Advertisement

ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಕೆ ಬಗ್ಗೆ ಕೇಂದ್ರ ಸಚಿವರ ಜೊತೆ ಶೆಟ್ಟರ್ ಮಾತುಕತೆ

03:12 PM May 05, 2021 | Team Udayavani |

ಬೆಂಗಳೂರು: ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಜೊತೆ ಮಾತುಕತೆ ಮಾಡಿದ್ದೇನೆ. ಸಂಜೆಯೊಳಗೆ ತಿಳಿಸುವುದಾಗಿ ಹೇಳಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

Advertisement

ಟಾಸ್ಕ್ ಫೋರ್ಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ್ದೇವೆ. ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಅವರಿಗೆ ಹಲವು ಸೂಚನೆ ನೀಡಲಾಗಿದೆ ಎಂದರು.

ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬೇರೆ ರಾಜ್ಯಗಳಿಗೆ ಕಳುಹಿಸಬಾರದು ಎಂದು ಮನವಿ ಮಾಡಿದ್ದೇವೆ. ನಮಗೆ ಸಿಗಲಿದೆ ಎನ್ನುವ ವಿಶ್ವಾಸ ಇದೆ ಎಂದರು.

ಇದನ್ನೂ ಓದಿ:ಚಾಮರಾಜನಗರ ಡಿಸಿ ಸರಿಯಾಗಿ ಆಕ್ಸಿಜನ್ ನಿರ್ವಹಣೆ ಮಾಡದೆ ನಮ್ಮ ಮೇಲೆ ಆರೋಪ : ರೋಹಿಣಿ ನಿಂಧೂರಿ

ನಮ್ಮಲ್ಲಿ ತಯಾರಾಗುವ ಆಕ್ಸಿಜನ್ ನಮಗೆ ಉಳಿದರೆ, ನಮ್ಮಲ್ಲಿ ಸಹಾಯವಾಗಲಿದೆ. ಯಾವ್ಯಾವ ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕಿದೆ ಎಂದು ನೋಡಿ ಅದನ್ನು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

Advertisement

ಜಿಂದಾಲ್ ಸಂಸ್ಥೆಯವರು ಆಕ್ಸಿಜನ್ ಉತ್ಪಾದನೆ ಹೆಚ್ಚು ಮಾಡಿದ್ದಾರೆ. ಸದ್ಯ 800-1000 ಟನ್ ಉತ್ಪಾದಿಸುತ್ತಿದ್ದಾರೆ. ಜಿಂದಾಲ್ ಜೊತೆ ಮಾತನಾಡಿದ್ದೇನೆ. ಕಬ್ಬಿಣ ಉತ್ಪಾದನೆ ಸ್ಥಗಿತಗೊಳಿಸಿ, ಆಕ್ಸಿಜನ್  ಪೂರೈಸಲು ಮನವಿ ಮಾಡಿದ್ದೇವೆ ಎಂದರು.

80 ಮೆಟ್ರಿಕ್ ಟನ್ ಆಕ್ಸಿಜನ್ ಅರಬ್ ದೇಶದಿಂದ ತರಿಸುತ್ತಿದ್ದೇವೆ. ಅದರಲ್ಲಿ ನಮ್ಮ ರಾಜ್ಯಕ್ಕೂ ಕೂಡ ಪಾಲ ಸಿಗಲಿದೆ ಎಂದ ಅವರು, ಬೆಂಗಳೂರಿನ ಹೊಸೂರು ಸೇರಿದಂತೆ ಹಲವು ಭಾಗದಿಂದ ಆಕ್ಸಿಜನ್ ತರಿಸಲಾಗುವುದು. ಮುಂದಿನ ದಿನಗಳಲ್ಲಿ 1,500 ಟನ್ ಆಕ್ಸಿಜನ್ ಲಭ್ಯವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಪ್ರಧಾನಿ ಮುಂದೆ ಮಾತನಾಡಲು ನಾಲಿಗೆ ಸತ್ತು ಹೋಗಿದೆಯೇ? ಖಂಡ್ರೆ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next