Advertisement

ಸಾವಿರಾರು ಜನರ ಹಸಿವು ನೀಗಿಸುತ್ತಿರುವ ಬಾಲಿವುಡ್ ನಟಿ

04:23 PM May 06, 2021 | Team Udayavani |

ಮುಂಬೈ:ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿನಗೂಲಿ ಕಾರ್ಮಿಕರಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಹೊಟ್ಟೆ ತುಂಬ ಊಟ ಹಂಚಿದ್ದಾರೆ.

Advertisement

ಬಿಟೌನ್ ಬ್ಯೂಟಿ ಜಾಕ್ವೆಲಿನ್, ಕೋವಿಡ್ ಸಂಕಷ್ಟದ ಸಮಯದಲ್ಲಿ ತೊಂದರೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಫೌಂಡೆಶನ್‍ವೊಂದನ್ನು ಶುರು ಮಾಡಿದ್ದಾರೆ. ಇದು ಹಲವು ಎನ್‍ಜಿಒಗಳ ಜೊತೆ ಕೈ ಜೋಡಿಸಿದೆ. ಈ ಫೌಂಡೆಶನ್ ಮೂಲಕ ಹಣ ಸಂಗ್ರಹಿಸಿ, ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದಾರೆ.

ಇತ್ತೀಚಿಗೆ ಮುಂಬೈನ ರೋಟಿ ಬ್ಯಾಂಕ್ ಹೆಸರಿನ ಎನ್‍ಜಿಒ ಕಚೇರಿಗೆ ಭೇಟಿ ನೀಡಿದ ಜಾಕ್ವೆಲಿನ್, ಸಾಕಷ್ಟು ಜನರಿಗೆ ಊಟ ನೀಡಿದ್ದಾರೆ. ಈ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರೋಟಿ ಬ್ಯಾಂಕ್ ಎನ್‍ಜಿಒ ನಿವೃತ್ತ ಪೊಲೀಸ್ ಅಧಿಕಾರಿ ಡಿ. ಶಿವಾನಂದನ್ ಅವರಿಂದ ನಡೆಯುತ್ತಿದ್ದು, ಹಸಿದ ಸಾವಿರಾರು ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಬಾಲಿವುಡ್‍ನ ಸಾಕಷ್ಟು ತಾರೆಯರು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯದ ಹಸ್ತ ಚಾಚಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿ ನಿತ್ಯ 5000 ಜನರಿಗೆ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಆಹಾರವನ್ನು ಪರಿಶೀಲಿಸಿ ಪ್ಯಾಕ್ ಮಾಡಿಸುತ್ತಿದ್ದಾರೆ. ನಟ ಸೋನು ಸೂದ್ ಅವರು ಕಳೆದ ವರ್ಷದಿಂದ ಪರೋಪಕಾರಿ ಕಾರ್ಯ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next