Advertisement
ಚಿತ್ರದ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ದೇಶಕ ರಘು, “ಚಿತ್ರೀಕರಣ ನಡೆಸುವ ಸ್ಥಳ ಹುಡುಕುತ್ತಾ ಊರಿಗೆ ಹೋಗಿದ್ದೆವು. ಅಲ್ಲಿ ಅರಸಿಕೆರೆ ಬಳಿ ಬೆಟ್ಟಗುಡ್ಡಗಳ ನಡುವೆ ಕಂಡ ಸುಂದರ ಊರೇ ಜಾಡಘಟ್ಟ. ಕೊನೆಗೆ ಆ ಊರಿನ ಸೊಬಗನ್ನು ನೋಡಿ ಊರಿನ ಹೆಸರನ್ನೇ ಶೀರ್ಷಿಕೆಯಾಗಿಸಿದ್ದೆವು. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು ನಾನೇ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದೇನೆ. ನಾಯಕನಾಗಿಯೂ ನಟಿಸಿದ್ದೇನೆ. ನಿರ್ಮಾಪಕರ, ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದರು.
Related Articles
Advertisement
ಚಿತ್ರತಂಡದ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು, ತಮ್ಮ ಅನುಭವ ಹಂಚಿಕೊಂಡರು. ರಘು ಎಸ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ಸುಹಾನ ಎಸ್ ಗೌಡ, ಹರ್ಷಿತಾ ಹಾಗೂ ಪ್ರೇರಣ ರಾಜು ಅಭಿನಯಿಸಿದ್ದಾರೆ. ವೇಣು, ಲೋಹಿತ್, ಧನುಷ್, ಎಂ.ಜಿ. ಶ್ರೀನಿವಾಸ್, ಅನು, ಮೇಘನಾ, ಮಂಜಮ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.