Advertisement
ಹೌದು, “ಲಿಪ್‌ಲಾಕ್ ದೊಡ್ಡ ವಿಷಯವೇ ಅಲ್ಲ, ಆ ಪದವನ್ನು ನಾನು ಇಷ್ಟಪಡುವುದೇ ಇಲ್ಲ’ ಎನ್ನುವ ವಿಜಯ್ ದೇವರಕೊಂಡ, ಹೀಗೆ ಹೇಳಿಕೊಂಡಿದ್ದು ಜು. 26 ರಂದು ತೆರೆಗೆ ಬರಲಿರುವ “ಡಿಯರ್ ಕಾಮ್ರೇಡ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. “ಡಿಯರ್ ಕಾಮ್ರೇಡ್’ ಚಿತ್ರದಲ್ಲೂ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ “ಲಿಪ್‌ಲಾಕ್’ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಟ್ರೇಲರ್ ಎಲ್ಲೆಡೆ ಸುದ್ದಿಯಾಗಿದ್ದು ಗೊತ್ತೇ ಇದೆ.
Related Articles
Advertisement
ಹೋರಾಟದ ಚಿತ್ರವಲ್ಲ: ಬಿಡುಗಡೆಗೆ ಸಿದ್ಧವಾಗಿರುವ “ಡಿಯರ್ ಕಾಮ್ರೇಡ್’ ಚಿತ್ರದ ಬಗ್ಗೆ ಮಾತನಾಡುವ ವಿಜಯ್, “ಇಲ್ಲಿ “ಕಾಮ್ರೇಡ್’ ಅಂದಾಕ್ಷಣ, ಎಲ್ಲರಿಗೂ ಪೊಲಿಟಿಕಲ್ ಸಿನಿಮಾ ಇರಬಹುದಾ, ಸ್ಟ್ರಗಲ್ ಇರುವಂತಹ ಕಥೆ ಇರಬಹುದಾ ಎಂಬ ಪ್ರಶ್ನೆ ಕಾಡುತ್ತೆ.
“ಕಾಮ್ರೇಡ್’ ಅನ್ನೋದು ಪ್ರೀತಿಗೆ, ಒಳ್ಳೆಯ ಉದ್ದೇಶಕ್ಕೆ, ಭಾವನೆ ಮತ್ತು ನೋವುಗಳಿಗೆ ಸ್ಪಂದಿಸುವ ರೂಪವದು. ಹಾಗಂತ, ಇಲ್ಲಿ ಯಾವುದೇ ಹೋರಾಟವಿಲ್ಲ, ಚಳವಳಿಯ ಸಿನಿಮಾನೂ ಅಲ್ಲ. “ಕಾಮ್ರೇಡ್’ ಒಂದು ಯೂಥ್‌ಫುಲ್ ಚಿತ್ರ. ಇದು ವಿದ್ಯಾರ್ಥಿ ನಾಯಕನ ಕಥೆ ಹೊಂದಿದೆ.
ಸಿನಿಮಾ ನೋಡಿದವರಿಗೆ “ಕಾಮ್ರೇಡ್’ ಶೀರ್ಷಿಕೆ ಪೂರಕ ಎನಿಸದೇ ಇರದು. “ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ಮುಖ್ಯವಾಗಿ ಪ್ರೀತಿಗೆ ಹೆಚ್ಚು ಒತ್ತು ಕೊಡಲಾಗಿದೆ. ಅದರ ಜೊತೆ ಜೊತೆಗೆ ಭಾವುಕತೆ, ಎಮೋಷನ್ಸ್‌ಗೂ ಅಷ್ಟೇ ಜಾಗವಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಎಲ್ಲರಿಗೂ ಕಾಡುವ ಕಥೆ ಇಲ್ಲಿದೆ’ ಎಂದರು.
ಚಿತ್ರ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಇನ್ನು, ಮುಂದಿನ ದಿನಗಳಲ್ಲಿ ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡುವ ಯೋಚನೆ ತಂಡಕ್ಕಿದೆ. ಆ ಪ್ರದೇಶಕ್ಕೆ ಈ ಕಥೆ ಹೊಂದಾಣಿಕೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ, ಸದ್ಯಕ್ಕೆ ನಾಲ್ಕು ಭಾಷೆಯಲ್ಲಿ ಚಿತ್ರ ತೆರೆಗೆ ಬರುತ್ತಿದೆ.
ಕನ್ನಡದಲ್ಲಿ ನನ್ನ ಪಾತ್ರಕ್ಕೆ ಕಲಾವಿದರೊಬ್ಬರು ಧ್ವನಿ ಕೊಟ್ಟಿದ್ದಾರೆ. ಕನ್ನಡ ಭಾಷೆ ಸ್ಪಷ್ಟವಾಗಿ ಬರಲ್ಲ. ಕನ್ನಡ ಕಲಿಯುತ್ತಿದ್ದೇನೆ. ಸದ್ಯಕ್ಕೆ ಒಂದೆರೆಡು ಪದಗಳು ಮಾತನಾಡಲು ಬರುತ್ತದೆ. ಮುಂದೆ ಕಲಿತು ಸ್ಪಷ್ಟವಾಗಿ ಮಾತಾಡ್ತೀನಿ. ಚಿತ್ರದಲ್ಲಿ ರೆಬೆಲ್ ಪಾತ್ರವಿದೆಯಾ ಎಂಬ ಪ್ರಶ್ನೆಗೆ ಚಿತ್ರದಲ್ಲೇ ಉತ್ತರ ಸಿಗಲಿದೆ.
