ಚಿತ್ರದುರ್ಗ : ದೇಶದಲ್ಲಿ ಮುಗ್ದ ರೈತರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೇಸ್ ಹಾಗೂ ಇನ್ನಿತರ ಪಕ್ಷಗಳು ನಡೆಸುತ್ತಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಮೋದಿ ಸರಕಾರ ರೈತರಿಗೆ ಅನುಕೂಲವಾಗುವಂತಹ ಕಾಯ್ದೆಯನ್ನು ತಂದಿದ್ದಾರೆ, ಆದರೆ ಮುಗ್ದ ರೈತರನ್ನು ದಾರಿ ತಪ್ಪಿಸುವ ಕೆಲಸ ಕೆಲವು ಪಕ್ಷಗಳು ಮಾಡುತ್ತಿವೆ ಎಂದರು.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಪ್ರಧಾನಿ ಮೋದಿಯವರಿಗಿದೆ ಈ ಕಾಯ್ದೆಯಿಂದ ರೈತರಿಗೆ ಅನುಕೂಲಗಳು ಹೆಚ್ಚು ಹಾಗಾಗಿ ಈ ಕಾಯ್ದೆಯ ಪ್ರಯೋಗ ನಡೆಸಲು ಸ್ವಲ್ಪ ಸಮಯ ಬೇಕು, ಒಂದು ವೇಳೆ ಈ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವ ಹಾಗಿದ್ದಲ್ಲಿ ಎರಡು ವರ್ಷದ ಬಳಿಕ ವಾಪಾಸ್ ಪಡೆಯಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ನಾಳೆಯಿಂದ ಏಳು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ಆರಂಭ
ದೆಹಲಿಯಲ್ಲಿ ನಡೆದ ಗಲಭೆಗೆ ಕಾಂಗ್ರೇಸ್ ಕುಮ್ಮಕ್ಕು ನೀಡಿದೆ ಹಾಗಾಗಿ ಪ್ರತಿಭಟನೆ ದಿಕ್ಕು ತಪ್ಪಿದೆ ಎಂದು ಆರೋಪಿಸಿದ್ದಾರೆ.