Advertisement

ಜೋಡಿ ಮಾರುತಿಗೆ ಎತ್ತಿ ಆರತಿ

12:30 AM Feb 09, 2019 | |

ಗದುಗಿನ ಕಿಲ್ಲಾ ಓಣಿಯಲ್ಲಿರುವ ಜೋಡ ಹನುಮಂತ ದೇವಸ್ಥಾನದಲ್ಲಿರುವ ಮಾರುತಿ, ದೈವ ಭಕ್ತರ ಆರಾಧ್ಯ ದೈವವೆಂದೇ ಹೆಸರಾಗಿದೆ.  ಇಷ್ಟಾರ್ಥಗಳನ್ನು ಪೂರೈಸುವ ಕರುಣಾಮಯ ಎಂದೂ ಈ ದೇವರನ್ನು ಕರೆಯಲಾಗುತ್ತದೆ.  ಪ್ರಾಚೀನ ಮತ್ತು ಸುಕ್ಷೇತ್ರವಾಗಿರುವ ಈ ದೇಗುಲ ಇಡೀ ಉತ್ತರ ಕರ್ನಾಟಕದಲ್ಲಿಯೇ ಇಬ್ಬರು ರಾಮಧೂತರ (ಮಾರುತಿ) ಜೊತೆಯಾಗಿ ನಿತ್ಯ ಪೂಜಿಸಲ್ಪಡುವುದು ಇಲ್ಲಿ ಮಾತ್ರ ಎಂಬುದು ವಿಶೇಷ.

Advertisement

ಗದುಗಿನ ಮೂಲ ಮಾರುತಿ ದೇಗುಲವಾಗಿರುವ ಇದು ಹಿಂದೊಮ್ಮೆ ಊರ ಹೊರವಲಯದ ದೇವಸ್ಥಾನವಾಗಿತ್ತು. ಈ ದೇವಸ್ಥಾನಕ್ಕೆ ಜೋಡ ಹನಮಂತ ದೇವಸ್ಥಾನವೆಂದು ಹೆಸರು ಬರಲು ಐತಿಹಾಸಿಕ ಹಿನ್ನೆಲೆ ಇದೆ. ಸುಮಾರು 500 ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾದ ಸಮರ್ಥ ರಾಮದಾಸರು ತೀರ್ಥಯಾತ್ರೆ ವೇಳೆ ಗದುಗಿನ ಶ್ರೀ ಮಾರುತಿ ದೇವಸ್ಥಾನದಲ್ಲಿ ಈ ಮೂರ್ತಿ ಪ್ರತಿಷ್ಠಾಪನೆ ಮಾಡಿದರಂತೆ. ಅದಕ್ಕೂ ಮೊದಲು ಇಲ್ಲಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದ ಹನುಮನ ಮೂರ್ತಿ ಇತ್ತಂತೆ.  ಕಾಲಾನಂತರ ಜಕಣಾಚಾರ್ಯರು ಕೆತ್ತಲ್ಪಟ್ಟ ಕಲ್ಲಿನ ಗರ್ಭಗುಡಿಯಲ್ಲಿ ಅಕ್ಕಪಕ್ಕದಲ್ಲಿ ಜೊತೆಯಾಗಿ ಮಾರುತಿ ಮೂರ್ತಿಗಳನ್ನು ಸ್ಥಾಪಿಸಲಾಯಿತ್ತಂತೆ. ನಂತರ ಜೋಡ ಹನುಮಂತ ದೇವಸ್ಥಾನವಾಗಿ ಪ್ರಸಿದ್ಧಿ ಪಡೆಯಿತು ಎಂಬ ಪ್ರತೀತಿ ಇದೆ. 

