Advertisement

ಹಲಸು ಕೇರಳದ ಅಧಿಕೃತ ಹಣ್ಣು

06:00 AM Mar 18, 2018 | |

ತಿರುವನಂತಪುರ: “ಉಂಡಾಗ ಮಾವು; ಹಸಿದಾಗ ಹಲಸು’ ನಾಣ್ಣುಡಿಯೇ ಹೇಳುವಂತೆ ಎರಡೂ ಹಣ್ಣುಗಳು ಆರೋಗ್ಯ ದಾಯಕ ಹಾಗೂ ಸದಾಕಾಲ ಬೇಡಿಕೆ ಇರು ವಂಥವು. ಈ ಪೈಕಿ ಹಲಸಿನ ಹಣ್ಣನ್ನು ಕೇರಳ ಸರಕಾರ ಅಧಿಕೃತವಾಗಿ ರಾಜ್ಯದ ಹಣ್ಣು ಎಂದು ಮಾ. 21 ಘೋಷಿಸಲಿದೆ.

Advertisement

ಕೇರಳ ಕೃಷಿ ಸಚಿವ ಸುನೀಲ್‌ಕುಮಾರ್‌ ಈ ಕುರಿತು ಮಾಹಿತಿ ನೀಡಿದ್ದು, “ರಾಜ್ಯದಲ್ಲಿ ನಾನಾ ಜಾತಿಯ ಹಲಸಿನ ಹಣ್ಣುಗಳನ್ನು ವಿಫ‌ುಲವಾಗಿ ಬೆಳೆಯಲಾಗುತ್ತದೆ. ಅದರಲ್ಲೂ ಕೇರಳದ ಹಲಸಿನ ಹಣ್ಣುಗಳು ವಿಶೇಷವಾಗಿರುತ್ತವೆ. ಪ್ರತಿವರ್ಷ ರಾಜ್ಯದಲ್ಲಿ ಕೋಟಿಗಟ್ಟಲೆ ಹಲಸಿನ ಹಣ್ಣುಗಳನ್ನು ಬೆಳೆಯುತ್ತಿರುವುದರಿಂದ ರಾಜ್ಯದ ಅಧಿಕೃತ ಹಣ್ಣನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ: ಕೇರಳದ ಹಲಸಿನ ಹಣ್ಣಿನಲ್ಲಿ ವಿಶೇಷ ಗುಣ ಇದ್ದು, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರ ಬಗ್ಗೆ ಪ್ರಚಾರ ನಡೆಸ ಲಾಗುತ್ತದೆ. ಅಧಿಕೃತ ಹಣ್ಣು ಎಂದು ಘೋಷಣೆ ಮಾಡುವುದರಿಂದ ವಾರ್ಷಿಕ 15 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next