Advertisement

ಗೋ ಮಾತೆಗಾಗಿ ಕಾಸರಗೋಡಲ್ಲಿ ಹಪ್ಪಳದ ಸಪ್ಪಳ..

05:38 PM Jun 04, 2019 | keerthan |

ಬದಿಯಡ್ಕ: ಬಜಕೂಡ್ಲು ಅಮೃತ ಗೋಶಾಲೆಯ ಗೋವುಗಳಿಗೆ ಗೋಗ್ರಾಸ ಸಂಗ್ರಹಕ್ಕಾಗಿ ಗೋಪ್ರೇಮಿಗಳ ಒಗ್ಗೂಡುವಿಕೆಯಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜೂ.8ರಂದು ಹಲಸು ಮೇಳವನ್ನು ಆಯೋಜಿಸಲಾಗಿದೆ.

Advertisement

ಭಾರತೀಯ ಗೋವು ತಳಿಗಳ ಪ್ರೋತ್ಸಾಹ ಮತ್ತು ಸಂರಕ್ಷಣೆಗಾಗಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠವು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕೈಗೊಂಡ ವಿವಿಧ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಕಾಮದುಘಾ ಅತ್ಯಂತ ಮಹತ್ವಪೂರ್ಣ ಯೋಜನೆಯಾಗಿದೆ. ಕಾಮದುಘಾ ಎಂದರೆ ಬಯಸಿದ್ದನ್ನು ಕೊಡುವ ಎಂದರ್ಥ. ಗೋಮಾತೆಗೆ ಅನ್ವರ್ಥ ನಾಮವಾಗಿ ಈ ಹೆಸರನ್ನೇ ಯೋಜನೆಗೆ ಇಡಲಾಗಿದೆ.

ಭಾರತೀಯ ದೇಶೀ ಗೋತಳಿಗಳ ಮಹತ್ವದ ಬಗ್ಗೆ ಭಾರತದ ರೈತರಲ್ಲಿ ಜಾಗತಿ ಮೂಡಿಸುವುದೇ ಕಾಮದುಘಾ ಯೋಜನೆಯ ಮೂಲ ಉದ್ಧೇಶ.
ದತ್ತಶಂಕರ ಗೋಯಾತ್ರೆ, ಭಾರತೀಯ ಗೋಯಾತ್ರೆ, ಗೋ ಸಂಪತ್ತು, ವಿಶ್ವ ಗೋ ಸಮ್ಮೇಳನದಂತಹ ಹಲವಾರು ಕಾರ್ಯಕ್ರಮಗಳ ಮೂಲಕ ಗೋಮಾತೆಯ ಮಹಿಮೆಯನ್ನು ಪ್ರಪಂಚಕ್ಕೆ ಪಸರಿಸಿದ ಶ್ರೀಗಳು ಕಾಮದುಘಾ ಯೋಜನೆಯ ಮೂಲಕ ಕರ್ನಾಟಕ, ಕೇರಳ, ಮಹಾರಾಷ್ಟ್ರಗಳಲ್ಲಿ ಹದಿನಾಲ್ಕು ಮುಖ್ಯ ಗೋಶಾಲೆಗಳನ್ನು ಸ್ಥಾಪಿಸಿ ಸಹಸ್ರಾರು ಗೋವುಗಳಿಗೆ ಆಶ್ರಯ ನೀಡಿದ್ದಾರೆ. ಅವುಗಳಲ್ಲಿ ಒಂದು ಕಾಸರಗೋಡು ಜಿಲ್ಲೆಯ ಬಜಕೂಡ್ಲು ಅಮತಧಾರಾ ಗೋಶಾಲೆ. ಈ ಗೋಶಾಲೆಗೆ ನಿರಂತರ ಆಹಾರ ಪೂರೈಸುವ ಯೋಜನೆ ಯಂಗವಾಗಿ ಮಹಿಳ್ಳೋದಯ ಬದಿಯಡ್ಕ, ಮುಳ್ಳೇರಿಯ ಹವ್ಯಕ ಮಂಡಲ ಹಾಗೂ ಬಜಕೂಡ್ಲು ಗೋಶಾಲೆ ನೇತತ್ವದಲ್ಲಿ ಆಯೋಜಿಸಲಾದ ಹಲಸು ಮೇಳಕ್ಕೆ ಹಲವಾರು ಸಂಘ ಸಂಸ್ಥೆಗಳು ಸಹಕಾರವೂ ಇದೆ.