ಪೂಜ್ಯನೀಯ ಸ್ಥಾನ
 ಜೋಡು ಮಾರುತಿ ದೇವಸ್ಥಾನದ ಸನ್ನಿಧಿಯಲ್ಲಿ ಗುಡಿಯ ಬಲಕ್ಕೆ ನಂದಿ ಮೂರ್ತಿ, ಎಡಕ್ಕೆ ಈಶ್ವರ ಮೂರ್ತಿ ಮತ್ತು ಗರ್ಭಗುಡಿ ಹಿಂದುಗಡೆ ಶನೈಶ್ಚರ ಮೂರ್ತಿಗಳಿವೆ. ದೇವಸ್ಥಾನದ ಎದುರು ತುಳಸಿಕಟ್ಟೆ, ದ್ವೀಪಸ್ತಂಭ, ಅರಳಿ ಮರ, ಮರದ ಕೆಳಗೆ ನಾಗ ದೇವರ ಕಟ್ಟೆ, ಸಮುದಾಯ ಭವನ ಇವೆ. ಹನುಮನ ನಿತ್ಯ ಪೂಜಾ ಕೈಂಕರ್ಯಗಳಿಗೆ ಪೂಜಾರ ಮನೆತನದಿಂದ ಅರ್ಚಕ ಸೇವೆ ನಡೆಯುತ್ತಿದೆ. 
ವರ್ಷವಿಡೀ ಕಾರ್ಯಕ್ರಮ: ಶ್ರೀ ಜೋಡ ಹನಮಂತ ದೇವಸ್ಥಾನ ಟ್ರಸ್ಟ್‌ ಮತ್ತು ಶ್ರೀ ಜೋಡಿ ಮಾರುತಿ ಯುವಕ ಮಂಡಳಿಯ ಆಶ್ರಯದಲ್ಲಿ ದೇವಸ್ಥಾನದಲ್ಲಿ ವರ್ಷವಿಡೀ ಧಾರ್ಮಿಕ ಮತ್ತು ಸಮಾಜ ಸೇವಾ ಕಾರ್ಯಕ್ರಮ ಜರುಗುತ್ತವೆ. ಪ್ರತಿ ಶನಿವಾರ ವಿಶೇಷ ಪೂಜೆ, ರಾತ್ರಿ ಪಲ್ಲಕ್ಕಿ ಸೇವೆ, ಪ್ರಸಾದ ವಿತರಣೆ ನಡೆಯುತ್ತದೆ. 

ಬುತ್ತಿ ಪೂಜೆ
ಪ್ರತಿ ಶನಿವಾರ ಜೋಡ ಹನಮಂತ ದೇವಸ್ಥಾನಕ್ಕೆ ಸುಮಾರು 10 ಸಾವಿರ ಭಕ್ತರು ಆಗಮಿಸಿ ಮಾರುತಿ ದೇವರ ದರ್ಶನ ಪಡೆಯುತ್ತಾರೆ. ಗದಗ ನಗರ ನಿವಾಸಿಗಳು ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಪ್ರತಿ ಶನಿವಾರ ಈ ಜೋಡ ಹನುಮಂತನಿಗೆ ವಿಶೇಷ ಪೂಜೆ ಮತ್ತು ಅಲಂಕಾರ ನಡೆಯುತ್ತದೆ. ಮೈತುಂಬ ದ್ರಾಕ್ಷಿ, ಸುತ್ತಲೂ ಘಮಘಮಿಸುವ ಪೇಡೆಗಳ ಅಲಂಕಾರ, ಒಂದು ವಾರ ಬುತ್ತಿ ಪೂಜೆ, ಮತ್ತೂಂದು ವಾರ ವಿವಿಧ ಹಣ್ಣುಗಳು, ಹೂವುಗಳಿಂದ ಅಲಂಕಾರ, ಮತ್ತೂಂದು ವಾರ ವಸ್ತ್ರಗಳಿಂದ, ವೀಳೆÂದೆಲೆ, ಬಾಳೆಹಣ್ಣು, ಉದ್ದಿನವಡೆ ಮತ್ತು ಇತರೆ ಸಿಹಿ ಪದಾರ್ಥಗಳ ಅಲಂಕಾರದೊಂದಿಗೆ ಪೂಜಿಸ್ಪಡುತ್ತಾನೆ ಹನುಮಂತ. ಾªನೆ.

Advertisement

ಶರಣು ಹುಬ್ಬಳ್ಳಿ
 

Advertisement

Udayavani is now on Telegram. Click here to join our channel and stay updated with the latest news.

Next