Advertisement

ಬಾಲಿವುಡ್‌ ನಟಿ ಜಾಕ್ವೆಲಿನ್‌ ಮಧ್ಯಂತರ ಜಾಮೀನು ವಿಸ್ತರಣೆ

08:13 PM Oct 22, 2022 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರು ಸಾಕ್ಷ್ಯಗಳನ್ನು ನಾಶ ಮಾಡಿ, ದೇಶ ಬಿಟ್ಟು ಪರಾರಿಯಾಗಲು ಸಂಚು ರೂಪಿಸಿದ್ದರು. ಆದರೆ, ಅವರ ವಿರುದ್ಧ ಲುಕೌಟ್‌ ನೋಟಿಸ್‌ ಜಾರಿಯಾಗಿರುವುದರಿಂದ ಯತ್ನ ಫ‌ಲಿಸಲಿಲ್ಲ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Advertisement

ನವದೆಹಲಿಯ ಪಾಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಶನಿವಾರ ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಅವರ ಜಾಮೀನು ಅರ್ಜಿಯನ್ನು ತನಿಖಾ ಸಂಸ್ಥೆ ವಿರೋಧಿಸಿ ವಾದ ಮಂಡಿಸಿದ ವೇಳೆ, ಅಂಶವನ್ನು ಬಹಿರಂಗಪಡಿಸಿದೆ.

ಸದ್ಯ ಜೈಲಲ್ಲಿ ಇರುವ ವಂಚಕ ಸುಕೇಶ್‌ ಚಂದ್ರಶೇಖರ್‌ ಜತೆಗೆ 200 ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ವಿರುದ್ಧ ಕೇಸು ದಾಖಲಿಸಲಾಗಿದೆ. ತನಿಖೆಯ ವೇಳೆ ಅವರು ಸಹಕರಿಸಿರಲಿಲ್ಲ. ಸೂಕ್ತ ಸಾಕ್ಷ್ಯಗಳನ್ನು ಅವರಿಗೆ ನೀಡಿದಾಗ ಅವರು ಮೌನ ವಹಿಸಿದ್ದರು ಎಂದು ಇ.ಡಿ.ಪರ ವಕೀಲರು ಹೇಳಿದ್ದಾರೆ.

ಅಂತಿಮವಾಗಿ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ನಟಿಗೆ ನೀಡಲಾಗಿರುವ ಮಧ್ಯಂತರ ಜಾಮೀನನ್ನು ನ.10ರ ವರೆಗೆ ವಿಸ್ತರಿಸಿ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next