ಹಲಸೆಂಬ ಕಲ್ಪವೃಕ್ಷ
ಕಲ್ಪವೃಕ್ಷದಂತೆ ಶ್ರೇಷ್ಟವಾದ ಹಲಸಿನ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಬೆಲೆಬಾಳುವ ಮರ. ರುಚಿ ಮತ್ತು ಸತ್ವದಿಂದ ಕೂಡಿದ ಕಾಯಿ, ಹಣ್ಣುಗಳು ಹಾಗೂ ವಿಷಮುಕ್ತವಾದ ನೈಸರ್ಗಿಕ ಫಲ. ಅಮತವನ್ನು ನೀಡುವ ಗೋಮಾತೆಗೆ ಪ್ರಕೃತಿದತ್ತವಾದ ಹಲಸನ್ನು ಬಳಸಿ ಗೋಗ್ರಾಸವನ್ನು ಒದಗಿಸುವ ಯೋಜನೆ ಇದಾಗಿದ್ದು ಹಲಸಿನ ಮೌಲ್ಯವರ್ಧನೆಯನ್ನೂ ಹೆಚ್ಚಿಸುವ ಉದ್ಧೇಶ ಹೊಂದಿದೆ. ಹಲಸು ಬೆಳೆಸಿ, ಬಳಸಿ ಗೋವು ಉಳಿಸಿ ಎನ್ನುವ ಸಂಧೇಶವನ್ನೂ ಈ ಹಲಸು ಮೇಳ ನೀಡಲಿದೆ. ಹಲಸು ಬೆಳೆ ಸುಲಭ ಹಾಗೂ ಅದರಿಂದ ದೊರೆಯುವ ಪ್ರತಿಫಲವೂ ಹೆಚ್ಚು. ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಇಟ್ಟಲ್ಲಿ ಆರು ತಿಂಗಳಿಗಾಗುವಷ್ಟು ಗೋಗ್ರಾಸ ಹಲಸಿನಿಂದಲೇ ಲಭ್ಯವಾಗುತ್ತದೆ. ಇಲ್ಲಿ ಮಾರಾಟವಾದ ಹಲಸು ಮತ್ತು ಹಲಸಿನ ಉತ್ಪನ್ನಗಳಿಂದ ಬರುವ ಸಂಪೂರ್ಣ ಆದಾಯವನ್ನು ಗೋವುಗಳಿಗೆ ಮೇವಿಗಾಗಿ ಉಪಯೋಗಿಸಲಾಗುತ್ತದೆ.  ಮಾತೆಯರ ಮನದಲ್ಲಿ ಹಪ್ಪಳ. ಗೋಸೇವೆಯ ಸಾರ್ಥಕ ಸಪ್ಪಳ.


ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕೈಂಕರ್ಯದಲ್ಲಿ ತೊಡಗಿಸಿ ಕೊಂಡಿದ್ದು ಹಪ್ಪಳ ತಯಾರಿಯಲ್ಲಿ ಕೆಲವು ಪ್ರಧಾನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಪ್ಪಳ ತಯಾರಿಸಲಾಗಿದೆ. ಉಪ್ಪು ಮತ್ತು ಮೆಣಸಿನ ಹುಡಿ ಸೇರಿಸಿದ ಹಿಟ್ಟಿನಿಂದ ಸಾಮಾನ್ಯ 6ಇಂಚು ವ್ಯಾಸದ ಹಪ್ಪಳ ತಯಾರಿಸಿ 3ದಿನದ ಸರಿಯಾದ ಬಿಸಿಲಲ್ಲಿ ಒಣಗಿಸಿ 1 ದಿನ ನೆರಳಲ್ಲಿ ಹರಡಿಟ್ಟು ಸರಿಯಾದ ಆಕೃತಿ ಬರುವಂತೆ ಮಾಡಿದ ಮೇಲೆ ಒಂದೇ ರೀತಿಯ 25 ಹಪ್ಪಳಗಳ ಒಂದು ಕಟ್ಟ ಮಾಡಿ ಮೂರು ದಿನಗಳ ಕಾಲ ಕಟ್ಟುಗಳನ್ನು ಬಿಸಿಲಲ್ಲಿ ಪುನಃ ಒಣಗಿಸಿ ರಟ್ಟಿನ ಪೆಟ್ಟಿಗೆಗಳಲ್ಲಿ ಜೋಡಿಸಿ ಕೊನೆಯಲ್ಲಿ ತಮ್ಮಲ್ಲಿರುವ ಹಪ್ಪಳಗಳನ್ನು ಮಾತ ಪ್ರಧಾನೆಯರಿಗೆ ಹಸ್ತಾಂತರಿಸಿ ಮಹಿಳ್ಳೋದಯಕ್ಕೆ ತಲುಪಿಸಬೇಕಾಗಿದೆ.

Advertisement

ಹಲಸು ಬೆಳೆಸಿ, ಬಳಸಿ, ಗೋವು ಉಳಿಸಿ
ಹಲಸು ನೈಸರ್ಗಿಕ ಸತ್ವಭರಿತ ಆಹಾರವಾಗಿದ್ದು ಹಲಸನನು ಬೆಳೆಸಿ, ಬಳಸಿ ಆಮೂಲಕ ಪ್ರಕೃತಿಯ ಸಂರಕ್ಷಣೆ ಮಾಡುವ ಪ್ರಯತ್ನ ಹಾಗೂ ಗೋವುಗಳಿಗೆ ಆಹಾರವಾಗಿ ಉಪಯೋಗಿಸಿ ಗೋವುಗಳನ್ನು ಉಳಿಸುವ, ಸಂರಕ್ಷಿಸುವ ಪ್ರಯತ್ನ ಇದಾಗಿದೆ.

ಲಕ್ಷದಷ್ಟು ಹಪ್ಪಳ


ಒಂದು ಲಕ್ಷ ಹಪ್ಪಳಗಳನ್ನು ತಯಾರಿಸುವ ಯೋಜನೆ ಸಂಖ್ಯೆ ಲಕ್ಷ ಮೀರಿ ಗುರಿ ಸಾತ್ಕಾರವಾಗುವ ಲಕ್ಷಣ ಕಂಡುಬರುತ್ತಿದೆ. ಅತ್ಯಂತ ಆಸಕ್ತಿಯಿಂದ ಈ ಕಾರ್ಯಾಗಾರದಲ್ಲಿ ಗೋಪ್ರೇಮಿಗಳು ಕೈಜೋಡಿಸಿರುವುದೇ ಇದಕ್ಕೆ ಕಾರಣ. ಸಾವಿರಾರು ಕಾರ್ಯಕರ್ತರು ನಿಸ್ವಾರ್ಥ ಸೇವೆ ಸಲ್ಲಿಸಿ ಹಲಸು ಮೇಳಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೊಡಗಿನಿಂದ ಚಂದ್ರಗಿರಿ ವರೆಗೂ ಹಪ್ಪಳ ತಯಾರಿ ನಡೆಯುತ್ತಿದೆ, ಹಾಗೆಯೇ ಮಂಗಳೂರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಗೋಪ್ರೇಮಿಗಳೂ ಕೈಜೋಡಿಸಿದ್ದಾರೆ.

