Advertisement

ಸಹಾಯವಾಣಿಯಲ್ಲಿ ಕೆಲಸಕ್ಕಿಳಿದ ಮಹಿಳಾ ಫ‌ುಟ್‌ಬಾಲ್‌ ಕೋಚ್‌

01:12 AM Apr 17, 2020 | Sriram |

ಹೊಸದಿಲ್ಲಿ: ಭಾರತ ಮಹಿಳಾ ಫ‌ುಟ್‌ಬಾಲ್‌ ಲೀಗ್‌ ವಿಜೇತ ಗೋಕುಲಂ ಕೇರಳ ಎಫ್ಸಿ ತಂಡದ ಕೋಚ್‌ ಪಿ.ವಿ.ಪ್ರಿಯಾ ಕೂಡ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಕೇರಳದ ಕಣ್ಣೂರಿನಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ, ಇವರೊಂದಿಗೆ ಹಲವಾರು ಆ್ಯತ್ಲೀಟ್‌ಗಳು ಕೂಡ ಕೈ ಜೋಡಿಸಿದ್ದಾರೆ. ಆಹಾರ ಹಾಗೂ ಔಷದ ಪೂರೈಕೆಗಳ ಸಹಾಯವಾಣಿಯಲ್ಲಿ ಇವರೆಲ್ಲ ಮಹತ್ವದ ಕೆಲಸ ನಿರ್ವಹಿಸಲಿದ್ದಾರೆ.

Advertisement

ಇತ್ತೀಚೆಗೆ ಭಾರತ ಫ‌ುಟ್‌ಬಾಲ್‌ ಆಟಗಾರ ವಿನೀತ್‌ ಕಣ್ಣೂರಿನ ಸಹಾಯವಾಣಿಯಲ್ಲಿ ಕೆಲಸ ಮಾಡಿ ದ್ದನ್ನು ಸ್ಮರಿಸಬಹುದು. ಇದೀಗ ಪ್ರಿಯಾ ಕೂಡ ಅಲ್ಲೆ ಕೆಲಸ ನಡೆಸುತ್ತಿರುವುದು ವಿಶೇಷ. ಲಾಕ್‌ಡೌನ್‌ ಅಂತ್ಯವಾಗುವ ತನಕ ಇಬ್ಬರೂ ಅಲ್ಲೇ ಕೆಲಸ ನಿರ್ವಹಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next