Advertisement

ಇವಿಎಂ ವಿವಾದ: ಕೇಂದ್ರ, ಆಯೋಗಕ್ಕೆ ಸುಪ್ರೀಂ ನೋಟಿಸ್‌

03:50 AM Apr 14, 2017 | Team Udayavani |

ನವದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ತಿರುಚುವ ವಿವಾದಕ್ಕೆ ಒಳಗಾಗಿರುವ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಮತ ದೃಢೀಕರಣ ವ್ಯವಸ್ಥೆ (ವಿವಿಪ್ಯಾಟ್‌) ಇಲ್ಲದೆಯೇ ಬಳಕೆ ಮಾಡಲು ಸಾಧ್ಯವಿಲ್ಲವೇ ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಜತೆಗೆ ಕೇಂದ್ರ ಸರ್ಕಾರ, ಕೇಂದ್ರ ಚುನಾವಣಾ ಆಯೋಗಕ್ಕೆ ಗುರುವಾರ ನೋಟಿಸ್‌ ಜಾರಿ ಮಾಡಿದೆ. ಬಿಎಸ್‌ಪಿ ಪರವಾಗಿ ವಾದ ಮಂಡಿಸಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಧಿಬರಂ ಮತದೃಢೀಧಿಕರಣ ವ್ಯವಸ್ಥೆ ಇಲ್ಲದೆ ಮತಗಟ್ಟೆ ಅಧಿಕಾರಿಗಳ ಮುಂದೆ ಇವಿಎಂಗಳ ಪ್ರಾತ್ಯಕ್ಷಿಕೆ ಸಂಶಯ ಮೂಡಿಸುತ್ತದೆ. ಇವಿಎಂಗಳ ಹಾರ್ಡ್‌ಧಿವೇರ್‌ ಮತ್ತು ಸಾಫ್ಟ್ಧಿವೇರ್‌ಗಳನ್ನು ತಿರುಚಲು ಸಾಧ್ಯಧಿವಿದೆ ಎಂಬ ಗುಮಾನಿಗಳ ಹಿನ್ನೆಲೆಯಲ್ಲಿ ಮತಪತ್ರಗಳ ಮೂಲಕವೂ ಮತದಾನದ ವ್ಯವಸ್ಥೆ ಇರಬೇಕೆಂದು ಪ್ರತಿಪಾದಿಸಿದರು. ಇದೇ ವೇಳೆ ಉ.ಪ್ರ.ದಲ್ಲಿ ಶೀಘ್ರವೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಮಾದರಿ ಇವಿಎಂ ಬಳಕೆಗೆ ಅನುಮತಿ ನೀಡಿ ಇಲ್ಲದಿದ್ದರೆ, ಮತ ಪತ್ರಗಳ ಬಳಕೆಗೆ ಅವಕಾಶ ನೀಡಿ ಎಂದು ರಾಜ್ಯ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

Advertisement

ಇವಿಎಂಗಳನ್ನು ಹ್ಯಾಕ್‌ ಮಾಡುವ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಹೇಳಿಕೆ ಏಕೆ ನೀಡುತ್ತಿಲ್ಲ. ಎಲ್ಲವೂ ಮೂಲಗಳು ತಿಳಿಸಿವೆ ಎನ್ನಲಾಗುತ್ತಿದೆ. ಅಥವಾ ಇದೂ ಒಂದು ನಾಟಕವೇ?
ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next