Advertisement

ಜಗದ್ಗುರು ಮೌನೇಶ್ವರ ಜಾತ್ರೆ: ಪಲ್ಲಕ್ಕಿ ಮೆರವಣಿಗೆ

03:41 PM Apr 13, 2018 | Team Udayavani |

ಭಾಲ್ಕಿ: ಜಗದ್ಗುರು ಮೌನೇಶ್ವರರ 32ನೇ ವಾರ್ಷಿಕ ಜಾತ್ರಾಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಪಲ್ಲಕ್ಕಿ ಮೆರವಣಿಗೆಯು ಶ್ರದ್ಧೆ, ಭಕ್ತಿಯಿಂದ ಜರುಗಿತು. ಬೆಳಗ್ಗೆ 8ಕ್ಕೆ ಕಾಳಿಕಾದೇವಿ ದೇಗುಲದಲ್ಲಿ ಪಲ್ಲಕ್ಕಿ ಮೆರವಣಿಗೆಗೆ ಜಗದ್ಗುರು ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಏಕನಾಥರಾವ್‌ ಪಾಂಚಾಳ ಚಾಲನೆ ನೀಡಿದರು. ಮೌನೇಶ್ವರ ಮಂದಿರದಿಂದ ಆರಂಭಗೊಂಡ ಮೆರವಣಿಗೆ ತೀನ್‌ ದುಕಾನ್‌, ಧರ್ಮೇಶ್ವರ ದೇಗುಲ, ಬೊಮ್ಮಗೊಂಡೇಶ್ವರ ವೃತ್ತ, ಬಸ್‌ ನಿಲ್ದಾಣ, ಅಂಬೇಡ್ಕರ ವೃತ್ತ, ಗಾಂಧಿ ವೃತ್ತದ ರಸ್ತೆಯಿಂದ ಸಾಗಿ ಪುನಃ ಮೌನೇಶ್ವರ ದೇಗುಲದಲ್ಲಿ ಸಮಾವೇಶಗೊಂಡಿತು.

Advertisement

ನಂತರ ಮಹಾ ಮಂಗಳಾರುತಿ, ಪೂಜೆ ಸೇರಿದಂತೆ ನಾನಾ ಕೈಂಕರ್ಯಗಳು ನೆರವೇರಿದವು. ಮೆರವಣಿಗೆಯಲ್ಲಿ ಪುರವಂತರು, ಕಳಸ ಹೊತ್ತ ಸುಮಂಗಲೆಯರು ಗಮನ ಸೆಳೆದರು.  ಹುಮನಾಬಾದನ ಏಕದಂಡಿ ಪೀಠದ ಕುಮಾರ ಸ್ವಾಮೀಜಿ, ಜಗದ್ಗುರು ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಏಕನಾಥರಾವ್‌ ಪಾಂಚಾಳ, ಉಪಾಧ್ಯಕ್ಷ ಅಶೋಕರಾವ್‌ ಸೋನಾರ್‌, ಖಜಾಂಚಿ ರಾಜಕುಮಾರ ಪಾಂಚಾಳ, ರಾಜು ಪಾಂಚಾಳ, ಬಾಬುರಾವ್‌ ಕಂಬಾರ್‌, ಬಸಪ್ಪ ಪಾಂಚಾಳ, ದಿಲೀಪ ಪಾಂಚಾಳ, ಧನರಾಜ, ಗಣಪತಿ, ಚಂದ್ರಕಾಂತ ಪಾಂಚಾಳ, ಅನಿಲ ಪಾಂಚಾಳ, ಸಂಜುಕುಮಾರ ಪಾಂಚಾಳ,
ವಿಠಲರಾವ್‌ ಪಾಂಚಾಳ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next