Advertisement

ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಹಜ : ಸಚಿವ ಜಗದೀಶ ಶೆಟ್ಟರ್

07:52 PM Jan 13, 2021 | Team Udayavani |

ಕೊಪ್ಪಳ: ಸರ್ಕಾರದಲ್ಲಿ ಸಚಿವರಾಗಬೇಕು ಎಂದು ಎಲ್ಲರೂ ಆಸೆ ಇರುತ್ತೆ. ಹಾಗಾಗಿ ಹೆಚ್ಚು ಆಕಾಂಕ್ಷಿಗಳೂ ಇರ್ತಾರೆ. ಸಂಪುಟ ವಿಸ್ತರಣೆಯ ವೇಳೆ ಅಸಮಾಧಾನ ಕಾಣಿಸಿಕೊಳ್ಳುವುದು ಸಹಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರು ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿಎಂ ಸೇರಿ ಎಲ್ಲ ನಾಯಕರು ಸೇರಿಕೊಂಡು ಅದೆಲ್ಲವನ್ನು ಸರಿಪಡಿಸಲಿದ್ದೇವೆ. ಜನಸೇವಕ ಸಮಾವೇಶದಲ್ಲಿ ನಿರಂತರ ಪ್ರವಾಸದಲ್ಲಿದ್ದೇನೆ. ಯತ್ನಾಳ ಹೇಳಿಕೆಯನ್ನ ನಾನು ಗಮನಿಸಿಲ್ಲ. ಯಾರೋ ವಯಕ್ತಿಕ ಹೇಳಿಕೆ ಕೊಟ್ಟರೆ ನಾನು ಪ್ರತಿಕ್ರಿಯಿಸಲ್ಲ. ಸಿ.ಡಿ ವಿಚಾರವೂ ನನಗೆ ಗೊತ್ತಿಲ್ಲ. ಅದಕ್ಕೆ ಪಕ್ಷದ ವರಿಷ್ಠರು ಪ್ರತಿಕ್ರಿಯೆ ಕೊಡಲಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ತ್ಯಾಗ ಮಾಡಿದವರು ಕಾರಣೀಕರ್ತರಾಗಿದ್ದಾರೆ. ಅವರಿಗೆ ಮೊದಲ ಆದ್ಯತೆ ಕೊಡುತ್ತಿರುವುದರಿಂದ ಜಿಲ್ಲಾ ಪ್ರಾತಿನಿಧ್ಯದಡಿ ಸಚಿವ ಸ್ಥಾನ ಕೊಡಲಾಗಿಲ್ಲ. ಕೆಲವು ಪ್ರಾದೇಶಿಕಕ್ಕೂ ತೊಂದರೆ ಆಗಿದೆ. ಮುಂದಿನ ದಿನದಲ್ಲಿ ಅಂತ ಜಿಲ್ಲೆಗಳ ನಾಯಕರಿಗೆ ಬೇರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.

ಹೆಚ್.ವಿಶ್ವನಾಥ ಅವರು ಸಿಎಂ ಕೊಟ್ಟ ಮಾತಿಗೆ ನಡೆದಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಒಂದು ಬಾರಿ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ. ನೂರಕ್ಕೆ ಶೇ.90 ರಷ್ಟು ನಡೆದುಕೊಂಡಿದ್ದಾರೆ. ಎಲ್ಲೋ ಶೇ.1-2 ರಷ್ಟು ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಮಾತು ಕೊಟ್ಟಂತೆ ನಡೆದಿಲ್ಲ ಎನ್ನುವ ಹೇಳಿಕೆಯು ಸರಿಯಲ್ಲ.

ಇದನ್ನೂ ಓದಿ:ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ :CM ಹೇಳಿಕೆಗೆ ಸಿದ್ದು ತಿರುಗೇಟು

Advertisement

ಯಾರಿಗೆ ಮನಸ್ಸಿಗೆ ನೋವಾಗಿದ್ದರೆ ಅವರು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಆ ಸಮಸ್ಯೆಯನ್ನ ಬಗೆ ಹರಿಸಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ಕೊಡುವುದು ತರವಲ್ಲ ಎಂದರು.

ಸಿಎಂ ಬದಲಾವಣೆ ವಿಚಾರದ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ನಮ್ಮ ಪಕ್ಷದ ವಕ್ತಾರರಾ ? ಅಥವಾ ಪಕ್ಷದ ಹೈಕಮಾಂಡ್ ? ಅವರಿಗೇನು ಹೇಳಲು ಹಕ್ಕಿದೆ. ಇಂತಹ ಅರ್ಥವಿಲ್ಲದ ಹೇಳಿಕೆ ಕೊಡುವುದು ತರವಲ್ಲ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನ ಸಿಗದೇ ಇರುವ ಕುರಿತು ಸಿಎಂ ಗಮನಕ್ಕೆ ತರುವೆ. ಜೊತೆಗೆ ಕೋರ್ ಕಮಿಟಿಯಲ್ಲಿ ಈ ವಿಷಯ ಚರ್ಚೆ ಮಾಡುವೆ. ಕ್ಲಿಸ್ಟಕರ ವಾತಾವರಣದಲ್ಲಿ ಸರ್ಕಾರ ರಚನೆಯಾಗಿದೆ.

ಕೆಲವು ಜಿಲ್ಲೆಗೆ ಹೆಚ್ಚು ಸ್ಥಾನ ಸಿಗುತ್ತೆ. ಕೆಲವು ಜಿಲ್ಲೆಗೆ ಸಿಗಲ್ಲ. ಸಿಗದೇ ಇರುವ ಜಿಲ್ಲೆಗಳ ನಾಯಕರಿಗೆ ಬೇರೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next