Advertisement

ವಾಸ್ತು ಶಿಲ್ಪ ಕಲೆಯ ದಂತ ಕತೆ ಜಕಣಾಚಾರಿ

05:26 PM Jan 01, 2022 | Team Udayavani |

ರಬಕವಿ-ಬನಹಟ್ಟಿ: ಕಲ್ಲಿನಲ್ಲಿಯೂ ಕೂಡಾ ಅತ್ಯಂತ ಸೂಕ್ಷ್ಮ ಕಲೆಗಳನ್ನು ಕೆತ್ತನೆ ಮಾಡಿದ ಜಕಣಾಚಾರಿ ವಿಶ್ವದ ಶ್ರೇಷ್ಠ ವಾಸ್ತುಶಿಲ್ಪ ಕಲಾಕಾರರಾಗಿದ್ದು, ಅವರು ವಾಸ್ತುಶಿಲ್ಪ ಕಲೆಯ ದಂತ ಕತೆಯಾಗಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಶನಿವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಜಕಣಾಚಾರಿ ಜಯಂತ್ಯುತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಲೂರು ಹಾಗೂ ಹಳೇಬಿಡಿನಲ್ಲಿ ವಿಶ್ವ ಶ್ರೇಷ್ಠವಾದ ವಾಸ್ತುಶಿಲ್ಪವನ್ನು ರಚಿಸಿದ ಜಕಣಾಚಾರಿಯಲ್ಲಿರುವ ಪರಿಶ್ರಮ ಹಾಗೂ ಸೂಕ್ಷ್ಮತೆಯನ್ನು ಕಂಡುಕೊಳ್ಳಬಹುದಾಗಿದೆ. ಕರ್ನಾಟಕದ ರಾಜ ಮನೆತನಗಳು ಹಾಗೂ ಅರಸರು ತಮ್ಮ ಕಾಲಾವಾಧಿಯಲ್ಲಿ ಮಹತ್ವವಾದ ವಾಸ್ತು ಶಿಲ್ಪವನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಕರ್ನಾಟಕ ವಾಸ್ತು ಶಿಲ್ಪ ಕಲೆಯ ತವರು ಮನೆಯಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬನಹಟ್ಟಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಬಡಿಗೇರ ಮಾತನಾಡಿ, ಸರ್ಕಾರ ಜಕಣಾಚಾರಿಯವರ ಜಯಂತ್ಯುತ್ಸವ ಅಚರಿಸುವ ಮೂಲಕ ಅವರನ್ನು ನಾಡಿಗೆ ಇನ್ನಷ್ಟು ಪರಿಚಯಿಸಿದಂತಾಗಿದೆ. ಆದ್ದರಿಂದ ಕಲೆಯಲ್ಲಿರುವ ಸೂಕ್ಷ್ಮತೆಯನ್ನು ನಾವು ಕೂಡಾ ಜಕಣಾಚಾರಿಯಂತೆ ಅರಿತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ, ಗ್ರೇಡ್-೨ ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಉಪ ತಹಶೀಲ್ದಾರ್ ಬಸವರಾಜ ಬಿಜ್ಜರಗಿ, ಸಮಾಜದ ಮುಖಂಡರಾದ ರಾಮಚಂದ್ರ ಪತ್ತಾರ, ಗಣಪತಿ ಬಡಿಗೇರ, ರಾಜು ಬಡಿಗೇರ, ಚಿದಾನಂದ ಪತ್ತಾರ, ಹನಮಂತ ಪತ್ತಾರ, ಆನಂದ ಪತ್ತಾರ, ಮಂಜುನಾಥ ಪತ್ತಾರ, ದೀಪಕ ಆಸಂಗಿ, ಈರಪ್ಪ ಬಡಿಗೇರ, ರಮೇಶ ಬಡಿಗೇರ ಮತ್ತು ಅಚ್ಯುತ್ ಪತ್ತಾರ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next