Advertisement

ಮುಸ್ಲಿಂ ಲೀಗ್ ನಾಯಕ ಸೈಯದ್ ಹೈದರಾಲಿ ಶಿಹಾಬ್ ತಂಗಳ್ ನಿಧನ

03:38 PM Mar 06, 2022 | Team Udayavani |

ಕೊಚ್ಚಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ರಾಜ್ಯಾಧ್ಯಕ್ಷ ಸೈಯದ್ ಹೈದರಾಲಿ ಶಿಹಾಬ್ ತಂಗಳ್ ಅವರು ಇಲ್ಲಿನ ಅಂಗಮಾಲಿಯ ಲಿಟಲ್ ಫ್ಲವರ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

Advertisement

ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ತಂಗಳ್ ಅವರು ಸಮಸ್ತ ಕೇರಳ ಸುನ್ನಿ ಅಸೋಸಿಯೇಷನ್ ಜಮಿಯ್ಯತುಲ್ ಯು ಇಕೆ ಬಣದ ಉಪಾಧ್ಯಕ್ಷರೂ ಆಗಿದ್ದಾರೆ. ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು, ತಂಗಳ್ ಅವರನ್ನು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನ ಪ್ರಬಲ ಜಾತ್ಯತೀತ ಧ್ವನಿ ಎಂದು ಬಣ್ಣಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ರಾಜ್ಯ ಸಚಿವರು ಮತ್ತು ಇತರ ಪ್ರಮುಖರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಂಗಳ್ ಅವರು ಮಲಪ್ಪುರಂ ಮತ್ತು ಮುಸ್ಲಿಂ ಲೀಗ್‌ನ ರಾಜ್ಯ ಘಟಕಗಳ ಅಧ್ಯಕ್ಷರಾಗಿ ರಾಜ್ಯದ ರಾಜಕೀಯದಲ್ಲಿ “ಸೌಮ್ಯ ಉಪಸ್ಥಿತಿ” ಹೊಂದಿದ್ದರು ಎಂದು ವಿಜಯನ್ ಹೇಳಿದ್ದಾರೆ.

ಅವರ ರಾಜಕಾರಣವು ಜಾತ್ಯತೀತ ಆದರ್ಶಗಳಿಗೆ ಒತ್ತು ನೀಡಿತ್ತು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಅವರು ಸೌಹಾರ್ದಯುತ ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಂಡಿದ್ದರು” ಎಂದು ವಿಜಯನ್ ಹೇಳಿದ್ದಾರೆ. ತಂಗಳ್ ಅವರು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನೇತೃತ್ವ ವಹಿಸಿದ್ದರು ಮತ್ತು ಸಹೋದರತ್ವ, ಜಾತ್ಯತೀತತೆ ಮತ್ತು ರಾಷ್ಟ್ರದ ಏಕತೆಗಾಗಿ ನಿಂತಿದ್ದಾರೆ ಎಂದು ಕೇರಳ ಕಾಂಗ್ರೆಸ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next