Advertisement

ಉಡುಪಿ ಹಲಸು ಮೇಳಕ್ಕೆ ಬರಲಿದೆ ತೂಬುಗೆರೆಯ ಹಣ್ಣು

11:22 PM Jul 10, 2019 | sudhir |

ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದ ಆವರಣದಲ್ಲಿ ಜು. 13ರಿಂದ 15ರವರೆಗೆ ಆಯೋಜಿಸಿದ ಜಿಲ್ಲಾ ಮಟ್ಟದ ಹಲಸು ಮೇಳದಲ್ಲಿ ಈ ಬಾರಿ ದೊಡ್ಡಬಳ್ಳಾಪುರ ಜಿಲ್ಲೆಯ ತೂಬುಗೆರೆ ಹಲಸಿನ ಹಣ್ಣು ಪ್ರಮುಖ ಆಕರ್ಷಣೆಯಾಗಿರಲಿದೆ.

Advertisement

ಕಳೆದ ಬಾರಿಯೂ ಈ ಹಲಸಿನ ಮೇಳಕ್ಕೂ ಈ ಹಣ್ಣು ಬಂದಿದ್ದು ಒಂದೇ ದಿನದಲ್ಲಿ ಖಾಲಿಯಾಗಿತ್ತು. ಈ ಬಾರಿ ಬೇಡಿಕೆ ಮನಗಂಡು ಮೂರು ಟನ್‌ ತೂಬುಗೆರೆ ಹಲಸಿನ ಹಣ್ಣು ಬರಲಿದೆ. ಇದು ದೊಡ್ಡ ಕಲ್ಲಂಗಡಿ (ಕರಗುಂಜಿ) ಹಣ್ಣಿನ ಗಾತ್ರವನ್ನು ಹೊಂದಿರುತ್ತದೆ. ಇದು ಬಹಳ ರುಚಿಯಾದ ಹಣ್ಣು.

ತೊಳೆಯ ಬಣ್ಣವೂ ಆಕರ್ಷಕ. ಇದು ದೊಡ್ಡಬಳ್ಳಾಪುರದ ಭಾಗದಲ್ಲಿ ಬೆಳೆಯುತ್ತದೆ. ಹಣ್ಣು ತುಸು ದುಬಾರಿ. ಇದು ಐಸ್‌ಕ್ರೀಮ್‌ ಉತ್ಪಾದನೆಗೂ ರವಾನೆಯಾಗುತ್ತದೆ.

ಉಡುಪಿ ಜಿಲ್ಲಾಡಳಿತ, ಜಿ.ಪಂ. ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಹಭಾಗಿತ್ವದಲ್ಲಿ ನಡೆಯುವ ಮೇಳದ ಉದ್ಘಾಟನೆ 11 ಗಂಟೆಗೆ ನಡೆಯಲಿದೆ. ಬಳಿಕ ಹಲಸಿನ ಬೇಸಾಯ ಕ್ರಮ ಮತ್ತು ಮಾರುಕಟ್ಟೆ ಮೌಲ್ಯವರ್ಧನೆ ಕುರಿತು ಮತ್ತು ಕೊನೆಯ ದಿನ ಮಣ್ಣು -ನೀರಿನ ಸಂರಕ್ಷಣೆ ತಾಂತ್ರಿಕತೆ ಕುರಿತು ವಿಚಾರ ಸಂಕಿರಣ ನಡೆಯಲಿದ್ದು ಆಯಾ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ ಹಲಸಿನ ವಿವಿಧ ಉತ್ಪನ್ನಗಳು, ಗ್ರಾಮೀಣ ತಿಂಡಿ ತಿನಸುಗಳು ವಿಶೇಷ ಆಕರ್ಷಣೆಯಾಗಿರಲಿವೆ.

ಸಸ್ಯಸಂತೆಗೆ ಚಾಲನೆ

Advertisement

ತೋಟಗಾರಿಕೆ ಇಲಾಖೆಯ ಸಸ್ಯ ಕ್ಷೇತ್ರಗಳಲ್ಲಿ ಬೆಳೆ ಹಲಸು ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ಸರಕಾರ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಸ್ಯ ಸಂತೆಗೂ ಹಲಸಿನ ಮೇಳದಲ್ಲಿ ಚಾಲನೆ ನೀಡಲಾಗುವುದು. ಇದೇ ರೀತಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿಯೂ ಸಸ್ಯಸಂತೆಗೆ ಚಾಲನೆ ನೀಡಲಾಗುತ್ತದೆ.

ಜನಾಕರ್ಷಣೆ ಪರಿಣಾಮ

ಕಳೆದ ವರ್ಷದ ಎರಡು ದಿನಗಳ ಹಲಸಿನ ಮೇಳಕ್ಕೆ ಜನರು ಭಾರೀ ಉತ್ಸಾಹವನ್ನು ತೋರಿಸಿದ್ದರಿಂದ ಈ ಬಾರಿ ಮೂರು ದಿನಗಳ ಮೇಳವನ್ನು ಆಯೋಜಿಸಿದೆ.

ಕಾಫಿ ಪೌಡರ್‌ನಂತಿರುವ ಹಲಸಿನ ಬೀಜದ ಪೌಡರ್‌ ಉತ್ಪಾದಿಸುವ ಚಿಕ್ಕಮಗಳೂರು ಜಿಲ್ಲೆಯ ಘಟಕದವರೂ ಹಲಸಿನ ಮೇಳಕ್ಕೆ ಆಗಮಿಸಲಿದ್ದಾರೆ. ಹಿಂದೊಂದು ಕಾಲದಲ್ಲಿ ಹಲಸಿನ ಹಣ್ಣಿನ ಬೀಜದಿಂದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಬೀಜವನ್ನು ಪೌಡರ್‌ ಮಾಡಿಯೂ ಆಧುನಿಕ ಮಾರುಕಟ್ಟೆಯನ್ನು ಆಕರ್ಷಿಸಬಹುದು ಎಂಬುದನ್ನು ಚಿಕ್ಕಮಗಳೂರಿನವರು ಸಾಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next