ಉಳಿಕೆಯೂ ಗೋಶಾಲೆಗೆ
ಪ್ರತಿಮನೆಯಿಂದ ನೂರು ಹಪ್ಪಳ ಎಂಬ ಸಂದೇಶದೊಂದಿಗೆ ವಿವಿಧೆಡೆ ಒಟ್ಟು ಸೇರಿ ಸಾವಿರಾರು ಹಪ್ಪಳ ತಯಾರಿಸಲಾಗಿದೆ. ಒಂದೂವರೆ ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು ಹಲಸಿನ ಕಾಯಿಯ ಯಾವುದೇ ಭಾಗವನ್ನು ವ್ಯರ್ಥ ಮಾಡದೆ ಹಪ್ಪಳ ತಯಾರಿಸುವಾಗ ಸಿಗುವ ಉಳಿಕೆಗಳನ್ನೂ ಹಾಗೆಯೇ ಬಜಕೂಡ್ಲು ಗೋಶಾಲೆಗೆ ಗೋಗ್ರಾಸಕ್ಕಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡಿರುವುದು ಉತ್ತಮ ವಿಚಾರ.  ಹಪ್ಪಳ ಸಮರ್ಪಣೆಯ ಮೂಲಕ ಗೋಮಾತೆಯ ಮೇವಿಗೆ ಆಸರೆಯಾಗೋಣ ಎಂಬ ಧ್ಯೇಯದೊಂದಿಗೆ ಆಯೋಜಿಸಲಾದ ಈ ಮೇಳದಲ್ಲಿ ವಿವಿಧ ತರದ, ವಿವಿಧ ಗಾತ್ರದ, ವಿವಿಧ ರುಚಿಯ ಹಲಸುಗಳೊಂದಿಗೆ ಹಲಸಿನ ವೈವಿಧ್ಯಮಯ ಆಹಾರ ಪದಾರ್ಥಗಳಾದ ಹಲಸಿನ ಪಾಯಸ, ದೋಸೆ, ಜಾಮ್‌, ಐಸ್‌ ಕ್ರೀಂ, ಚಿಪ್ಸ್‌, ಉಂಡಲಕಾಯಿ, ಉಪ್ಪಿನಕಾಯಿ, ಹಲಸಿನ ಬೀಜದ ಹೋಳಿಗೆ, ವಿವಿದ ರೀತಿಯ ಕರಿದ ತಿಂಡಿಗಳು ಸೇರಿದಂತೆ ತಿಂಡಿ ತಿನಿಸುಗಳು ಪ್ರದರ್ಶನವನ್ನು ಏರ್ಪಡಿಸಿದ್ದು ಗುಜ್ಜೆ ಮಂಚೂರಿಯನ್‌ ವಿಶೇಷ ಆಕರ್ಷಣೆಯಾಗಿರಲಿದೆ.

ಮನೆಯಲ್ಲಿಯೇ ಲಭ್ಯವಿರುವ ಹಲಸಿನ ಕಾಯಿಯಿಂದ ಹಪ್ಪಳ ತಯಾರಿಸುವುದು ಮಾತ್ರವಲ್ಲದೆ ಲಭ್ಯವಿದ್ದಲ್ಲಿಂದ ತಂದು ಅಕ್ಕಪಕ್ಕದ ಮನೆಯವರ ಸಹಾಯದಿಂದ ಹಪ್ಪಳ ತಯಾರಿಸಿದರು. ಹಾಗೆಯೇ ಹಪ್ಪಳ ಲಭ್ಯವಿದ್ದಲ್ಲಿಂದ ಖರೀಧಿಸಿ ಸಮರ್ಪಿಸುವ ಸೇವೆಯನ್ನೂ ಹಲವರು ಮಾಡಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಹಲಸಿನ ಕಾಯಿ ಇದ್ದಲ್ಲಿ ಇಲ್ಲದವರಿಗೆ ನೀಡಿ ಹಪ್ಪಳ ತಯಾರಿಸುವಂತೆ ಪೊತ್ಸಾಹಿಸಿರುವುದರಿಂದ ಈ ಸೇವಾ ಕಾರ್ಯ ಯಶಸ್ಸು ಕಂಡಿದೆ. ಹಲಸು ಮೇಳದಿಂದ ಬರುವ ಹಣವನ್ನು ಉಪಯೋಗಿಸಿ ಬಜಕೂಡ್ಲಿನಲ್ಲಿ ಹುಲ್ಲು ಬೆಳೆಸಿ ಹಸಿರು ಮೇವು ಒದಗಿಸುವ ಯೋಜನೆಯೂ ಸಧ್ಯದಲ್ಲಿಯೇ ಕಾರ್ಯಗತವಾಗಲಿದೆ.

