Advertisement

ಹಣ್ಣಿನ ಮಳಿಗೆ ನಿರ್ಮಿಸಿದರೆ ರೈತರಿಗೆ ಅನುಕೂಲ

02:41 PM May 28, 2022 | Team Udayavani |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಲೂಕಿನಲ್ಲಿ ಇರುವುದರಿಂದ ಹಲಸು, ಮಾವು, ಚಕ್ಕೋತ ಸೀಸನ್‌(ಋತುಮಾನ) ಗಳಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಟಾಲ್‌ಗ‌ಳ ಮೂಲಕ ಮಾರಾಟ ಮಾಡಲು ಅವಕಾಶ ಮಾಡಿ ಕೊಡಬೇಕುಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

Advertisement

ಪಟ್ಟಣದ ರಾಣಿಸರ್ಕಲ್‌ನಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ಹಲಸು, ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿ,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೈತರು ಬೆಳೆದ ಹಣ್ಣು ಮಾರಾಟ ಮಾಡಲು ಸ್ಟಾಲ್‌ಗ‌ಳು ನಿರ್ಮಾಣವಾದರೆ ದೇಶ-ವಿದೇಶಗಳಿಂದ ಬರುವ ಗ್ರಾಹಕರಿಗೆ ಹಣ್ಣು ಮಾರಾಟ ಮಾಡಲುರೈತರಿಗೆ ಅನುಕೂಲವಾಗುತ್ತದೆ. ಮಾವು ಬೆಳೆಯುವರೈತರಿಗೆ ಹಾಗೂ ಮಾವು ಸವಿಯುವ ಗ್ರಾಹಕರ ನಡುವೆಸಂಪರ್ಕ ಕಲ್ಪಿಸಿ ರೈತರಿಗೆ ಉತ್ತಮ ಮಾರುಕಟ್ಟೆಒದಗಿಸಲು ಮೂರು ದಿನ ಮಾವು ಮೇಳವನ್ನು ಹಮ್ಮಿಕೊಂಡಿದೆ ಎಂದರು.

ಅಧಿಕಾರಿಗಳೊಂದಿಗೆ ಚರ್ಚಿಸುವೆ: ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಮಾತನಾಡಿ ಹಣ್ಣಿನ ಸ್ಟಾಲ್‌ಹಾಕಲು ಚರ್ಚಿಸಲಾಗುವುದು. ಮಾವು, ಹಲಸು,ಚಕ್ಕೋತ ಹಾಗೂ ಇತರೆ ಹಣ್ಣಿನ ಮಳಿಗೆಗಳನ್ನು ವಿಮಾನನಿಲ್ದಾಣದಲ್ಲಿ ತೆರೆಯಲು ವಿಐಎಎಲ್‌ ಅಧಿಕಾರಿಗಳೊಂ ದಿಗೆ ಚರ್ಚಿಸಲಾಗುವುದು. 22 ಸ್ಟಾಲ್‌ ಬಂದಿದ್ದು,ಜಿಲ್ಲೆಯಲ್ಲಿ ಮಾವಿನ ಫ‌ಸಲು ಇನ್ನು ಸರಿಯಾದ ರೀತಿಬರದೇ ಇರುವುದರಿಂದ ಇನ್ನು 15ದಿನದ ನಂತರ ಮತ್ತೆಜಿಲ್ಲೆಯ ಸ್ಥಳೀಯರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿ ಕೊಡಲಾಗುವುದು ಎಂದರು.

ಹಾಪ್‌ಕಾಮ್ಸ್‌ ದರಕ್ಕಿಂತ ಕಡಿಮೆ: ಹಾಪ್‌ಕಾಮ್ಸ್‌ ದರಕ್ಕಿಂತ ಕಡಿಮೆ ರೀತಿಯಲ್ಲಿ ಮಾವನ್ನುನೀಡಲಾಗುತ್ತದೆ. ನೈಸರ್ಗಿಕವಾಗಿ ಮಾಗಿಸಿದ ಒಳ್ಳೆಯ ರುಚಿಯ ಮಾವಿನ ಹಣ್ಣುಗಳನ್ನುಗ್ರಾಹಕರಿಗೆ ಯೋಗ್ಯ ಬೆಲೆಯಲ್ಲಿ ದೊರಕಿಸುವಉದ್ದೇಶದಿಂದ ಮಾವು ಮತ್ತು ಹಲಸು ಪ್ರದರ್ಶನಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಮಾವು ಮೇಳದಲ್ಲಿ ಮಾರಾಟಕ್ಕೆ ಬಂದಿರುವ ಹಣ್ಣು ನೈಸರ್ಗಿಕವಾಗಿಯೇ ಮಾಗಿಸಲಾಗಿದೆ. ಎಲ್ಲ ಜಾತಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದರು.

