Advertisement

ಜಾಧವ್‌ ಪ್ರಕರಣ: ವಾದ ಮಂಡನೆಗೆ ಪಾಕ್‌ ಸಿದ್ಧತೆ

06:55 AM Oct 08, 2017 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಬಂಧಿತ ಭಾರತೀಯ ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದಲ್ಲಿ ಪಾಕಿಸ್ತಾನ ತನ್ನ ವಾದವನ್ನು ಶೀಘ್ರದಲ್ಲೇ ಮಂಡಿಸಲಿದೆ. ಭಾರತದ ಆರೋಪಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಾದ ಮಂಡನೆ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಪಾಕಿಸ್ತಾನದ ವಾದ ಮಂಡನೆಯ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಲಿದೆ.

Advertisement

ಈ ಸಂಬಂಧ ಅಟಾರ್ನಿ ಜನರಲ್‌ ಅಶ¤ರ್‌ ಔಸಫ್ ಅಲಿ ಕಾನೂನು ಪರಿಣಿತರ ಸಭೆ ನಡೆಸಿದ್ದಾರೆ. ಜಾಧವ್‌ ಗೂಢಚಾರಿಕೆ ಮಾಡುತ್ತಿದ್ದರು ಎಂಬುದನ್ನು ಪ್ರತಿಪಾದಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ಪ್ರತಿ ವಾರವೂ ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಅವಲೋಕನ ನಡೆಸಲು ಸಭೆ ನಡೆಸಲು ನಿರ್ಧರಿಸಲಾಗಿದೆ. 2016ರ ಮಾರ್ಚ್‌ನಲ್ಲಿ ಜಾಧವ್‌ರನ್ನು ಬಂಧಿಸಿದ್ದ ಪಾಕಿಸ್ತಾನ, ಅವರನ್ನು ಭಾರತದ ಗೂಢಚಾರ ಎಂದಿತ್ತು. ಅಲ್ಲದೆ ಕೋರ್ಟ್‌ ಜಾಧವ್‌ಗೆ ಮರಣದಂಡನೆ ವಿಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next