ಹಲಸು ಪುರಾತನ ಕಾಲದಿಂದಲೇ ವಿವಿಧೋಪಯೋಗಿ ಫಲವಾಗಿದ್ದು ಇದರಿಂದ ವೈವಿಧ್ಯಮಯ ಶ್ರೇಷ್ಠ ಆಹಾರ ವಸ್ತುಗಳನ್ನು ತಯಾರಿಸಿ ಮಾನವನಿಗೂ ಗೋವುಗಳಿಗೂ ಬಳಸುವ ಪದ್ಧತಿ ಸಿದ್ಧಹಸ್ತವಾಗಿತ್ತು. ಈ ಪಾರಂಪರಿಕ ಜ್ಞಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಶ್ರೇಷ್ಠ ಕಾರ್ಯವು ಈ ಸಮಾರಂಭದಲ್ಲಿ ಪ್ರಾಪ್ತಿಯಾಗಲಿದೆ. ಪ್ರಕೃತಿ ದತ್ತವಾಗಿ ಧಾರಾಳವಾಗಿ ಲಭ್ಯವಿರುವ ಫಲ ಹಲಸನ್ನು ಸದುಪಯೋಗಪಡಿಸಿಕೊಳ್ಳುವ ವಿಧಾನವೂ ಗೋಸಾಕಣೆಗೆ ಅನಿವಾರ್ಯವೂ ಆಗಿರುವ ಹಲಸುಮೇಳ ಸಮಾರಂಭ ಒಂದು ಸಮಕಾಲೀನ ಕಾರ್ಯಕ್ರಮ.

ರುಚಿಯಾದ ಪೌಷ್ಠಿಕಾಂಶಯುಕ್ತವಾದ ಹಲಸನ್ನು ಗೋರಕ್ಷಣೆಗೆ ಬಳಸುವ ಹೊಸ ಪ್ರಯೋಗವನ್ನು ಕೈಗೊಂಡಿದ್ದು ಜನರ ನಿಸ್ವಾರ್ಥ ಸೇವೆ ಮತ್ತು ಒಗ್ಗಟ್ಟಿನ ಪರಿಶ್ರಮದಿಂದ ಮಾತ್ರ ಈ ಪ್ರಯತ್ನ ಯಶಸ್ವಿಯಾಗಲು ಸಾಧ್ಯ.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ.

ಹಲಸು ಗೋವಿಗೆ ಶ್ರೇಷ್ಠ ಆಹಾರವಾಗಿದೆ. ಬಹಳ ಹಿಂದಿನ ಕಾಲದಿಂದಲೇ ಹಲಸನ್ನು ಆಹಾರವಾಗಿ ಗೋವುಗಳೀಗೆ ನೀಡುವ ಪದ್ಧತಿ ಇತ್ತು. ಸುಮಾರು 6ತಿಂಗಳಿಗಾಗುವಷ್ಟು ಆಹಾರ ಇದರಿಂದ ಲಭ್ಯವಾಗುವುದರಿಂದ ಗೋಸಾಕಣೆಗೆ ಪೂರಕವಾಗಿದೆ.
ಗೋವಿಂದ ಬಳ್ಳಮೂಲೆ. ಗೋಕರ್ಣ ಹವ್ಯಕ ಮಹಾ ಮಂಡಲ ಉಲ್ಲೇಖ ಪ್ರಧಾನ.

*ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next