Advertisement

ಜಡೇಜಾ, ಬುಮ್ರಾ ಬಿಗು ದಾಳಿ ನಡುವೆ ಸ್ಮಿತ್ ಶತಕದಾಟ: ಆಸೀಸ್ ಉತ್ತಮ ಮೊತ್ತ

09:27 AM Jan 08, 2021 | Team Udayavani |

ಸಿಡ್ನಿ: ಶತಕ ವಂಚಿತ ಲಬುಶೇನ್, ವರ್ಷದ ನಂತರ ಸ್ಮಿತ್ ಶತಕದಾಟ, ಜಡೇಜಾ, ಬುಮ್ರಾ ಬಿಗು ದಾಳಿ.. ಇದು ಸಿಡ್ನಿ ಟೆಸ್ಟ್ ನ ಆಸೀಸ್ ಮೊದಲ ಇನ್ನಿಂಗ್ಸ್ ನ ಹೈಲೈಲ್ಟ್ಸ್.

Advertisement

ಆಸೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 105.4 ಓವರ್ ನಲ್ಲಿ 338 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಮಿತ್ 131 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 91 ರನ್ ಗೆ ಔಟಾಗಿ ಶತಕ ವಂಚಿತರಾದರು.

ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಕಾಂಗರೂಗಳಿಗೆ ಸ್ಮಿತ್ ಮತ್ತು ಲಬುಶೇನ್ ಆಧಾರವಾದರು. ನಂತರ ಬಂದ ಮ್ಯಾಥ್ಯೂ ವೇಡ್ ಮತ್ತು ಕ್ಯಾಮರೂನ್ ಗ್ರೀನ್, ಟಿಮ್ ಪೇನ್, ಪ್ಯಾಟ್ ಕಮಿನ್ಸ್ ಬೇಗನೇ ವಿಕೆಟ್ ಒಪ್ಪಿಸಿದರು.

ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್ ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next