Advertisement

ಹೆದ್ದಾರಿ ಪಕ್ಕ ಹಲಸು ವ್ಯಾಪಾರ: ಗ್ರಾಮೀಣ ಜನರಿಗೆ ಆದಾಯ

04:00 AM May 28, 2018 | Karthik A |

ಬೆಳ್ತಂಗಡಿ: ಒಂದು ಕಾಲದಲ್ಲಿ ಹಲಸಿನ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಾಲವಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು ಮರಗಳ ನಾಶ ಹಾಗೂ ಇತರೆ ಕಾರಣಗಳಿಂದ ಹಲಸು ಕಡಿಮೆಯಾಗುತ್ತಿದೆ. ಆದರೆ ಗ್ರಾಮೀಣ ಜನತೆ ಇದೀಗ ಅಂಗಡಿ ಹಾಗೂ ಹೆದ್ದಾರಿಗಳ ಬದಿ ಹಲಸು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಮುಖ್ಯವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿ ಹಾಗೂ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ದೂರದೂರುಗಳಿಂದ ಆಗಮಿಸುವ ಮಂದಿ ಹಲಸು ಖರೀದಿಸಿ ಆಸ್ವಾದಿಸಿದರೆ, ಗ್ರಾಮೀಣರಿಗೆ ಆದಾಯವಾಗುತ್ತಿದೆ.

Advertisement

ಪ್ಯಾಕೆಟ್‌ ಗಳಲ್ಲಿ ಮಾರಾಟ
ಹಲಸನ್ನು ಪೂರ್ಣವಾಗಿ ಹಾಗೂ ತೊಳೆಗಳನ್ನು ಪ್ಯಾಕ್‌ ಮಾಡಿ ಮಾರಾಟ ಮಾಡಲಾಗುತ್ತದೆ. ಪೂರ್ಣ ಹಲಸು 200ರಿಂದ 300 ರೂ. ವರೆಗೂ ಮಾರಾಟ ಮಾಡಲಾಗುತ್ತದೆ. 5ರಿಂದ 6 ತೊಳೆಗಳಿರುವ ಪ್ಯಾಕ್‌ ಗೆ 10 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಗಟ್ಟಿಯಾಗಿರುವ ಬರ್ಕೆ ಹಲಸಿನ ಹಣ್ಣಿಗೆ ಹೆಚ್ಚು ಬೇಡಿಕೆ ಇರುವುದು ಎನ್ನುತ್ತಾರೆ ವ್ಯಾಪಾರಸ್ಥರು.

ಬಿಡಿಸಿದ ತೊಳೆಗೆ ಬೇಡಿಕೆ ಹೆಚ್ಚು
ಉತ್ತಮ ಹಣ್ಣನ್ನು ಜನತೆ ಇಷ್ಟಪಟ್ಟು ಖರೀದಿಸುತ್ತಾರೆ. ಹೊರ ಜಿಲ್ಲೆಗಳ ಜನತೆ ದಾರಿಯಲ್ಲಿ ಆಗಮಿಸುವಾಗ ವಾಹನ ನಿಲ್ಲಿಸಿ ಖರೀದಿಸುತ್ತಾರೆ. ಊರಿನವರೂ ಹೆಚ್ಚಿನ ಖರೀದಿ ಮಾಡುತ್ತಾರೆ. ಹಣ್ಣಿನ ತೊಳೆ ಬಿಡಿಸಿ ಮಾರುವುದರಿಂದ ಬೇಡಿಕೆ ಹೆಚ್ಚುತ್ತದೆ.
– ಮೀನಾಕ್ಷಿ, ಹಲಸು ಮಾರಾಟಗಾರರು

Advertisement

Udayavani is now on Telegram. Click here to join our channel and stay updated with the latest news.

Next