Advertisement

ಎಷ್ಟೇ ಬೆಲೆ ತೆತ್ತಾದರೂ ಆ ಕ್ಷಣ ಅಲ್ಲಿರುವೆ ಕೊಹ್ಲಿ!

06:25 PM Dec 17, 2020 | mahesh |

ಅಡಿಲೇಡ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಆ ಅಮೂಲ್ಯ ಕ್ಷಣದಲ್ಲಿ ತನ್ನ ಪತ್ನಿಯೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಬಳಿಕ ಕೊಹ್ಲಿ ತವರಿಗೆ ಮರಳಲಿದ್ದಾರೆ.

Advertisement

ಆಸೀಸ್‌ ಆಟಗಾರ ಸ್ಟೀವನ್‌ ಸ್ಮಿತ್‌ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ನನ್ನ ಮನಸ್ಸಿನಲ್ಲಿ ಸ್ಪಷ್ಟ ನಿರ್ಧಾರವಿದೆ. ದೇಶಕ್ಕಾಗಿ ಆಡಲು ನಾವು ಬದ್ಧವಾಗಿರುವಂತೆಯೇ ಇದು ಜೀವನದ ಬಹಳ ವಿಶೇಷವಾದ ಕ್ಷಣವಾಗಿದೆ. ಆದ್ದರಿಂದ ಜೀವನದ ಅಮೂಲ್ಯ ಸಂದರ್ಭದಲ್ಲಿ ನನ್ನ ಪತ್ನಿಯೊಂದಿಗೆ ಇರಲು ಬಯಸುತ್ತೇನೆ. ಇದಕ್ಕಿಂತ ದೊಡ್ಡ ಕ್ಷಣ ಮತ್ತೂಂದಿಲ್ಲ, ಯಾವುದೇ ಬೆಲೆ ತೆತ್ತಾದರೂ ಆ ಕ್ಷಣ ಪತ್ನಿ ಜತೆ ಇರಲು ಬಯಸುತ್ತೇನೆ ಕೊಹ್ಲಿ ಎಂದು ಹೇಳಿದರು.

ಬಾಲ್‌ ಟ್ಯಾಂಪರಿಂಗ್‌ ವಿಚಾರವಾಗಿ ಪಂದ್ಯದ ವೇಳೆ ಸ್ಮಿತ್‌ ವಿರುದ್ಧದ ಘೋಷಣೆಯ ಸಂದರ್ಭವನ್ನು ನೆನಪಿಸಿಕೊಂಡ ಕೊಹ್ಲಿ, ಆಟಗಾರರನ್ನು ವೈಯಕ್ತಿಕವಾಗಿ ಗುರಿಯಾಗಿಸುವುದು ಸರಿಯಲ್ಲ. ಜನರು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅದರಿಂದ ಕಲಿತುಕೊಳ್ಳುತ್ತಾರೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ನಾನು ಭಾವಿಸುವುದಾಗಿ ಕೊಹ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next