಂತ ಸುವರ್ಣ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಇವರು ಸ್ವಾಗತಿಸಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಮಾಹಿತಿ ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಮೊಗವೀರ ವಾರ್ಷಿಕ ವರದಿ ವಾಚಿಸಿದರು. ಚಂದ್ರ ನಾಯ್ಕ, ರಾಜು ಸುವರ್ಣ, ಸುರೇಂದ್ರ ನಾಯ್ಕ, ಸಂತೋಷ್ ಶೆಟ್ಟಿ, ಉಮೇಶ್ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿ ಗಳಾದ ದಿವಾಕರ ಶೆಟ್ಟಿ ಇಂದ್ರಾಳಿ, ಸುಕುಮಾರ್ ಎನ್. ಶೆಟ್ಟಿ, ದೇವದಾಸ್ ಎಲ್. ಕುಲಾಲ್, ರವೀಂದ್ರ ವೈ. ಶೆಟ್ಟಿ, ರಾಜು ಭಂಡಾರಿ, ಯೋಗಿನಿ ಶೆಟ್ಟಿ, ಮಾಧುರಿಕಾ ಬಂಗೇರ, ಆಶೀಶ್ ಶೆಟ್ಟಿ, ಹರೀಶ್ ಶೆಟ್ಟಿ, ಅಶೋಕ್ ದಾಸು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಕಲಾಮಂಡಳಿಯವರಿಂದ ಗದಾಯುದ್ಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಹೊರ ಹಾಗೂ ಒಳನಾಡಿನ ಕನ್ನಡಿಗರು ಕನ್ನಡ ಹಾಗೂ ಅಲ್ಲಿಯ ಭಾಷೆಯನ್ನು ಅನುವಾದಿಸಿ ಸಾಹಿತ್ಯ ಕೃಷಿ ಮಾಡಿದರೆ ಪರಸ್ಪರರ ಭಾಷಾ ಸಾಹಿತ್ಯದ ಅದಾನ-ಪ್ರದಾನದ ಜತೆಗೆ ಕನ್ನಡ ಭಾಷೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಬಹುದಾಗಿದೆ. ಶಿಕ್ಷಣ ಮಾಧ್ಯಮದಿಂದ ಕನ್ನಡವನ್ನು ಉಳಿಸಿ-ಬೆಳೆಸುವುದು ಇಂದು ಅಸಾಧ್ಯವಾಗಿದೆ. ಕಲಾ ಮಾಧ್ಯಮದ ಮುಖಾಂತರ ಸ್ವಲ್ಪ ಮಟ್ಟಿಗೆ ಕನ್ನಡವನ್ನು ಉಳಿಸಬಹುದಾಗಿದೆ. ಹೊರನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುತ್ತಿರುವ ಕಾರ್ಯ ಅಭಿನಂದನೀಯ. ನನ್ನ ಕೃತಿಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿದ ಸಂಸ್ಥೆಗೆ ಕೃತಜ್ಞಳಾಗಿದ್ದೇನೆ – ಲೀಲಾವತಿ ರಾಮಕೃಷ್ಣ ಮೈಸೂರು (ಕಥಾ ಪ್ರಶಸ್ತಿ ಪುರಸ್ಕೃತರು). ಕನ್ನಡವೇ ಉಸಿರೆಂದು ಹೇಳುವ ಕರ್ನಾಟಕದ ಜನತೆಗಿಂತ ಗಡಿಯಾಚೆಯೂ ಕನ್ನಡವನ್ನು ಉಳಿಸಿ-ಬೆಳೆಸುತ್ತಿರುವ ನಿಮ್ಮೆಲ್ಲರ ಕಾರ್ಯ ಅಭಿನಂದನೀಯ. ಮನುಷ್ಯ ವೃತ್ತಿಯ ಜತೆ ಪ್ರವೃತ್ತಿಯೂ ಮನುಷ್ಯನ ಬದುಕಿಗೆ ಸ್ಫೂರ್ತಿದಾಯಕವಾಗಿದೆ. ನನ್ನ ಬರವಣಿಗೆಗೆ ಸ್ಫೂ³ರ್ತಿ ನೀಡಿ, ನಾನು ಎಲ್ಲಿದ್ದೇನೆ ಎಂಬ ನನ್ನ ಕಾವ್ಯ ಸಂಗ್ರಹಕ್ಕೆ ಸಂಸ್ಥೆಯ ಕವಿತಾ ಪುರಸ್ಕಾರವನ್ನು ಪ್ರದಾನಿಸಿದ್ದು ನನ್ನ ಭಾಗ್ಯವೆಂದು ತಿಳಿದಿದ್ದೇನೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಜಗಜ್ಯೋತಿ ಸಂಸ್ಥೆಗೆ ಋಣಿಯಾಗಿದ್ದೇನೆ
– ಅಕ್ಷಯಾ ಆರ್. ಶೆಟ್ಟಿ ಮಂಗಳೂರು (ಕವಿತಾ ಪ್ರಶಸ್ತಿ ಪುರಸ್ಕೃತರು). ಚಿತ್ರ-ವರದಿ : ಗುರುರಾಜ ಪೋತನೀಸ್