Advertisement

ದಂತದ ಅಸ್ತಿಪಂಜರ ಆಕರ್ಷಣೆ

07:55 AM Aug 07, 2017 | Harsha Rao |

ತಿರುವನಂತಪುರಂ: ಶತಮಾನ ಹಿಂದಿನ ಮಾತು, ಆಗಿನ್ನೂ ಪಾಶ್ಚಾತ್ಯ ವೈದ್ಯ ಪದ್ಧತಿ ಭಾರತದಲ್ಲಿ ಜನಪ್ರಿಯವಾಗಿರಲಿಲ್ಲ. ಆಗ ತಿರುವಾಂಕೂರ್‌ನ ರಾಜನೊಬ್ಬ ಮನುಷ್ಯನ ಅಂಗ ರಚನೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ದಂತದ ಅಸ್ತಿಪಂಜರ ಮಾಡಿಸಿದ್ದ. 1853ರ ಅವಧಿಯಲ್ಲಿ ರೂಪಿಸಿರುವ ಈ ಅಸ್ತಿಪಂಜರ, ನಿಜವಾದ ಅಸ್ತಿ ಪಂಜರವನ್ನು ನಾಚಿಸುವಂತಿದ್ದು, ಪ್ರಸ್ತುತ ತಿರುವನಂತಪುರದ ಪ್ರಾಣಿ ಸಂಗ್ರಹಾಲಯ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿದೆ.

Advertisement

ಆಗೆಲ್ಲಾ ಮೃತ ದೇಹವನ್ನಾಗಲಿ, ಅಸ್ತಿ ಯನ್ನಾಗಲೀ ಮುಟ್ಟುವುದನ್ನು ಸಮಾಜ ಒಪ್ಪುತ್ತಿರಲಿಲ್ಲ. ಹೀಗಾಗಿ ಸ್ಥಳೀಯ ಕುಶಲ ಕರ್ಮಿಯೊಬ್ಬನಿಂದ ದಂತಗಳನ್ನು ಬಳಸಿ ಅಸ್ತಿಪಂಜರದ ತದ್ರೂಪ ಮಾಡಿಸಿಕೊಂಡ ದೊರೆ ಉತ್ರಮ್‌ ತಿರುನಾಳ್‌ ಮಾರ್ತಾಂಡ ವರ್ಮ, ಅಂಗರಚನೆ ಶಾಸ್ತ್ರ ಅಧ್ಯಯನಕ್ಕೆ ಅದನ್ನು ಬಳಸಿಕೊಂಡಿದ್ದ ಎಂದು ದಾಖಲೆ ಗಳು ಹೇಳುತ್ತವೆ. ಆದರೆ ಈಗ ಇತಿಹಾಸ ಕಾರರು ಹಾಗೂ ತಜ್ಞರು ರಾಜನ ಮೂಲ ಬಿಟ್ಟು ಅಸ್ತಿಪಂಜರ ರೂಪಿಸಿದ ಕುಶಲಕರ್ಮಿಯ ಸುಳಿವೇನಾದರೂ ಸಿಗುತ್ತದಾ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಮೂಳೆಗಳ ಗಾತ್ರ, ಆಕಾರ ಸೇರಿ ಒಂದೊಂದು ಗೆರೆ ಕೂಡ ನೈಜ ಅಸ್ತಿಪಂಜರವನ್ನೇ ಹೋಲುವಂತೆ ರೂಪಿಸಿದ ಕಲಾವಿದ ಯಾರಿರಬ ಹುದು ಎಂಬ ಕುತೂಹಲ ಮನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next