Advertisement

ಅಕ್ರಮ ಹಣ ವರ್ಗಾವಣೆ ಪ್ರಕರಣ : ನಟಿ ಜಾಕ್ವೆಲಿನ್‌ ವಿಚಾರಣೆ

08:13 PM Aug 30, 2021 | Team Udayavani |

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೋಮವಾರ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಅವರನ್ನು ದೆಹಲಿಯಲ್ಲಿರುವ ಇ.ಡಿ. ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದಾರೆ.

Advertisement

ಸುಕೇಶ್‌ ಚಂದ್ರಶೇಖರ್‌ ಎಂಬಾತನ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಅವರ ವಿಚಾರಣೆ ನಡೆಸಲಾಗಿದೆ. ಹಲವಾರು ಸುಲಿಗೆ ಆರೋಪಗಳನ್ನು ಹೊಂದಿರುವ ಸುಕೇಶ್‌, ಸದ್ಯಕ್ಕೆ ದೆಹಲಿಯ ರೋಹಿಣಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಇದನ್ನೂ ಓದಿ :ಮಹಾ ಮಳೆಗೆ ಹಳ್ಳ ಉಕ್ಕಿ ಎರಡು ಸೇತುವೆ ಮುಳುಗಡೆ : ನಗರ ರಸ್ತೆ ಸಂಪರ್ಕ ಕಡಿತ

Advertisement

Udayavani is now on Telegram. Click here to join our channel and stay updated with the latest news.

Next