Advertisement
ರಾಶಿ ರಾಶಿ ಈರೋಳ್ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಬೇಸಗೆಯಿಂದ ತಾಳಿಕೊಳ್ಳಲಾಗದಷ್ಟು ಬೇಗೆ ಗೋಚರಿಸುತ್ತಿದೆ. ಇದರಿಂದ ದಣಿವಾರಿಸಲು ತಂಪು ಪಾನೀಯಗಳನ್ನು ಹೆಚ್ಚೆಚ್ಚು ಸೇವಿಸುವಂತಾಗಿದೆ. ಕಲ್ಲಂಗಡಿಯೂ ಬೇಡಿಕೆ ಕುದುರಿಸಿಕೊಂಡಿದೆ. ಈಗ ಇದರ ಜತೆಯಲ್ಲಿ ಈರೋಳ್ ಕೂಡಾ ಬೇಡಿಕೆಯನ್ನು ಪಡೆದುಕೊಂಡಿದೆ. ಕಾಸರಗೋಡು ನಗರದ ವಿವಿಧೆಡೆ ರಸ್ತೆ ಬದಿಗಳಲ್ಲಿ ಈರೋಳ್ ರಾಶಿ ಹಾಕಿ ಮಾರಾಟ ಬಿರುಸಿನಿಂದ ನಡೆಯುತ್ತಿದೆ.
ತಮಿಳುನಾಡಿನ ಮುರುಗನ್ ಕರ್ನಾಟಕದಿಂದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯಿಂದ ಈರೋಳ್ ಸಂಗ್ರಹಿಸಿ ಕಾಸರಗೋಡಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಈ ವ್ಯಕ್ತಿ ಭಾಷಾ ಸಾಮರಸ್ಯದ ದ್ಯೋತಕವಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ಭಾಷೆಗಳನ್ನು ಸಲೀಸಾಗಿ ಮಾತನಾಡಬಲ್ಲ ಮುರುಗನ್ ಅವರನ್ನು ಒಂದರ್ಥದಲ್ಲಿ ಭಾಷಾ ಮೈತ್ರಿಯ ಪ್ರತಿನಿಧಿ ಎಂಬಂತೆಯೂ ಕಾಣಬಹುದು. ಈರೋಳು ಒಂದಕ್ಕೆ ರೂ. 10-20ರ ವರೆಗೆ ವಸೂಲಿ ಮಾಡುತ್ತಿದ್ದು, ಸಾಕಷ್ಟು ಬೇಡಿಕೆ ಇದೆ ಎಂದು ಮುರುಗನ್ ಹೇಳುತ್ತಿದ್ದಾರೆ. ನಮ್ಮ ಕರಾವಳಿ ಪ್ರದೇಶದಲ್ಲಿ ಹಿಂದೆ ಕತ್ತೆತ್ತಿ ಎತ್ತ ನೋಡಿದರೂ ತಾಳೆ ಮರಗಳ ಸಾಲುಗಳು ಬಾನೆತ್ತರ ಚಾಚಿಕೊಂಡಿರುವುದನ್ನು ಕಾಣ ಬಹುದಿತ್ತು. ಆದರೆ ಇಂದು ಬಹುತೇಕ ಕಡೆಗಳಲ್ಲಿ ತಾಳೆ ಮರಗಳು ಅವಸಾನದ ಹಂತದಲ್ಲಿವೆ ಅಥವಾ ಅವಸಾನಗೊಂಡಿವೆಯೆಂದೇ ಹೇಳಬೇಕು.
Related Articles
Advertisement
ಸ್ವಾತಂತ್ರಾನಂತರ ಉಂಟಾದ ಆಹಾರ ಕ್ರಾಂತಿಯ ವೇಳೆ ತಾಳೆ ಉತ್ಪನ್ನಗಳಿಂದ ತೈಲ ತೆಗೆದು ಬಳಸುವ ದೊಡ್ಡ ಕ್ರಾಂತಿಯೇ ನಡೆಯಿತು. ಆದರೆ ನಮ್ಮ ಕರಾವಳಿ ಭಾಗಗಳಲ್ಲಿ ತೈಲಕ್ಕೆ ಅನುಗುಣವಾದ ಮಟ್ಟದ ತಾಳೆ ಉತ್ಪನ್ನಗಳು ಕಂಡುಬಾರದ ಕಾರಣ ನಮ್ಮಲ್ಲಿನ ತಾಳೆಗೆ ಮಹತ್ವವಿಲ್ಲದಾಗಿ ಹಿಂದೆ ಸರಿಯುವಂತಾಯಿತು.
ತಾಳೆ ಮರ ತೀವ್ರ ಗಟ್ಟಿ ಸ್ವಭಾವದವು. ಆದ್ದರಿಂದ ನಮ್ಮ ಹಿರಿಯರು ಮನೆ, ಕೊಟ್ಟಿಗೆ ಸಹಿತ ವಿವಿಧ ಪೀಠೊಪಕರಣಗಳ ತಯಾರಿಗೆ ತಾಳೆ ಮರವನ್ನು ಬಳಸುತ್ತಿದ್ದರು. ಆದರೆ ಇಂದು ಕಂಡುಬರುತ್ತಿಲ್ಲ. ನೇರವಾಗಿ ಸ್ಥೂಲ ರೂಪದಲ್ಲಿ ಬೆಳೆಯುವುದರಿಂದ ತಾಳೆ ಮರಗಳ ಬಳಕೆ ಹಿಂದಿನ ಮನೆ ನಿರ್ಮಾಣಗಳಲ್ಲಿ ಅನುಕೂಲಕರವಾಗಿತ್ತು. ಇಂದು ತಾರಸಿಯ ಕಾರುಬಾರಿನ ನಡುವೆ ತಾಳೆ ಮರಗಳ ಬಳಕೆ ಅರಿವಿಲ್ಲದಾಗಿದೆ. ಮಳೆ ನೀರಿನ ಕೊರೆತ ತಡೆಯುವಲ್ಲಿ ಮತ್ತು ನೀರಿಂಗಿಸುವಿಕೆಯಲ್ಲಿ ತಾಳೆ ಮರಗಳು ಮಹತ್ವ ಪಡೆದಿವೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ. ಜತೆಗೆ ನೆಟ್ಟು ಬೆಳೆಸುವ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ.
ಅವನತಿಯ ಹಂತದಲ್ಲಿ ಮಳೆ ನೀರಿನ ಕೊರೆತ ತಡೆಯುವಲ್ಲಿ ಮತ್ತು ನೀರಿಂಗಿಸುವಿಕೆಯಲ್ಲಿ ತಾಳೆ ಮರಗಳು ಮಹತ್ವ ಪಡೆದಿವೆಯೆಂದು ಸಂಶೋಧನೆಗಳು ದೃಢಪಡಿಸಿವೆ. ಆದರೆ ತಾಳೆ ಮರಗಳು ಅವನತಿಯ ಹಂತದಲ್ಲಿರುವುದು ಮಾತ್ರ ವಿಪರ್ಯಾಸ. – ಪ್ರದೀಪ್ ಬೇಕಲ್