Advertisement

12ರ ಬಾಲೆಗೆ ಮಳೆ ತರಿಸೋ ಶಕ್ತಿ!

02:00 AM Jun 13, 2017 | Team Udayavani |

ಮಿದ್ರಾಂಡ್‌: ದಕ್ಷಿಣ ಆಫ್ರಿಕಾದ ಈಕೆಗೆ ಇನ್ನೂ 12ರ ವಯಸ್ಸು. ಅದಾಗಲೇ ಈಕೆಯನ್ನು ರಾಣಿ ಎಂದು ಬಾಲೊಬೆಡು ಸಮುದಾಯ ಪರಿಗಣಿಸಿದೆ. ಈಕೆಗೆ ಮಳೆ ತರಿಸುವ ಶಕ್ತಿ ಇದೆ ಎನ್ನುವುದೇ ವಿಶೇಷ! ಇವಳ ಹೆಸರು ಮಸಾಲಾನಬೊ ಮೋದ್‌ಜಡ್ಜಿ. ಡಾಕ್ಟರ್‌ ಆಗಬೇಕೆನ್ನುವ ಆಸೆ ಹೊಂದಿದ್ದಾಳೆ. 2005ರಲ್ಲಿ ಈಕೆಯ ತಾಯಿಯ ನಿಧನಾನಂತರ ಮಸಾಲಾನಬೊಳನ್ನು ರಾಣಿಯನ್ನಾಗಿ ಘೋಷಿಸಲಾಗಿದೆ. 18 ತುಂಬುತ್ತಿದ್ದಂತೆ ಆಕೆಗೆ ಪಟ್ಟ ಕಟ್ಟಲಾಗುತ್ತದೆ. ಬಾಲೊ ಬೆಡು ಆದಿವಾಸಿ ಸಮುದಾಯ ಮಹಿಳಾ ಪ್ರಧಾನ ವ್ಯವಸ್ಥೆ ಹೊಂದಿದೆ. ಸದ್ಯ ಮಸಾ ಲಾನಬೊ ಜೊಹಾನ್ಸ್‌ಬರ್ಗ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವರ ಸಮುದಾಯ ದ.ಆಫ್ರಿಕಾ ಸರಕಾರದೊಂದಿಗೆ ಉತ್ತಮ ಸಂಬಂಧ, ಪ್ರಭಾವ ಹೊಂದಿದೆಯಂತೆ.

Advertisement

ಮಳೆ ತರಿಸುವ ನಂಬಿಕೆ: ಬಾಲೊಬೆಡು ಸಮುದಾಯದಲ್ಲಿ ರಾಣಿಗೆ ಮಳೆ ತರಿಸುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ವಸಂತ ಕಾಲದ 5 ವಾರಾಂತ್ಯಗಳಲ್ಲಿ ಆಕೆ ಪೂಜೆ ನಡೆಸುತ್ತಾಳೆ. ಬಳಿಕ ತಡವಿಲ್ಲದಂತೆ ಮಳೆ ಸುರಿಯುತ್ತದೆ ಎಂಬ ನಂಬಿಕೆ ಈ ಸಮುದಾಯದ್ದು. ಇನ್ನೂ ಒಂದು ಅಚ್ಚರಿ ಎಂದರೆ ಈ ಸಮುದಾಯದ ರಾಣಿ ಎಷ್ಟಾದರೂ ಮಹಿಳೆಯನ್ನೇ ವಿವಾಹವಾಗುತ್ತಾಳೆ. ರಾಣಿಯ ಅಪ್ಪಣೆ ಮೇರೆಗೆ ಆಕೆ ಸಮುದಾಯದ ಇತರರಿಂದ ಮಕ್ಕಳನ್ನು ಪಡೆಯ ಬಹುದು. ಅವರನ್ನು ರಾಣಿಯ ಮಕ್ಕಳೆಂದೇ ಪರಿಗಣಿಸಲಾಗುತ್ತದೆ. ರಾಣಿಯೂ ಗುಪ್ತವಾಗಿ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ಮಕ್ಕಳನ್ನು ಪಡೆಯಬಹುದಂತೆ.

Advertisement

Udayavani is now on Telegram. Click here to join our channel and stay updated with the latest news.

Next