Advertisement
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರ್ಕಾರದ ಪರ ಉತ್ತರ ನೀಡುತ್ತಿದ್ದ ಮಾಧುಸ್ವಾಮಿ, ಸರ್ಕಾರದ ಸಾಧನೆ ವಿವರಿಸುತ್ತ ಎದುರಿಸಿದ ಸವಾಲುಗಳನ್ನು ಹೇಳುತ್ತಿದ್ದರು. ಆಗ “ಸರ್ಕಾರ ಮ್ಯಾನೇಜ್ ಮಾಡ್ತಿದಿರಾ ಬಿಡಿ’ ಎಂದು ಮಾಧುಸ್ವಾಮಿ ಹಿಂದೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಕಾಲೆಳೆದರು.
ತಮ್ಮ ಮಾತಿಗೆ ಅಡ್ಡಿಪಡಿಸಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಗ್ಗೆ ಅನುಕಂಪದ ಮಾತನಾಡಿದ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರಿಗೆ ತಿರುಗೇಟು ನೀಡಿದ ಸಚಿವ ಮಾಧುಸ್ವಾಮಿ, ಯಡಿಯೂರಪ್ಪ ಬಗ್ಗೆ ಮಾತನಾಡಲು ನೀನ್ಯಾರಪ್ಪ. ಯಡಿಯೂರಪ್ಪರ ಬಗ್ಗೆ ಅಷ್ಟೊಂದು ಕನಿಕರ ಇದ್ದರೆ ಬಾ ನಮ್ಮ ಕಡೆ ಬಂದು ಅವರ ಸೇವೆ ಮಾಡು ಎಂದು ಬಿಜೆಪಿಗೆ ಕರೆದರು. ಯಡಿಯೂರಪ್ಪರಿಗೆ ಸೇವೆ ಮಾಡಲು ಬಿಜೆಪಿಯಲ್ಲೇ ಸಾಕಷ್ಟು ಜನ ಇದ್ದಾರೆ. ಅವರನ್ನಾéಕೇ ಕರಿತಿರಿ ಬಿಡಿ ಎಂದು ಹರಿಪ್ರಸಾದ್ ಕಾಲೆಳೆದರು.
Related Articles
ಇದೇ ವೇಳೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತಿಗಿಳಿದು, ಮಾಧುಸ್ವಾಮಿಯವರು ಮಾತನಾಡುವಾಗಿ ನಮ್ಮ ನಾಯಕ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡದೇ ಮೋಸ ಮಾಡಿದರು ಎಂದಿದ್ದಾರೆ. ಕುಮಾರಸ್ವಾಮಿ ಇಲ್ಲದಿರುತ್ತಿದ್ದರೆ ಬಿಎಸ್‌ವೈ ನಾಲ್ಕು ಬಾರಿ ಸಿಎಂ ಆಗುತ್ತಿರಲಿಲ್ಲ. ಮಾಧುಸ್ವಾಮಿ ಇಂದು ಕಾನೂನು ಸಚಿವರಾಗಿಯೂ ಇರ್ತಿರಲಿಲ್ಲ, ಉಳಿದ ಮಂತ್ರಿಗಳಿಗೆ ಖಾತೆಗಳೇನು ಎಂದು ಗೊತ್ತಾಗುತ್ತಿರಲಿಲ್ಲ. ಇಂದು ಬಿಜೆಪಿ ಅಧಿಕಾರದಲ್ಲಿದೆ ಎಂದಾದರೆ ಅದಕ್ಕೆ ಕುಮಾರಸ್ವಾಮಿ ಕಾರಣ ಎಂದರು. 20:20 ಸರ್ಕಾರದಲ್ಲಿ ಬಿಜೆಪಿಗೆ ಯಾಕೆ ಅಧಿಕಾರ ಬಿಟ್ಟುಕೊಟ್ಟಿಲ್ಲ ಎಂಬುದು ಇನ್ನೂವರೆಗೆ ಯಕ್ಷಪ್ರಶ್ನೆಯಾಗಿದೆ. ಮರಿತಿಬ್ಬೇಗೌಡ ನಮ್ಮ ಪರ ಮಾತನಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಮಾಧುಸ್ವಾಮಿ ಕುಟುಕಿದರು. ಮರಿತಿಬ್ಬೇಗೌಡರಿಗೆ ಕುಮಾರಸ್ವಾಮಿ ಈಗಲೂ ನಾಯಕರಾ? ಎಂದು ಕೆಲ ಬಿಜೆಪಿ ಸದಸ್ಯರು ಉದ್ಘಾರ ಹಾಕಿದರು.
Advertisement