ಗ್ರಾಹಕರನ್ನು ಸಳೆದ ವಿವಿಧ ತಳಿಯ ಮಾವು: ಮಾವು ಮೇಳದಲ್ಲಿ ಮಲಗೋಬ, ಮಲ್ಲಿಕಾ, ಆರ್ಕಾಉದಯ, ಐಲ್ಡಾನ್‌, ಲಿಲ್ಲಿ, ಬಾದಾಮಿ, ತೋತಾ  ಪುರಿ, ಲಾಲ್‌ ಮಣಿ, ಆಸ್ಟೀವ, ಟಾಯ್‌ ಅಬ್ಕೀನ್‌,ಅರ್ಕಾ ಅನ್ಮೋಲ್‌, ದಶೇರಿ, ಬೆನ್ನೇಶಾನ್‌, ರಸಪೂರಿ,ಅರ್ಕ ಪುನಿತ, ಸನ್ಸೇಷಿನ್‌, ಆರ್ಕನಿಲ್ಕೀಕಾಗ್‌, ಪಾಯರ್‌, ಕೇಂಟ್‌, ಕಿಟ್‌, ಮಾಯ, ಇತರೆಜಾತಿಯ ಮಾವುಗಳು ಗ್ರಾಹಕರನ್ನು ಸೆಳೆದವು. ಪ್ರತಿಯೊಬ್ಬರು ಹಣ್ಣಿನ ಸವಿರುಚಿ ಸವೆದು ನಾಲಿಗೆ ಯಲ್ಲಿ ನೀರು ಬರುವಂತೆ ಆಯಿತು.

Advertisement

ಕರ್ನಾಟಕರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮನಿಯಮಿತ ಅಧ್ಯಕ್ಷ ಕೆ.ವಿ.ನಾಗರಾಜ್‌, ಜಿಪಂ ಸಿಇಒ ರೇವಣಪ್ಪ, ಅಪರ ಜಿಲ್ಲಾಧಿಕಾರಿ ವಿಜಯಾ, ಉಪವಿಭಾಗಾಧಿಕಾರಿ ತೇಜಸ್‌ಕುಮಾರ್‌, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ತಹಶೀಲ್ದಾರ್‌ ಶಿವರಾಜ್‌, ತಾಪಂ ಇಒ ಎಚ್‌.ಡಿ. ವಸಂತ್‌ ಕುಮಾರ್‌, ತಾಲೂಕು ತೋಟಗಾರಿಕಾ ಇಲಾಖೆಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌, ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್‌, ಗ್ರಾಪಂ ಅಧ್ಯಕ್ಷ ಹುರುಳುಗುರ್ಕಿ ಶ್ರೀನಿವಾಸ್‌, ಪ್ರಗತಿಪರ ರೈತ ಜಯರಾಮಯ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

ರೈತರ ಆದಾಯ ಹೆಚ್ಚಳಕ್ಕೆ ಸಹಕಾರಿ: ಮಾವನ್ನು ನೈಸರ್ಗಿಕವಾಗಿ ಮಾಗಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ರೈತರು ಹಲಸುಮತ್ತು ಮಾವನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ. ವಿವಿಧ ಕಡೆಗಳಿಂದ ರೈತರುಬಂದಿದ್ದಾರೆ. ದಳ್ಳಾಳಿಗಳ ಕಾಟ ತಪ್ಪಿಸಲು ಮಾವು ಮೇಳವನ್ನು ಮಾಡಲಾಗಿದೆ. ರೈತರಆದಾಯ ಹೆಚ್ಚಳವಾಗಲು ಮಾವು ಮೇಳ ಸಹಕಾರಿಯಾಗಿದೆ. ರೈತರಿಗೆ ಹೆಚ್ಚಿನಅನುಕೂಲವಾಗುವ ರೀತಿಯಲ್ಲಿ ದಳ್ಳಾಳಿಗಳಿಂದ ತಪ್ಪಿಸಲು ಇದೊಂದು ಉತ್ತಮ ಕಾರ್ಯವಾಗಿದೆ. ಜನರ ಸಹಕಾರ ಇದ್ದರೆ ಮುಂದಿನ ವರ್ಷವೂ ಇದೇ ರೀತಿ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next