ಜೇವರ್ಗಿ: ಯಡ್ರಾಮಿ ಸಮೀಪದ ಆಲೂರ ಗ್ರಾಮದ ಸದ್ಗುರು ಕೆಂಚಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕಿ ಉತ್ಸವ ಜರುಗಿತು.
ಬೆಳಗ್ಗೆ 10:30 ಗಂಟೆಗೆ ಆಲೂರ ಗ್ರಾಮದ ಬಸ್ ನಿಲ್ದಾಣದಿಂದ ವಿವಿಧ ಬಡಾವಣೆಗಳ ಮೂಲಕ ಸದ್ಗುರು ಕೆಂಚಬಸವೇಶ್ವರ ಸಂಸ್ಥಾನ ಹಿರೇಮಠದ ವರೆಗೆ ಅಡ್ಡಪಲ್ಲಕಿ ಉತ್ಸವ ನಡೆಯಿತು. ನೂರಾರು ಮುತ್ತೆ$çದೆಯರು ಕುಂಭ-ಕಳಸ, ಡೊಳ್ಳು, ಭಾಜಾ ಭಜಂತ್ರಿ ಸೇರಿದಂತೆ ವಿವಿಧ ಕಲಾತಂಡಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.
ಕಲಬುರಗಿ ಜಿಲ್ಲೆ ಸೇರಿದಂತೆ ನೆರೆಯ ಯಾದಗಿರಿ, ಶಹಾಪುರ, ಸಿಂದಗಿ ಕಡೆಯಿಂದ ಭಕ್ತರ ದಂಡೇ ಆಗಮಿಸಿತ್ತು. ಅಡ್ಡಪಲ್ಲಕಿ ಮಹೋತ್ಸವದಲ್ಲಿ ಆಲೂರ-ಕಾಸರಭೋಸಗಾದ ಕೆಂಚವೃಷಬೇಂದ್ರ ಶಿವಾಚಾರ್ಯರು, ಬಾಲತಪಸ್ವಿ ಸಾಂಬ ಶಿವಯೋಗಿ ಶಿವಾಚಾರ್ಯರು, ನಿಡಗುಂದದ ಕರುಣೇಶ್ವರ ಸ್ವಾಮೀಜಿ,
ಹಿಪ್ಪರಗಾ ಎಸ್.ಎನ್. ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಮುಖಂಡರಾದ ರಾಜಶೇಖರ ಸೀರಿ, ಗೊಲ್ಲಾಳಪ್ಪಗೌಡ ಮಾಗಣಗೇರಾ, ಚಂದ್ರಶೇಖರ ಪುರಾಣಿಕ, ವಿಶ್ವನಾಥ ಸಾಹು ಆಲೂರ, ಸೋಮಶೇಖರ ಮಾಲಿಪಾಟೀಲ, ಎಸ್. ಕೆ. ಹೇರೂರ, ಹಣಮಂತ್ರಾಯ ಹೆಡಗಿಜೋಳ, ಈರಣ್ಣ ಹೆಡಗಿಜೋಳ ಮತ್ತಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆ 6:00 ಗಂಟೆಗೆ ಕೆಂಚಬಸವೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಸಂಜೆ 6:00 ಗಂಟೆಗೆ ರಥೋತ್ಸವ ಜರುಗಿತು.