Advertisement

ಇದು ದುಡಿಮೆಯೆ ದೊಡ್ಡಪ್ಪ ಎನ್ನುವ ಕಾಲ: ಸ್ವ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ

03:20 PM Apr 28, 2022 | Team Udayavani |

ಹಾವೇರಿ: ಈಗ ಜ್ಞಾನದ ಶತಮಾನ, ಹೀಗೆ ಬದಲಾವಣೆ ಆಗುತ್ತಿದೆ.ದುಡ್ಡೆ ದೊಡ್ಡಪ್ಪ ಎನ್ನುವ ಕಾಲ ಇತ್ತು ಈಗ ಬದಲಾವಣೆ ಆಗಿದ್ದು, ದುಡಿಮೆಯೆ ದೊಡ್ಡಪ್ಪ ಎನ್ನುವಂತಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Advertisement

ಶಿಗ್ಗಾವಿ ತಾಲೂಕಿನ ಮುನವಳ್ಳಿಯಲ್ಲಿ ಗುರುವಾರ ಶಾಹಿ ಎಕ್ಸ್ ಪೋರ್ಟ್ ಪ್ರೈವೆಟ್ ಲಿಮಿಟೆಡ್ ಸಿದ್ಧ ಉಡುಪು ತಯಾರಿಕಾ ಘಟಕ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಈ ಭಾಗದಲ್ಲಿ ಗಾರ್ಮೆಂಟ್ ಉದ್ಯೋಗ ಬರಬೇಕು ಎನ್ನುವುದು ನನ್ನ ಬಹುದಿನದ ಕನಸಾಗಿತ್ತು. ಬಹಳ ಬದಲಾವಣೆ ಆಗುತ್ತಿದೆ. ಒಂದು ಕಾಲದಲ್ಲಿ ಭೂಮಿ ಇದ್ದವರು ದೊಡ್ಡವರಿದ್ದರು. ಮತ್ತೊಂದು ಕಾಲದಲ್ಲಿ ದುಡ್ಡು ಮತ್ತು ಉದ್ಯೋಗ ಮಾಡುವ ಶಕ್ತಿ ಇತ್ತು. ಆಗ ಬ್ರಿಟಿಷರು ಜಗತ್ತು ಆಳಿದರು ಎಂದರು.

ನನಗೆ ಕನಸಿದೆ ಶಿಗ್ಗಾವಿ ತಾಲೂಕು ದೇಶದಲ್ಲಿ ಗಾರ್ಮೆಂಟ್ಸ್ ಹಬ್ ಆಗಬೇಕು. ಬರುವ ಏಪ್ರಿಲ್, ಮೇ ಒಳಗೆ ಈ ಕ್ಷೇತ್ರದಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ನಂದಿನಿ ಕ್ಷೀರ ಬ್ಯಾಂಕ್ ಆರಂಭ ಮಾಡುತ್ತಿದ್ದೆವೆ.ಬರುವ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಬರಲಿದ್ದು,ಶಿಕ್ಷಣ ಸಂಸ್ಥೆಗಳಿಗೆ ಆಹ್ವಾನ ನೀಡಿದ್ದೆನೆ ಎಂದರು.

ಸಿಎಂ ಎದುರು ಕಣ್ಣೀರು

ಗರ್ಭಕೋಶ ಚಿಕಿತ್ಸೆಗೆ ಒಳಗಾಗಿ ಆರೋಗ್ಯ ಸಮಸ್ಯೆಗೆ ಸಿಲುಕಿರುವ ಮಹಿಳೆಯರು ಸಿಎಂ ಭೇಟಿ ಮಾಡಿ ಕಣ್ಣೀರು ಹಾಕಿದರು. ಪರಿಹಾರ ನೀಡುವಂತೆ ಸಿಎಂ ಎದುರು ಗೊಗೆರೆದರು. ಮಹಿಳೆಯರ ಮನವಿಗೆ ಸ್ಪಂದಿಸಿದ ಸಿಎಂ, ನ್ಯಾಯ ಹಾಗೂ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

Advertisement

ಈ ವೇಳೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next