Advertisement

ಈಗಲೂ ಮಾತಾಡ್ತೇವೆ. ಆದರೆ…

07:36 PM Nov 18, 2019 | mahesh |

ನಾನಿದ್ದೆ ನನ್ನ ಪಾಡಿಗೆ ಎಲ್ಲರಂತೆ; ಕನಸಿತ್ತು, ನಗುವಿತ್ತು, ಎಲ್ಲವೂ ಇತ್ತು. ಹತ್ತೂಂಬತ್ತು ವರ್ಷಗಳು ನಾನು ನಾನೇ ಆಗಿದ್ದೆ. ಇಂತಿದ್ದಾಗ, ಯಾವುದೇ ಸುಳಿವೇ ಕೊಡದೆ ನೀನೇಕೆ ಬಂದೆ? ಮೊದಲಿದ್ದ ನಗುವನ್ನು ಇಮ್ಮಡಿಗೊಳಿಸಲೋ? ಕನಸುಗಳಿಗೆ ಬಣ್ಣ ತುಂಬಲೋ ಅಥವಾ ನನ್ನನ್ನು ನಿನ್ನವಳಾಗಿಸಿಕೊಳ್ಳಲೋ? ನಿನ್ನ ಉದ್ದೇಶವೇನೇ ಇರಲಿ… ನೀ ನನ್ನ ಹೃದಯದೊಳ ಬಂದಾಯ್ತು, ಮುಂದೆ ಬರುವ ನನ್ನೆಲ್ಲಾ ನಾಳೆಗಳಿಗೆ ಮುನ್ನಡಿಯನ್ನೂ ಬರೆದಾಯ್ತು. ಇನ್ನೇನು ಬೇಕು ನನಗೆ? ನೀ ಜೊತೆಯಿದ್ದರೆ ಅಷ್ಟೇ ಸಾಕು.

Advertisement

ಮಟಮಟ ಮಧ್ಯಾಹ್ನದಲ್ಲಿ ಈ ರೀತಿಯೆಲ್ಲಾ ಬರೆಯೋವಾಗ ,ನನಗೂ breakup ಆಗಬಹುದು ಅನ್ನೋದನ್ನ ನಾನು ಊಹಿಸಿಯೂ ಇರಲಿಲ್ಲ!

ಆತ ನನ್ನ ದೂರದ ಸಂಬಂಧಿಕನೇ ಆಗಿದ್ದರು ನಮ್ಮಿಬ್ಬರಿಗೂ ಪರಿಚಯವಾಗಿದ್ದು ಮಾತ್ರ, ಫೇಸ್‌ಬುಕ್‌ನಲ್ಲಿ! ಮೊದ ಮೊದಲು ಊಟ ಆಯ್ತಾ, ತಿಂಡಿ ಆಯ್ತಾ ? ಅಷ್ಟೇ ವಿಚಾರಿಸುತ್ತಿದ್ವಿ. ನಂತರ ಹಾಗೇ ಮೊಬೈಲ್‌ ನಂಬರ್‌ ವಿನಿಮಯಮಾಡಿಕೊಂಡಿದ್ದಾಯ್ತು. ಕೆಲವೇ ದಿನಗಳ ನಂತರ, ದಿನವಿಡೀ ಚಾಟಿಂಗ್‌ ಮಾಡುವುದು ಇಬ್ಬರಿಗೂ ಫ‌ುಲ್‌ ಟೈಂ ಕೆಲಸವೇ ಆಯ್ತು.

ಇಬ್ಬರ ಇಷ್ಟ ಕಷ್ಟಗಳ ಬಗ್ಗೆ ಅದೆಷ್ಟೋ ಚರ್ಚೆಗಳು ನಡೆದವು. ಅಷ್ಟಾದ ಮೇಲೆ ಕೇಳಬೇಕೆ? ಪ್ರೇಮ ನಿವೇದನೆಯೂ ಆಗೋಯ್ತು. ಒಂದೆರಡು ವಾರ ಎಲ್ಲವೂ ಸರಿಯಾಗೇ ಇತ್ತು. ನಂತರ ಆತ ಮನೆಯವರನ್ನ ಒಪ್ಪಿಸುವುದು ಕಷ್ಟ , ಮನೆಯರ ಮಾತು ಮೀರಲು ನನಗಿಷ್ಟವಿಲ್ಲ ಎಂದ. ನಾನು ಆತನನ್ನ ಹೆಚ್ಚು ಒತ್ತಾಯ ಮಾಡಲಿಲ್ಲ! ಆಗಲೇ ಅವನು “ನೀನಿನ್ನೂ ಚಿಕ್ಕವಳು ಮೊದಲು ಡಿಗ್ರಿ ಮುಗಿಸು’ ಎಂದ. ಅದಕ್ಕೂ ಒಪ್ಪಿಕೊಂಡೆ. ಯಾಕೆಂದರೆ, ಅವನ ನಿರ್ಧಾರ ಎಂದಿಗೂ ಸರಿಯಾಗೇ ಇರುತ್ತದೆಯೆಂಬ ನಂಬಿಕೆ ನನ್ನದು. ನನಗಾಗಿದ್ದು ಕ್ರಶ್? ಲವ್ವಾ? ಅಂತಾ ತಿಳಿದುಕೊಳ್ಳವ ಮೊದಲೇ ಎಲ್ಲಾ ಮುಗಿದು ಹೋಗಿತ್ತು. ಇವೆಲ್ಲಾ ಆಗಿ ಬಹಳಷ್ಟು ದಿನಗಳು ಕಳೆದುಹೋದರೂ ನೆನಪುಗಳು ಮಾತ್ರ ಹಾಗೇ ಇವೆ. ನಾವಿಬ್ಬರೂ ಈಗಲೂ ಚಾಟ್‌ ಮಾಡುತ್ತೇವೆ. ಆದರೆ ಮೊದಲಿನಂತಲ್ಲ ಅಷ್ಟೆ.

ಸಿಂಧು ಹೆಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next