Advertisement

ಇದು ಇಂಗ್ಲೆಂಡ್‌ ತಂಡವಲ್ಲ, ರೆಸ್ಟ್‌ ಆಫ್ ದ ವರ್ಲ್ಡ್: ಗಾವಸ್ಕರ್‌ ಜೋಕ್‌

01:13 AM Jun 04, 2019 | Sriram |

ಲಂಡನ್‌: ಈಗ ವಿಶ್ವಕಪ್‌ನಲ್ಲಿ ಆಡುತ್ತಿರುವುದು ಇಂಗ್ಲೆಂಡ್‌ ತಂಡವಲ್ಲ, ಅದು ರೆಸ್ಟ್‌ ಆಫ್ ದ ವರ್ಲ್ಡ್ ಟೀಮ್‌ (ಶೇಷ ವಿಶ್ವ ತಂಡ) ಎಂಬುದಾಗಿ ಸುನೀಲ್‌ ಗಾವಸ್ಕರ್‌ ಜೋಕ್‌ ಮಾಡಿದ್ದಾರೆ.


Advertisement

ಕಾರಣ, ಈ ತಂಡದಲ್ಲಿ ಆಡುತ್ತಿರುವವರಲ್ಲಿ ಇಂಗ್ಲೆಂಡ್‌ನ‌ಲ್ಲಿ ಜನಿಸಿದವರ ಸಂಖ್ಯೆ ವಿರಳವಾಗಿರುವುದು. ಇಂಗ್ಲೆಂಡನ್ನು ಮೊದಲ ಬಾರಿಗೆ ಸತತ 2 ವಿಶ್ವಕಪ್‌ಗ್ಳಲ್ಲಿ ಮುನ್ನಡೆಸುತ್ತಿರುವ ಇಯಾನ್‌ ಮಾರ್ಗನ್‌ ಐರ್ಲೆಂಡ್‌ ಮೂಲದವರು. ಘಾತಕ ವೇಗಿ ಜೋಫ‌ ಆರ್ಚರ್‌ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ. ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಜನಿಸಿದ್ದು ನ್ಯೂಜಿಲ್ಯಾಂಡಿನಲ್ಲಾದರೆ, ಆರಂಭಕಾರ ಜಾಸನ್‌ ರಾಯ್‌ ಮೂಲತಃ ದಕ್ಷಿಣ ಆಫ್ರಿಕಾ ಆಟಗಾರ.

ಇದನ್ನು ಉಲ್ಲೇಖೀಸಿ ತಮಾಷೆ ಮಾಡಿದ ಗಾವಸ್ಕರ್‌, ಈ ರೆಸ್ಟ್‌ ಆಫ್ ದ ವರ್ಲ್ಡ್ ಟೀಮ್‌ ಜು. 14ರ ಲಾರ್ಡ್ಸ್‌ ಫೈನಲ್‌ನಲ್ಲಿ ಭಾರತವನ್ನು ಎದುರಿಸುವ ಸಾಧ್ಯತೆ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next