ಯಶ್ ತುಂಬಾನೇ ಸ್ಟ್ರಗಲ್ ಮಾಡಿದ್ದಾರೆ…: ನಟ ಯಶ್ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, “ಯಶ್ ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರು ಸಾಕಷ್ಟು ಸ್ಟ್ರಗಲ್ ಮಾಡಿ ಈ ಹಂತ ತಲುಪಿದ್ದಾರೆ. ನನ್ನ ರೀತಿಯೇ ಅವರೂ ಕಷ್ಟಪಟ್ಟಿದ್ದಾರೆ. ನಾನೂ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡು ಬಂದವನು.
ಅವರು ಸಹ ಹಾಗೆಯೇ ಬೆಳೆದು ಬಂದವರು. ಹಾಗಾಗಿ ಅವರು ನನಗೆ ಇಷ್ಟ ಆಗ್ತಾರೆ. ಈ ಹಿಂದೆ ನನ್ನ ಅಭಿನಯದ “ಅರ್ಜುನ್ ರೆಡ್ಡಿ’ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರು ಕಂಟೆಂಟ್ ಮೇಲೆ ನಂಬಿಕೆ ಇಟ್ಟು “ಕೆಜಿಎಫ್’ ಚಿತ್ರ ಮಾಡಿದ್ದಕ್ಕೆ ಇಂದು ದೊಡ್ಡ ಸಕ್ಸಸ್ ಕಂಡಿದ್ದಾರೆ. ನಾನೂ ಸಹ ಈ “ಡಿಯರ್ ಕಾಮ್ರೇಡ್’ ಚಿತ್ರದ ಕಂಟೆಂಟ್ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದರು.
ಆ ಸೀನ್ ಬಗ್ಗೆ ಬೇರೆ ರೀತಿ ನೋಡೋದ್ಯಾಕೆ?: ರಶ್ಮಿಕಾ ಮಂದಣ್ಣ ಇಲ್ಲಿ ಕ್ರಿಕೆಟರ್ ಪಾತ್ರ ಮಾಡಿದ್ದಾರಂತೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಆ ಬಗ್ಗೆ ಹೇಳುವ ರಶ್ಮಿಕಾ, “ಕನ್ನಡದಲ್ಲಿ ನನ್ನ ಫ್ಯಾನ್ಸ್‌ಗೆ ನನ್ನ ಧ್ವನಿ ಇಷ್ಟ. ಹಾಗಾಗಿ, ನಾನೇ ಈ ಚಿತ್ರಕ್ಕೆ ಡಬ್ ಮಾಡಿದ್ದೇನೆ.
ಕನ್ನಡದಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿ ಇದೆ. ಕನ್ನಡಿಗರಿಗೂ ಈ ಚಿತ್ರ ರುಚಿಸಲಿದೆ. ಕೇರಳ, ಹೈದರಾಬಾದ್, ಲಡಾಕ್‌ನಲ್ಲಿ ಚಿತ್ರೀಕರಣಗೊಂಡಿದೆ. ಇನ್ನು, ವಿಜಯ್ ದೇವರಕೊಂಡ ಅವರೊಂದಿಗಿನ ಕೆಲಸ ನನಗೆ ಕಂಫರ್ಟ್ ಎನಿಸಿದೆ.
ಪ್ರತಿ ಸೀನ್‌ನಲ್ಲೂ ಹೀಗೆ ಮಾಡೋಣ, ಹಾಗೆ ಮಾಡೋಣ ಅಂತ ಚರ್ಚಿಸಿ ಕೆಲಸ ಮಾಡಿದ್ದೇವೆ. ಇಲಿ ಟೆನ್ಸ್ ಎಮೋಷನ್ಸ್ ಇದೆ. ಲಿಪ್‌ಲಾಕ್ ಬಗ್ಗೆ ಯಾಕೆ ಅಷ್ಟೊಂದು ಸುದ್ದಿಯಾಯ್ತೋ ಗೊತ್ತಿಲ್ಲ. ಅದನ್ನು ಯಾಕೆ ಬೇರೆ ರೀತಿ ನೋಡುತ್ತಿದ್ದಾರೋ ಗೊತ್ತಿಲ್ಲ. ಅದು ಕಿಸ್ಸಿಂಗ್ ಅಷ್ಟೇ, ಲಿಪ್‌ಲಾಕ್ ಅಲ್ಲ’ ಎಂದಷ್ಟೇ ಹೇಳುವ ಮೂಲಕ ಸ್ಪಷ್ಟಪಡಿಸುತ್ತಾರೆ ರಶ್ಮಿಕಾ ಮಂದಣ್ಣ.