Advertisement

Jackie Shroff’s wife: 58 ಲಕ್ಷ ರೂ.ವಂಚನೆ; ದೂರು ದಾಖಲಿಸಿದ ಜಾಕಿ ಶ್ರಾಫ್‌ ಪತ್ನಿ ಆಯೀಷಾ

05:19 PM Jun 09, 2023 | Team Udayavani |

ಮುಂಬಯಿ: ನಟ ಜಾಕಿ ಶ್ರಾಫ್‌ ಅವರ ಪತ್ನಿ ಆಯೀಷಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಟೈಗರ್‌ ಶ್ರಾಫ್‌ ಹಾಗೂ ಅವರ ತಾಯಿ ಆಯೀಷಾ ಅವರಿಗೆ ಸೇರಿದ ʼಎಂಎಂಎ ಮ್ಯಾಟ್ರಿಕ್ಸ್ ಜಿಮ್ʼನ ಚಟುವಟಿಕೆಯನ್ನು ನೋಡಿಕೊಳ್ಳಲು ನೇಮಕವಾಗಿದ್ದ ಅಲನ್ ಫೆರ್ನಾಂಡಿಸ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಜಿಮ್‌ ನ ಮಾಲಕರು ಇತರೆ ಕಾರ್ಯದಲ್ಲಿ ಬ್ಯುಸಿಯಾಗಿದ್ದರಿಂದ ಈ ವಂಚನೆಯ ಪ್ರಕರಣ ಅಷ್ಟು ಬೇಗ ಬೆಳಕಿಗೆ ಬಂದಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Train ದುರಂತ; ಶವಾಗಾರವಾಗಿ ಬಳಸಿಕೊಂಡಿದ್ದ ಶಾಲೆ ನೆಲಸಮಗೊಳಿಸಿದ ಸರಕಾರ

ಕಂಪೆನಿಯ ಹೆಸರಿನಲ್ಲಿ ಭಾರತ ಮತ್ತು ಭಾರತದ ಹೊರಗೆ ಒಟ್ಟು 11 ಪಂದ್ಯಾವಳಿಗಳನ್ನು ಆಯೋಜಿಸಲು ಸಾಕಷ್ಟು ಹಣವನ್ನು ವಿಥ್‌ ಡ್ರಾ ಮಾಡಿದ್ದಾರೆ. ಬ್ಯಾಂಕ್ ಖಾತೆಯಿಂದ ಡಿಸೆಂಬರ್ 2018 ರಿಂದ ಜನವರಿ 2023 ರವರೆಗೆ ಒಟ್ಟು 58,53,591 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಹಿಂದೆ 4 ಕೋಟಿ ರೂ. ಪಾವತಿಸದಿರುವುದಕ್ಕೆ ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪವನ್ನು ಮಾಡಿ ನಟ ಸಾಹಿಲ್‌ ಖಾನ್‌ ಅವರ ವಿರುದ್ದ ಆಯೀಷಾ ಅವರು ದೂರು ದಾಖಲಿಸಿದ್ದರು.

Advertisement

ಸದ್ಯ ಸಾಂತಾಕ್ರೂಜ್ ಪೊಲೀಸರು ಐಪಿಸಿ ಸೆಕ್ಷನ್‌ಗಳು 420, 408, 465, 467, ಮತ್ತು 468 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next