ಹನೂರು : ಪಟ್ಟಣದಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು ಬಿಜೆಪಿ ಮುಖಂಡ ನಿಶಾಂತ್ ಗೆ ಸೇರಿದ್ದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹುನೂರು ಪಟ್ಟಣದ ಮೈಸೂರು ಮಾರಮ್ಮನ ಗುಡಿ ದೇವಾಲಯದ ಬಿದಿಯಲ್ಲಿ ಅಂಗಡಿ ಮಳಿಗೆ ಒಂದನ್ನು ಪಡೆದಿದ್ದ ಬಿಜೆಪಿ ಮುಖಂಡ ನಿಶಾಂತ್ ಚುನಾವಣಾ ಸಮಯದಲ್ಲಿ ಹಂಚಿಕೆಗಾಗಿ ಹಲವು ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿ ನವೀನ್ ಮಠದ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ದಾಳಿ ವೇಳೆ 1,710 ಜೊತೆ ಶಾಲಾ ಮಕ್ಕಳ ಶೂಗಳು, 610 ಶಾಲಾ ಬ್ಯಾಗ್ ಗಳು, ಎರಡು ಚೀಲದಲ್ಲಿ ಕೆಂಪು ಬಣ್ಣದ ಟವಲ್ ಗಳು ಮತ್ತು 15 ಬೆಡ್ ಶೀಟ್ ಗಳು ದೊರೆತಿದೆ.
ಈ ಸಂಬಂಧ ಕಟ್ಟಡದ ಮಾಲೀಕರಿಂದ ಅಗತ್ಯ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಸಾಮಗ್ರಿಗಳನ್ನು ವಶಪಡಿಸಿಕೊಂಡು ಹನೂರು ಪೊಲೀಸರ ವಶಕ್ಕೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.