Advertisement
ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಐಟಿಐ ಕಾಲೇಜು ನಿರ್ಮಾಣವಾಗಲಿರುವುದು ಎಲ್ಲ ವಿದ್ಯಾರ್ಥಿಗಳಿಗೂ ಸಂತಸ ಮೂಡುವಂತಾಗಿದೆ. ಶಾಸಕ ದಿನಕರಶೆಟ್ಟಿ ನೇತೃತ್ವದಲ್ಲಿ ಜಿಪಂ ಸದಸ್ಯ ಗಜಾನನ ಪೈ, ಕೃಷಿ ಇಲಾಖೆ, ಪುರಸಭೆ, ಪಿಡಬ್ಲ್ಯುಡಿ ಅಧಿಕಾರಿಗಳ ತಂಡ ನಿವೇಶನವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೊಸ ಬಸ್ ನಿಲ್ದಾಣ ಹಿಂಭಾಗದಲ್ಲಿರುವ 4 ಎಕರೆ ವಿಶಾಲ ಪ್ರದೇಶವು ಕಾಲೇಜ್ ನಿರ್ಮಾಣಕ್ಕೆ ಪ್ರಶಸ್ತವಾಗಿದೆ ಎಂಬ ಅಭಿಪ್ರಾಯ ಎಲ್ಲ ಅಧಿಕಾರಿಗಳಿಂದ ವ್ಯಕ್ತವಾಯಿತು.
Related Articles
Advertisement
ಆದರೆ ಈ ಜಮೀನು ಮೂಲತಃ ಕೃಷಿ ಇಲಾಖೆಯದ್ದಾಗಿರುವುದರಿಂದ ಕೃಷಿ ಆಯಕ್ತರಿಗೆ ಅಭಿಪ್ರಾಯ ಕೇಳಲಾಗಿದೆ. ಕೃಷಿ ಆಯುಕ್ತರು ಕೂಡ ಇದಕ್ಕೆಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ, ಸರ್ಕಾರದ ಅನುಮೋದನೆಯೊಂದಿಗೆನಿಯಮಾನುಸಾರ ಜಮೀನನ್ನುಹಸ್ತಾಂತರಿಸಬಹುದು ಎಂದು ಕೃಷಿ ಜಂಟಿನಿರ್ದೇಶಕರು ತಿಳಿಸಿದ್ದಾರೆ. ಕಾಲೇಜ್ ಪ್ರಾಂಶುಪಾಲರು, ವಿದ್ಯಾರ್ಥಿಗಳು ಶಾಸಕರ ಶ್ರಮವನ್ನು ಶ್ಲಾಘಿ ಸುವ ಜೊತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಜಿಪಂ ಸದಸ್ಯ ಗಜಾನನ ಪೈ, ಪುರಸಭೆ
ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಐಟಿಐ ಕಾಲೇಜ್ ಪ್ರಾಂಶುಪಾಲ ಡಿ.ಟಿ. ನಾಯ್ಕ, ಕುಮಟಾ ಕೃಷಿ ಸಹಾಯಕ ನಿರ್ದೇಶಕಿ, ತಾಪಂ ಇಒ ಸಿ.ಟಿ. ನಾಯ್ಕ, ಪಿಡಬ್ಲ್ಯುಡಿ ಇಂಜಿನಿಯರ್ ಶಶಿಕಾಂತ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಬಿಜೆಪಿ ಪ್ರಮುಖರಾದ ಜಿ.ಎಸ್. ಗುನಗಾ, ಸುಧೀರ ಪಂಡಿತ, ವಿನಾಯಕ ನಾಯ್ಕ ಬಗ್ಗೊಣ ಇತರರು ಇದ್ದರು
ಸರ್ಕಾರಿ ಐಟಿಐ ಕಾಲೇಜ್‌ಗೆ ಧಾರೇಶ್ವರದ ಹರನೀರನ ಕಾಡುಪ್ರದೇಶದಲ್ಲಿ ಜಾಗ ನೀಡಲಾಗಿತ್ತು. ಆಪ್ರದೇಶವನ್ನು ಪರಿಶೀಲಿಸಿದ ನಾನು,ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಪ್ರದೇಶ ಸೂಕ್ತವಲ್ಲ ಎಂಬುದನ್ನುಅರಿತು ಪಟ್ಟಣದ ಹೊಸ ಬಸ್ ನಿಲ್ದಾಣಪಕ್ಕದಲ್ಲಿರುವ ಕೃಷಿ ಇಲಾಖೆ 4 ಎಕರೆಪ್ರದೇಶವನ್ನು ಸರ್ಕಾರ ಮಟ್ಟದಲ್ಲಿ ಶತಾಯಗತಾಯ ಪ್ರಯತ್ನ ನಡೆಸಿ ಐಟಿಐ ಕಾಲೇಜ್‌ಗೆ ಜಾಗ ಮಂಜೂರಿ ಮಾಡಿಸಿದ್ದೇನೆ. -ದಿನಕರ ಶೆಟ್ಟಿ, ಶಾಸಕರು