Advertisement
ಸೋಮವಾರ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಠದ ಅಭಿನವ ಸಂಗನಬಸವ ಶ್ರೀಗಳ ಅತಿಥ್ಯದಲ್ಲಿ ಸಭೆ ಸೇರಿದ್ದ ವಿವಿಧ ಪರಂಪರೆ ಹೊಂದಿರುವ ಪಂಚಮಸಾಲಿ ಮಠಾಧೀಶರ ಸಭೆಯಲ್ಲಿ ಸಮಾಜದ ಎಲ್ಲ ಸ್ವಾಮಿಗಳನ್ನು ಒಳಗೊಂಡ ಒಕ್ಕೂಟ ರಚನೆಗೆ ನಿರ್ಧರಿಸಲಾಗಿದೆ.
Related Articles
Advertisement
ಪಂಚಮಸಾಲಿ ಮಠಾಧೀಶರ ಒಕ್ಕೂಟ ರಚನೆ ಹಾಲಿ ಇರುವ ಎರಡೂ ಪೀಠಗಳಿಗೆ ವಿರೋಧವೂ ಇಲ್ಲ, ಪರ್ಯಾವೂ ಅಲ್ಲ. ಮೂರನೇ ಪೀಠ ಕಟ್ಡುವ ಉದ್ದೇಶ ಇಲ್ಲವೇ ಇಲ್ಲ. ಬದಲಾಗಿ ಸಮಾಜದ ಜನರಲ್ಲಿ ಧಾರ್ಮಿಕ ಸಂಸ್ಕಾರ ನೀಡುವ, ತಾಲೂಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಈ ಕುರಿತೇ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಭಿನವ ಸಂಗನಬಸವ ಶ್ರೀಗಳು ತಿಳಿಸಿದ್ದಾರೆ.
ಮಠಾಧೀಶರ ಸದರಿ ಒಕ್ಕೂಟಕ್ಕೆ ಜಗದ್ಗುರು ಪೀಠಗಳ ಸ್ವಾಮಿಗಳನ್ನು ನಾವು ಆಹ್ವಾನಿಸಿಲ್ಲ. ಅವರ ಕಾರ್ಯಕ್ರಮಗಳಿಗೆ ಆಹ್ವಾನ ಇಲ್ಲದಿದ್ದರೂ ಸಮಾಜದ ಕೆಲಸವೆಂದು ನಾವೇ ಹೋಗುತ್ತೇವೆ. ಮೀಸಲು ಹೋರಾಟದ ಸಂದರ್ಭದಲ್ಲೂ ನಾವಾಗೇ ಹೋಗಿ ಪಾಲ್ಗೊಂಡಿದ್ದೇವೆ. ಮಠಾಧೀಶರ ಒಕ್ಕೂಟಕ್ಕೂ ಪೀಠಗಳ ಸ್ವಾಮಿಗಳು ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಿಲೋಗಿ ಮಠದ ಸಿದ್ಧಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಸದರಿ ಒಕ್ಕೂಟಕ್ಕೆ ಸೇರಲು 65 ಮಠಾಧೀಶರು ಸಮ್ಮತಿಸಿದ್ದು, ಮನಗೂಳಿ ಸಭೆಯಲ್ಲಿ 42 ಮಠಗಳ ಸ್ವಾಮಿಗಳು ಪಾಲ್ಗೊಂಡಿದ್ದರು ಎಂದು ಉಭಯ ಶ್ರೀಗಳು ತಿಳಿಸಿದ್ದಾರೆ.