Advertisement

ಜಾಫ‌ರ್‌ 11 ಸಾವಿರ ರನ್‌ ದಾಖಲೆ

06:00 AM Nov 22, 2018 | |

ನಾಗ್ಪುರ: ವಿದರ್ಭದ ಕ್ರಿಕೆಟಿಗ ವಾಸಿಮ್‌ ಜಾಫ‌ರ್‌ ರಣಜಿ ಇತಿಹಾಸದಲ್ಲಿ 11 ಸಾವಿರ ರನ್‌ ಪೇರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2018-19ರ ರಣಜಿ ಋತು ವಿನ 3ನೇ ಸುತ್ತಿನ ಪಂದ್ಯದಲ್ಲಿ ಬರೋಡಾ ವಿರುದ್ಧ ಜಾಫ‌ರ್‌ ಈ ಸಾಧನೆಗೈದರು. 

Advertisement

ನಾಗ್ಪುರಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಾಫ‌ರ್‌, ನಾಯಕ ಫೈಜ್‌ ಫ‌ಜಲ್‌ ಜತೆಗೂಡಿ 2ನೇ ವಿಕೆಟ್‌ಗೆ ಭರ್ಜರಿ 300 ರನ್‌ ಜತೆಯಾಟ ನೀಡಿದರು. ಇದರಲ್ಲಿ ಜಾಫ‌ರ್‌ ಗಳಿಕೆ 153 ರನ್‌. ವೈಯಕ್ತಿಕ 97 ರನ್‌ ಗಳಿಸಿದಾಗ 11,000 ರನ್‌ ಗಡಿ ಮುಟ್ಟಿದ ಜಾಫ‌ರ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ದಾಖಲಿಸಿದ ಅಮೋಲ್‌ ಮುಜುಮಾªರ್‌ ದಾಖಲೆ ಮುರಿದರು. 

Advertisement

Udayavani is now on Telegram. Click here to join our channel and stay updated with the latest news.

Next